* ಮೀನುಗಳ ಉತ್ಪತ್ತಿಗೆ ಪೂರಕವಾಗಿ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ಸಮುದ್ರದಲ್ಲಿ ಕೃತಕ ಬಂಡೆಗಳ ಸ್ಥಾಪಿಸುವ ಯೋಜನೆಗೆ ಮಾರ್ಚ್ 9 ರಂದು ಚಾಲನೆ ನೀಡಲಾಗಿದೆ.
* ಮೀನುಗಾರಿಕೆ ನಡೆಸುವವರಿಗೆ ಬೆಳಕಿನ ಮೀನುಗಾರಿಕೆ, ಬುಲ್ ಟ್ರಾಲ್ ಸೇರಿ ಅವೈಜ್ಞಾನಿಕ ಪದ್ಧತಿಯು ಮೀನುಗಾರಿಕೆಯಿಂದ ಸಾಂಪ್ರದಾಯಿಕ ರೀತಿಗೆ ಮೀನು ಸಿಗುತ್ತಿಲ್ಲ.
* ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಮೀನುಗಾರರ ಅನುಕೂಲಕ್ಕೆ ಮೀನುಗಾರಿಕೆಯ ಇಲಾಖೆಯು ಉತ್ತರ ಕನ್ನಡ ಜಿಲ್ಲೆಯ 25 ಕಡೆ ಮತ್ತು ಉಡುಪಿಯ 31 ಕಡೆ ಸೇರಿ ಒಟ್ಟು 56 ಸ್ಥಳಗಳಲ್ಲಿ 'ಕೃತಕ ಬಂಡೆ'ಗಳನ್ನು ಸ್ಥಾಪಿಸುವ ಯೋಜನೆ ಮುಖಾಂತರ ಮೀನು ಸಂತತಿ ಹೆಚ್ಚಿಸುವ ಗುರಿಯಾಗಿದೆ.
* ಮೀನುಗಾರಿಕೆ ನಡೆಯುವ ಸ್ಥಳದಲ್ಲಿ₹17 ಕೋಟಿ ವೆಚ್ಚದಲ್ಲಿ ಸಮುದ್ರದ ದಡದಿಂದ 4 ರಿಂದ 5 ನಾಟಿಕಲ್ ಮೈಲು ದೂರದಲ್ಲಿ ಬಂಡೆಗಳನ್ನು ನಿರ್ಮಿಸಲಾಗುತ್ತದೆ.
* ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿಪಿನ್ ಬೋಪಣ್ಣ ಅವರು ಭಟ್ಕಳದ ಮುರ್ಡೇಶ್ವರದಲ್ಲಿ ಬಂಡೆಗಳನ್ನು ನಿರ್ಮಿಸಲಾಗಿದೆ ಎಂದು ಪ್ರತಿ ಬಂಡೆ ಸರಾಸರಿ 400 ರಿಂದ 500 ಕೆಜಿ ತೂಕವಿದ್ದು ಕ್ರೇನ್ ನೆರವಿನೊಂದಿಗೆ ಮರಳಿನ ತಳಪಾಯವಿರುವ ಕಡೆ ಬಿಡಲಾಗುತ್ತದೆ' ಎಂದು ತಿಳಿಸಿದರು.
* ಮೀನಿನ ಸಂತತಿಗಳ ಉಳಿವಿಗೆ ಕೃತಕ ಬಂಡೆಗಳ ಸ್ಥಾಪನೆ ಸಹಕಾರಿ ಆಗಲಿದೆ.
* ಮೀನುಗಳು ಸಮುದ್ರದ ಆಳಕ್ಕೆ ಹೋದಂತೆ ಮೀನಿನ ಸಂತಾನೋತ್ಪತ್ತಿ ನಡೆಯುತ್ತದೆ. ಇದರಿಂದ ಮೀನುಗಾರರಿಗೂ ಅನುಕೂಲವಾಗುತ್ತದೆ ಎಂದು ಮೀನುಗಾರ ಮುಖಂಡ ದಿವಾಕರ ಮೊಗೇರ ಅವರು ತಿಳಿಸಿದರು.
ಶನಿವಾರ, 09 ಮಾರ್ಚ್ 2024
1:19 ಅಪರಾಹ್ನ
Daily PDF
ಅರಬ್ಬೀ ಸಮುದ್ರದಲ್ಲಿ ಕೃತಕ ಬಂಡೆಗಳನ್ನು ಸ್ಥಾಪಿಸುವ ಯೋಜನೆಗೆ ಚಾಲನೆ
Authored by:
Yallamma G