* ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ವರಕವಿ ಡಾ.ದ ರಾ ಬೇಂದ್ರೆಯವರ 128ನೆಯ ಜನ್ಮದಿನದಂದು ನೀಡುವ 2024ನೇ ಸಾಲಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಬೆಂಗಳೂರಿನ ಖ್ಯಾತ ವಿಮರ್ಶಕರಾದ ಡಾ ಬಸವರಾಜ ಕಲ್ಲುಡಿ ಆಯ್ಕೆಯಾಗಿದ್ದಾರೆ.
* ಡಾ.ದ.ರಾ.ಬೇಂದ್ರ ಸಾಹಿತ್ಯಾಭ್ಯಾಸಿಗರಾದ, ಹಿರಿಯ ವಿಮರ್ಶಕರು, ಸಂಶೋಧಕರಾದ ಪ್ರೊ.ಬಸವರಾಜ ಕಲ್ಲುಡಿಯವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸಮಗ್ರ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಗೌರವಿಸಲಾಯಿತು.
* ಈ ಪ್ರಶಸ್ತಿಯು ರೂ.1.00 ಲಕ್ಷ ನಗದು ಬಹುಮಾನ ಮತ್ತುಪ್ರಶಸ್ತಿ ಫಲಕ, ಫಲ-ಪುಷ್ಪವನ್ನೊಳಗೊಂಡಿದೆ.
* 31.01.2024 ರಂದು ಸಂಜೆ 4.30ಕ್ಕೆ ನಗರದ ಡಾ.ದ.ರಾ.ಬೇಂದ್ರೆ ಭವನದಲ್ಲಿ ಜರುಗುವ ಡಾ.ದ.ರಾ ಬೇಂದ್ರೆಯವರ 128ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ
ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷರಾದ ಡಾ.ಡಿ.ಎಂ.ಹಿರೇಮಠರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಬಿಕಾತನಯದತ್ತ ರಾಷ್ಟೀಯ ಪ್ರಶಸ್ತಿಗೆ ಡಾ. ಬಸವರಾಜ ಕಲ್ಲುಡಿ ಆಯ್ಕೆ
Published by Yallamma G
19 ಜನವರಿ 2024