* ನವದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಲೋಕಸಭೆ ಚುನಾವಣೆ 2024ರ ದಿನಾಂಕ ಮತ್ತು ವೇಳಾಪಟ್ಟಿಯನ್ನು ಮಾರ್ಚ್ 16 ರಂದು ಪ್ರಕಟಿಸಿದ್ದಾರೆ. ಲೋಕಸಭೆಯ 543 ಸ್ಥಾನಗಳಿಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ.
* ಈ 543 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿಗೆ 84 ಕ್ಷೇತ್ರ, ಪರಿಶಿಷ್ಟ ಪಂಗಡಕ್ಕೆ 47 ಕ್ಷೇತ್ರಗಳು ಮೀಸಲು. ಉಳಿದ 412 ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಎಂದು ಆಯೋಗ ತಿಳಿಸಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
* ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ನಡೆಯಲಿದ್ದು, ಕೊನೆಯ ಹಂತದ ಮತದಾನ ಜೂನ್ 1 ರಂದು ನಡೆಯಲಿದೆ.
* ಲೋಕಸಭೆ ಚುನಾವಣೆ 2024ರ 1ನೇ ಹಂತದ ಚುನಾವಣೆ ಪ್ರಕ್ರಿಯೆ :
ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 27.03.2024 (ಬುಧವಾರ)
ಮತದಾನ ದಿನಾಂಕ - 19.04.2024 (ಶುಕ್ರವಾರ)
ಮತ ಎಣಿಕೆ ದಿನ/ ಫಲಿತಾಂಶ - 04.06.2024 (ಮಂಗಳವಾರ)
ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ - 102
ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -21
* ಲೋಕಸಭೆ ಚುನಾವಣೆ 2024ರ 2ನೇ ಹಂತದ ಚುನಾವಣೆ ಪ್ರಕ್ರಿಯೆ :
ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 04.04.2024 (ಗುರುವಾರ)
ಮತದಾನ ದಿನಾಂಕ - 26.04.2024 (ಶುಕ್ರವಾರ)
ಮತ ಎಣಿಕೆ ದಿನ/ ಫಲಿತಾಂಶ - 04.06.2024 (ಮಂಗಳವಾರ)
ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ - 89
ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -13
* ಲೋಕಸಭೆ ಚುನಾವಣೆ 2024ರ 3ನೇ ಹಂತದ ಚುನಾವಣೆ ಪ್ರಕ್ರಿಯೆ :
ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 19.04.2024 (ಶುಕ್ರವಾರ)
ಮತದಾನ ದಿನಾಂಕ - 07.05.2024 (ಶನಿವಾರ)
ಮತ ಎಣಿಕೆ ದಿನ/ ಫಲಿತಾಂಶ - 04.06.2024 (ಮಂಗಳವಾರ)
ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ - 94
ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -12
* ಲೋಕಸಭೆ ಚುನಾವಣೆ 2024ರ 4ನೇ ಹಂತದ ಚುನಾವಣೆ ಪ್ರಕ್ರಿಯೆ :
ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 25.04.2024 (ಗುರುವಾರ)
ಮತದಾನ ದಿನಾಂಕ - 13.05.2024 (ಸೋಮವಾರ)
ಮತ ಎಣಿಕೆ ದಿನ/ ಫಲಿತಾಂಶ - 04.06.2024 (ಮಂಗಳವಾರ)
ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ - 96
ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -10
* ಲೋಕಸಭೆ ಚುನಾವಣೆ 2024ರ 5 ನೇ ಹಂತದ ಚುನಾವಣೆ ಪ್ರಕ್ರಿಯೆ :
ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 03.05.2024 (ಶುಕ್ರವಾರ)
ಮತದಾನ ದಿನಾಂಕ - 20.05.2024 (ಸೋಮವಾರ)
ಮತ ಎಣಿಕೆ ದಿನ/ ಫಲಿತಾಂಶ - 04.06.2024 (ಮಂಗಳವಾರ)
ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ - 49
ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -08
* ಲೋಕಸಭೆ ಚುನಾವಣೆ 2024ರ 6 ನೇ ಹಂತದ ಚುನಾವಣೆ ಪ್ರಕ್ರಿಯೆ :
ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 06.05.2024 (ಸೋಮವಾರ)
ಮತದಾನ ದಿನಾಂಕ - 25.05.2024 (ಸೋಮವಾರ)
ಮತ ಎಣಿಕೆ ದಿನ/ ಫಲಿತಾಂಶ - 04.06.2024 (ಮಂಗಳವಾರ)
ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ - 57
ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -07
* ಲೋಕಸಭೆ ಚುನಾವಣೆ 2024ರ 7 ನೇ ಹಂತದ ಚುನಾವಣೆ ಪ್ರಕ್ರಿಯೆ :
ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 14.05.2024 (ಮಂಗಳವಾರ)
ಮತದಾನ ದಿನಾಂಕ - 01.06.2024 (ಸೋಮವಾರ)
ಮತ ಎಣಿಕೆ ದಿನ/ ಫಲಿತಾಂಶ - 04.06.2024 (ಮಂಗಳವಾರ)
ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ - 57
ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -08
ಸೋಮವಾರ, 18 ಮಾರ್ಚ್ 2024
11:43 ಪೂರ್ವಾಹ್ನ
Daily PDF
2024 ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟ : ಜೂನ್ 4 ರಂದು ಫಲಿತಾಂಶ
Authored by:
Yallamma G