* ಜೋ ಬೈಡನ್ ಅವರು ಭಾರತೀಯ ಮೂಲದ ನೀರಾ ಟಂಡೆನ್ ಅವರನ್ನು ಅಮೆರಿಕದ ಹೊಸ ದೇಶೀಯ ನೀತಿ ಸಲಹೆಗಾರರಾಗಿ ಆಯ್ಕೆ ಮಾಡಿದ್ದಾರೆ.
* ಪ್ರಸ್ತುತ ಅಧ್ಯಕ್ಷ ಬೈಡನ್ ಮತ್ತು ಸಿಬ್ಬಂದಿ ಕಾರ್ಯದರ್ಶಿಯ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಟಂಡೆನ್ ಅವರು, ಶ್ವೇತಭವನದ ಮೂರು ಪ್ರಮುಖ ನೀತಿ ಮಂಡಳಿಗಳನ್ನು ಮುನ್ನಡೆಸಿದ ಮೊದಲ ಏಷಿಯನ್ - ಅಮೆರಿಕನ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.
* ಟಂಡನ್, ಈ ಹಿಂದೆ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯಲ್ಲಿ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.
* ಒಬಾಮಾ - ಬೈದನ್ ಅಧ್ಯಕ್ಷೀಯ ಪ್ರಚಾರಕ್ಕಾಗಿ ದೇಶೀಯ ನೀತಿಯ ನಿರ್ದೇಶಕರಾಗಿದ್ದರು ಮತ್ತು ಹಿಲರಿ ಕ್ಲಿಂಟನ್ ಅಧ್ಯಕ್ಷೀಯ ಪ್ರಚಾರಕ್ಕಾಗಿ ನೀತಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು
ಶನಿವಾರ, 06 ಮೇ 2023
1:48 ಅಪರಾಹ್ನ
Daily PDF
ಅಮೆರಿಕದ ದೇಶೀಯ ನೀತಿ ಸಲಹೆಗಾರರಾಗಿ ಭಾರತೀಯ ಮೂಲದ ನೀರಾ ಟಂಡೆನ್ ಆಯ್ಕೆ
Authored by:
Yallamma G