➤ ಭಾರತ ಮತ್ತು ಆಸಿಯಾನ್ (ASEAN) ರಾಷ್ಟ್ರಗಳ ನಡುವಿನ ಸಮುದ್ರ ಸಹಕಾರ ಮತ್ತು ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಫಿಲಿಪ್ಪಿನ್ಸ್‌ನ ಸುಬಿಕ್ ಬೇ (Subic Bay) ನಲ್ಲಿ 2ನೇ ಆಸಿಯಾನ್-ಭಾರತ ಸಮುದ್ರಾಭ್ಯಾಸ (ASEAN-India Maritime Exercise - AIME) ನೌಕಾ ಸಮರ ಅಭ್ಯಾಸ ಯಶಸ್ವಿಯಾಗಿ ಆಯೋಜನೆಗೊಂಡಿದೆ. ಭಾರತೀಯ ನೌಕಾಪಡೆ (Indian Navy) ಮತ್ತು ಫಿಲಿಪ್ಪಿನ್ಸ್ ನೌಕಾಪಡೆ ಜಂಟಿಯಾಗಿ ಈ ಅಭ್ಯಾಸವನ್ನು ಆಯೋಜಿಸಿದ್ದು, ಪ್ರಾದೇಶಿಕ ಸಮುದ್ರ ಭದ್ರತೆ ಹಾಗೂ ನೌಕಾ ಕಾರ್ಯಾಚರಣೆಗಳಲ್ಲಿ ಪರಸ್ಪರ ಹೊಂದಾಣಿಕೆ ಹೆಚ್ಚಿಸುವುದು ಇದರ ಪ್ರಮುಖ ಗುರಿಯಾಗಿದೆ.
➤ ಮುಖ್ಯ ನೌಕಾಯಾನ ಯುದ್ಧಹಡಗುಗಳು: ಈ ಜಂಟಿ ನೌಕಾ ಅಭ್ಯಾಸದಲ್ಲಿ ಭಾರತ ಹಾಗೂ ಆಸಿಯಾನ್ ಒಕ್ಕೂಟದ ಪ್ರಮುಖ ನೌಕಾಪಡೆ ಹಡಗುಗಳು ಪಾಲ್ಗೊಂಡಿದ್ದವು:
- ಭಾರತ: ಸ್ವದೇಶಿ ನಿರ್ಮಿತ ಸ್ಟೆಲ್ತ್ ಫ್ರಿಗೇಟ್ ಐಎನ್‌ಎಸ್ ಸಹ್ಯಾದ್ರಿ (INS Sahyadri) ಮತ್ತು ಗೈಡೆಡ್ ಮಿಸೈಲ್ ಕಾರ್ವೆಟ್ ಐಎನ್‌ಎಸ್ ಕುಲಿಶ್ (INS Kulish).
- ಫಿಲಿಪ್ಪಿನ್ಸ್: ಬಿಆರ್‌ಪಿ ಜೋಸ್ ರಿಜಾಲ್ (BRP Jose Rizal) ಮತ್ತು ಬಿಆರ್‌ಪಿ ಟಾರ್‌ಲ್ಯಾಕ್ (BRP Tarlac).
- ಸಿಂಗಾಪುರ: ಆರ್‌ಎಸ್‌ಎಸ್ ಜಸ್ಟಿಸ್ (RSS Justice).
➤ ನೌಕಾಭ್ಯಾಸದ ಪ್ರಮುಖ ಉದ್ದೇಶಗಳು:
- ಸಮುದ್ರ ಸುರಕ್ಷತೆ ಮತ್ತು ಹೊಂದಾಣಿಕೆ: (ASEAN) ಆಸಿಯಾನ್ ರಾಷ್ಟ್ರಗಳು ಹಾಗೂ ಭಾರತೀಯ ನೌಕಾಪಡೆಗಳ ನಡುವೆ ನೌಕಾ ಕಾರ್ಯಾಚರಣೆಯ ತಾಂತ್ರಿಕ ಸಹಕಾರ ಹೆಚ್ಚಿಸುವುದು.
- ಆಕ್ಟ್ ಈಸ್ಟ್ ನೀತಿ (Act East Policy): ಭಾರತದ 'ಆಕ್ಟ್ ಈಸ್ಟ್' ನೀತಿಗೆ ಅನುಗುಣವಾಗಿ ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವುದು.
- 'ಮಹಾಸಾಗರ' (MAHASAGAR) ದೂರದೃಷ್ಟಿ: ಪ್ರದೇಶದಲ್ಲಿ ಸರ್ವರ ಸುರಕ್ಷತೆ ಮತ್ತು ಜಂಟಿ ಅಭಿವೃದ್ಧಿಗಾಗಿ ಭಾರತ ಪ್ರತಿಪಾದಿಸುವ MAHASAGAR (Mutual and Holistic Advancement for Security and Growth Across Regions) ತತ್ವವನ್ನು ಬಲಪಡಿಸುವುದು.
ಬುಧವಾರ, 30 ಸೆಪ್ಟೆಂಬರ್ 2026
10:17 ಪೂರ್ವಾಹ್ನ
Daily PDF
2ನೇ ಆಸಿಯಾನ್-ಭಾರತ ಸಮುದ್ರಾಭ್ಯಾಸ (AIME): ಫಿಲಿಪ್ಪಿನ್ಸ್ನಲ್ಲಿ ಐಎನ್‌ಎಸ್ ಸಹ್ಯಾದ್ರಿ, ಐಎನ್‌ಎಸ್ ಕುಲಿಶ್ ಭಾಗಿ
Authored by:
Yallamma G