* ವಿದೇಶಗಳಲ್ಲಿ ಭಾರತೀಯರಿಗೆ ಹಾಗೂ ಭಾರತೀಯ ಪ್ರವಾಸಿಗರಿಗೆ/ಪ್ರಯಾಣಿಕರಿಗೆ ಡಿಜಿಟಲ್ ಪಾವತಿಗೆ ಅನುಕೂಲ ಕಲ್ಪಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಜೊತೆ ಗೂಗಲ್ ಪೇ ಒಪ್ಪಂದ ಮಾಡಿಕೊಂಡಿದೆ.
* ಈ ಕುರಿತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಜೊತೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದ್ದು, ಈ ಒಪ್ಪಂದವು ಮೂರು ಪ್ರಮುಖ ಉದ್ದೇಶಗಳನ್ನು ಹೊಂದಿದೆ ಎಂದು ಗೂಗಲ್‌ ಇಂಡಿಯಾ ಡಿಜಿಟಲ್‌ ಸರ್ವೀಸಸ್‌ ಜನವರಿ 17 ರಂದು ಮಾಹಿತಿ ನೀಡಿದೆ.
- ಹೊರದೇಶಗಳಿಗೆ ಪ್ರಯಾಣಿಸುವ ಭಾರತೀಯರಿಗೆ UPI ಸೇವೆಗಳನ್ನು ವ್ಯಾಪಕವಾಗಿ ಒದಗಿಸುವುದು ಮೊದಲ ಉದ್ದೇಶವಾಗಿದೆ. 
- ಅನ್ಯ ದೇಶಗಳಲ್ಲಿಯೂ UPI ಸೇವೆಗಳನ್ನು ವಿಸ್ತರಿಸಿ ಅದರ ಬಳಕೆಯನ್ನು ಉತ್ತೇಜಿಸುವುದು ಎರಡನೆಯ ಗುರಿ. 
* ʼಈ ಪಾಲುದಾರಿಕೆಯಿಂದ ಭಾರತೀಯ ಪ್ರಯಾಣಿಕರಿಗೆ ವಿದೇಶಿ ವಹಿವಾಟುಗಳು ಸರಳಗೊಳ್ಳುತ್ತವೆ. ಜೊತೆಗೆ ಯಶಸ್ವಿ ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಇತರ ದೇಶಗಳಿಗೆ ವಿಸ್ತರಿಸಲು ಅನುಕೂಲವಾಗುತ್ತದೆʼ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ CEO ರಿತೇಶ್‌ ಶುಕ್ಲಾ ಅವರು ತಿಳಿಸಿದ್ದಾರೆ.
* ಈ ಒಪ್ಪಂದ ಹೊರದೇಶಗಳಿಗೆ ಪ್ರಯಾಣಿಸುವ ಭಾರತೀಯರಿಗೆ ಯುಪಿಐ ಸೇವೆ ಒದಗಿಸುವದು, ವಿವಿಧ ದೇಶಗಳಲ್ಲೂ ಯುಪಿಐ ಬಳಕೆ ಹಾಗೂ ವಹಿವಾಟು ವಿಸ್ತರಣೆ ಗಡಿಯಾಚೆಗಿನ ಹಣಕಾಸು ವಿನಿಮಯ ಸರಳೀಕರಣಗೊಳಿಸುವ ಉದ್ದೇಶ ಹೊಂದಿದೆ.
* ಈ ಒಪ್ಪಂದದ ಬಗ್ಗೆ ಗೂಗಲ್ ಪೇ ಸಹ ಭಾಗಿತ್ವದ ನಿರ್ದೇಶಕಿ ದುಃಕ್ಷ ಕೌಶಲ ಅವರು ಯುಪಿಐ ಆಧಾರಿತ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ಜಗತ್ತಿನ ಆರ್ಥಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.