* ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ13,700 ಅಡಿ ಎತ್ತರದಲ್ಲಿ ನಿರ್ಮಿಸಿರುವ ಸೆಲಾ ಸುರಂಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು (ಶನಿವಾರ) ಮಾರ್ಚ್ 9 ರಂದು ಚಾಲನೆ ನೀಡಿದ್ದಾರೆ.
* ಜಗತ್ತಿನಲ್ಲೇ ಅತಿ ಉದ್ದದ ಅವಳಿ ಸುರಂಗ ಎಂಬ ಖ್ಯಾತಿಗೂ ಇದು ಭಾಜನವಾಗಿದೆ. 13,700 ಅಡಿ ಎತ್ತರದಲ್ಲಿ ನಿರ್ಮಿಸಿರುವ ಸುರಂಗಕ್ಕೆ 825 ಕೋಟಿ ರೂ.ವ್ಯಯಿಸಲಾಗಿದೆ. ಕೇಂದ್ರ ಸರ್ಕಾರದ ಗಡಿ ರಸ್ತೆ ಸಂಘಟನೆಯು ಸುರಂಗ ನಿರ್ಮಿಸಿದೆ.
* ಎರಡು ಸುರಂಗಗಳಿರುವ ಈ ಯೋಜನೆಯಲ್ಲಿ ಎಂಟು ಕಿಮೀಗೂ ಅಧಿಕ ಸಂಪರ್ಕ ರಸ್ತೆಗಳಿವೆ. ಒಟ್ಟಾರೆ ಉದ್ದ ಅಂದಾಜು 12 ಕಿಮೀ. ಮೊದಲ ಸುರಂಗವು ಸಿಂಗಲ್- ಟ್ಯೂಬ್ ಸುರಂಗವಾಗಿದೆ.
* 2019ರಲ್ಲಿ ಸೆಲಾ ಸುರಂಗಕ್ಕೆ ಚಾಲನೆ ನೀಡಲಾಗಿತ್ತು. ಸೆಲಾ ಸುರಂಗ ಯೋಜನೆ ಅಡಿಯಲ್ಲಿ ಎರಡು ಸುರಂಗಗಳನ್ನು ನಿರ್ಮಿಸಲಾಗಿದ್ದು, ಒಂದು ಸುರಂಗವು 980 ಮೀಟರ್ ಉದ್ದವಾಗಿದೆ. ಮತ್ತೊಂದು ಸುರಂಗವು 1,550 ಮೀಟರ್ ಉದ್ದ ಇದೆ. ಇದು ತೇಜ್‌ಪುರದಿಂದ ತವಾಂಗ್‌ಗೆ ಸಂಪರ್ಕ ಕಲ್ಪಿಸಲಿದೆ.
* ಅರುಣಾಚಲ ಪ್ರದೇಶದ ಇಟಾನಗರದಲ್ಲಿ ನಡೆದ 'ವಿಕ್ಷಿತ್ ಭಾರತ್ ವಿಕ್ಷಿತ್ ಈಶಾನ್ಯ' ಕಾರ್ಯಕ್ರಮದಲ್ಲಿ ಅವರು ವಿಶ್ವದ ಅತಿ ಉದ್ದದ ದ್ವಿ-ಪಥದ ಸುರಂಗವಾದ ಸೆಲಾ ಸುರಂಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
* ಸೆಲಾ ಸುರಂಗವು ಅರುಣಾಚಲ ಪ್ರದೇಶದ ಸೆಲಾ ಪಾಸ್‌ನಾದ್ಯಂತ ತವಾಂಗ್‌ಗೆ ಎಲ್ಲಾ ಹವಾಮಾನ ಸಂಪರ್ಕವನ್ನು ಒದಗಿಸುವ ಎಂಜಿನಿಯರಿಂಗ್ ನ ಅದ್ಭುತವಾಗಿದೆ.
ಶನಿವಾರ, 09 ಮಾರ್ಚ್ 2024
3:58 ಅಪರಾಹ್ನ
Daily PDF
ವಿಶ್ವದ ಅತಿ ಉದ್ದದ ಸುರಂಗಕ್ಕೆ ನರೇಂದ್ರ ಮೋದಿ ಚಾಲನೆ
Authored by:
Bhagya R K