* ಮಾಜಿ ಆಟಗಾರ ಶಂಕರಲಾಲ್ ಚಕ್ರವರ್ತಿ ಅವರನ್ನು ಐ ಲೀಗ್‌ನಲ್ಲಿ ಆಡುತ್ತಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.
* ಶಂಕರಲಾಲ್ ಅವರು ಈ ಮೊದಲು ಐ ಲೀಗ್ ಫುಟ್‌ಬಾಲ್ ಕ್ಲಬ್ ಸುದೇವ ಡೆಲ್ಲಿ FCಗೆ ಕೋಚ್ ಆಗಿದ್ದರು. ಸದ್ಯ ಎರಡನೇ ಡಿವಿಷನ್‌ನಲ್ಲಿ ಆಡುತ್ತಿರುವ BFCಗೆ ನೇಮಕವಾಗಿದ್ದಾರೆ.
* ಫುಟ್‌ಬಾಲ್ ಕ್ಲಬ್ ಮಾಲೀಕರಾದ ಬೆಂಗಳೂರು ಯುನೈಟೆಡ್‌ನ ಗೌರವ್ ಮನಚಂದಾ ರವರು 'ಐ ಲೀಗ್‌ನಲ್ಲಿ ಅಪಾರ ಅನುಭವ ಹೊಂದಿರುವ ಶಂಕರ್ ಲಾಲ್ ಚಕ್ರವರ್ತಿ ಅವರನ್ನು ತಂಡಕ್ಕೆ ನೇಮಕ ಮಾಡಿಕೊಳ್ಳಲು ಹೆಮ್ಮೆ ಎನಿಸುತ್ತಿದೆಎಂದು ತಿಳಿಸಿದ್ದಾರೆ. ಮುಂಬರುವ ಟೂರ್ನಿಗಳಲ್ಲಿ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ತಂಡವು ಉತ್ತಮ ಸಾಧನೆ ಮಾಡುವ ನಿರೀಕ್ಷೆ ಇದೆ' ಎಂದು ಗೌರವ್ ಮನಚಂದಾ ರವರು ಹೇಳಿದ್ದಾರೆ.
ಐ ಲೀಗ್ : BFC ಗೆ ಶಂಕರಲಾಲ್ ಚಕ್ರವರ್ತಿ ಮುಖ್ಯ ಕೋಚ್ ಆಗಿ ನೇಮಕ
Published by Yallamma G
17 ಆಗಸ್ಟ್ 2023