➤ ಆಂಧ್ರಪ್ರದೇಶ ಸರ್ಕಾರವು ತನ್ನ ಕಡಪ ಬೇಸಿನ್ (Kadapa Basin) ವ್ಯಾಪ್ತಿಯಲ್ಲಿ ಅತ್ಯಂತ ಪ್ರಮುಖ 'ಕ್ರಿಟಿಕಲ್ ಮಿನರಲ್ಸ್' (Critical Minerals) ಗಳಾದ ಲಿಥಿಯಂ (Lithium) ಮತ್ತು ಗ್ಯಾಲಿಯಂ (Gallium) ಖನಿಜಗಳ ಅನ್ವೇಷಣೆಗಾಗಿ CSIR - ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (NGRI) ಜೊತೆಗೆ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ.
➤ ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶ ಸರ್ಕಾರವು ಗಣಿಗಾರಿಕೆ ಕ್ಷೇತ್ರದಲ್ಲಿ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡಲು IIT (ISM) ಧನ್‌ಬಾದ್ - TEXMiN ಜೊತೆಗೂ ಮತ್ತೊಂದು ಒಪ್ಪಂದ ಮಾಡಿಕೊಂಡಿದೆ. ಇದರಡಿಯಲ್ಲಿ ರಾಜ್ಯದಲ್ಲಿ 'Centre of Excellence for Mining' ಸ್ಥಾಪಿಸಲಾಗುವುದು.
➤ ಕ್ರಿಟಿಕಲ್ ಮಿನರಲ್ಸ್: ಆಧುನಿಕ ತಂತ್ರಜ್ಞಾನ, ಹಸಿರು ಇಂಧನ (Green Energy), ಮತ್ತು ರಕ್ಷಣಾ ಕ್ಷೇತ್ರಕ್ಕೆ ಅತ್ಯಗತ್ಯವಾದ ಹಾಗೂ ಪೂರೈಕೆ ಸರಪಳಿಯಲ್ಲಿ ಕೊರತೆ ಉಂಟಾಗುವ ಅಪಾಯವಿರುವ ಖನಿಜಗಳನ್ನು ಕ್ರಿಟಿಕಲ್ ಮಿನರಲ್ಸ್ ಎನ್ನಲಾಗುತ್ತದೆ.
➤ ಗ್ಯಾಲಿಯಂ (Gallium): ಒಂದು ವಿಶಿಷ್ಟ ಪೋಸ್ಟ್-ಟ್ರಾನ್ಸಿಸ್ಟರ್ ಲೋಹ. ಸೆಮಿಕಂಡಕ್ಟರ್‌ಗಳು (Semiconductors), LED ಗಳು, ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳು (IC) ಮತ್ತು ಸೋಲಾರ್ ಪ್ಯಾನಲ್ ತಂತ್ರಜ್ಞಾನದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
➤ ಲಿಥಿಯಂ (Lithium): ಅತ್ಯಂತ ಹಗುರವಾದ ಮತ್ತು ಕಡಿಮೆ ಸಾಂದ್ರತೆಯ ಲೋಹ. ಇದನ್ನು ಹೆಚ್ಚಾಗಿ 'ವೈಟ್ ಗೋಲ್ಡ್' (White Gold) ಎಂದು ಕರೆಯಲಾಗುತ್ತದೆ. ವಿದ್ಯುತ್ ವಾಹನಗಳ (EV) ಬ್ಯಾಟರಿಗಳು, ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಎನರ್ಜಿ ಸ್ಟೋರೇಜ್ ಸಿಸ್ಟಮ್, ಸೆರಾಮಿಕ್ಸ್ ಹಾಗೂ ಲುಬ್ರಿಕೆಂಟ್ಸ್‌ಗಳಲ್ಲಿ ಬಳಸಲಾಗುತ್ತದೆ.
➤ ಕಡಪ ಬೇಸಿನ್ ಎಂಬುದು ಆಂಧ್ರಪ್ರದೇಶದಲ್ಲಿರುವ ಪ್ರಸಿದ್ಧ ಪಾಲಿಯೋಪ್ರೊಟೆರೋಜೋಯಿಕ್ (Paleoproterozoic) ಸಂಚಿತ ಬೇಸಿನ್ (Sedimentary Basin) ಆಗಿದೆ. ಇದು ಯುರೇನಿಯಂ (ತುಮ್ಮಲಪಲ್ಲೆ), ಸುಣ್ಣದಕಲ್ಲು (Limestone), ಬೆರೈಟ್ಸ್ ಮತ್ತು ಬ್ಯಾರೈಟ್ ನಿಕ್ಷೇಪಗಳಿಗೆ ಹೆಸರುವಾಸಿಯಾಗಿದೆ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.