* ಆಸ್ಟ್ರೇಲಿಯದ ಟಿ-20 ತಂಡದ ಆ್ಯರೋನ್‌ ಫಿಂಚ್‌ ಫೆ.07 ರಂದು ಅಂತರಾಷ್ಟ್ರೀಯ ಕ್ರಿಕೆಟ್'ಗೆ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ಪರವಾಗಿ ದಾಖಲೆಯ 76 ಟಿ20 ಮತ್ತು 55 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಫಿಂಚ್​ ಕ್ರಿಕೆಟ್​ ನಿವೃತ್ತಿ ಘೋಷಿಸಿದ್ದಾರೆ.
* ಜನವರಿ 2011 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಫಿಂಚ್ 17 ಏಕದಿನ ಶತಕಗಳು ಮತ್ತು ಎರಡು ಟಿ20 ಶತಕಗಳನ್ನು ಒಳಗೊಂಡಂತೆ 8,804 ರನ್ ಗಳಿಸಿದ್ದಾರೆ. 2022 ಸೆಪ್ಟೆಂಬರ್‌ನಲ್ಲಿ ಫಿಂಚ್ ಏಕದಿನ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿ, ಟಿ20 ಯಲ್ಲಿ ತಂಡದ ನಾಯಕತ್ವವನ್ನು ಮುಂದುವರೆಸಿದ್ದರು.