* 16ನೇ 'ಬ್ರಿಕ್ಸ್' ಶೃಂಗಸಭೆಯು ಮಂಗಳವಾರ (ಅ.22) ರಷ್ಯಾದ ಕಜಾನ ನಗರದಲ್ಲಿ ರಷ್ಯಾ ಅಧ್ಯಕ್ಷ ವ್ಹಾದಿಮಿರ್ ಪುಟಿನ್ ನೇತೃತ್ವದಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಭಾರತದ ಪ್ರಧಾನಿ ನರೇಂದ್ರ ಮೋದಿ, ಟರ್ಕಿಯ ಅಧ್ಯಕ್ಷ ರೆಸೆಪ್ ತಆ್ಯಪ್ ಎರ್ಡೋಗನ್, ಇರಾನ್‌ ಅಧ್ಯಕ್ಷ ಡಾ.ಮಸೂದ್ ಪೆಜೆಶ್ಚಿಯಾನ್ ಸೇರಿದಂತೆ ಪ್ರಮುಖರು. ಭಾಗವಹಿಸಲಿದ್ದಾರೆ.
* ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಪುಟಿನ್ ವಿರುದ್ಧ ಅಂತರರಾಷ್ಟ್ರೀಯ ಬಂಧನ ವಾರಂಟ್ ಜಾರಿಯಾಗಿದೆ. ಈ ಸಂದರ್ಭದಲ್ಲಿ ತಮ್ಮ ಬೆಂಬಲ ಹೆಚ್ಚಿಸಿಕೊಳ್ಳಲು ಪುಟನ್ ಶೃಂಗಸಭೆ ಆಯೋಜಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
* ಪಾಶ್ಚಿಮಾತ್ಯ ರಾಷ್ಟ್ರಗಳ ಒಕ್ಕೂಟಕ್ಕೆ ಪರ್ಯಾಯವಾಗಿ ಈ ಮಿತ್ರಕೂಟ ರಚನೆಯಾಗಿದೆ ಎಂದು ಹೇಳಲಾಗಿದೆ. ಆರಂಭದಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಅಫ್ರಿಕಾ ರಾಷ್ಟ್ರಗಳು ಮಾತ್ರ ಸದಸ್ಯತ್ವ ಹೊಂದಿದ್ದವು. ಈ ವರ್ಷ ಇರಾನ್, ಈಜಿಪ್ಟ್, ಇಥಿಯೋಪಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ ರಾಷ್ಟ್ರಗಳು ಸೇರ್ಪಡೆಯಾದವು.
* ಟರ್ಕಿ, ಅಜರ್‌ಬೈಜಾನ್, ಮಲೇಷ್ಯಾ ಕೂಡ ಔಪಚಾರಿಕವಾಗಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, ಇನ್ನಷ್ಟು ರಾಷ್ಟ್ರಗಳು ಸೇರ್ಪಡೆಯಾಗಲು ಒಪ್ಪಿಗೆ ಸೂಚಿಸಿವೆ.
* ನಾನು 'ಬ್ರಿಕ್ಸ್' ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾದ ಕಜಾನಗೆ ಹೊರಟಿದ್ದೇನೆ, ಭಾರತವು ಬ್ರಿಕ್ಸ್ ಗೆ ಅಪಾರ ಪ್ರಾಮುಖ್ಯತೆಯನ್ನು ನೀಡುತ್ತದೆ. ನಾನು ಪ್ರಮುಖ ವಿಷಯಗಳನ್ನು ಕುರಿತು ವ್ಯಾಪಕವಾದ ಚರ್ಚೆಯನ್ನು ಎದುರು ನೋಡುತಿದ್ದೇನೆ. ಜೊತೆಗೆ ವಿವಿಧ ದೇಶಗಳ ನಾಯಕರನ್ನು ಭೇಟಿ ಮಾಡಲು ಬಯಸಿದ್ದೇನೆ ಎಂದು ಮೋದಿ ಎಕ್ಸ್ ನಲಿ ಪೋಸ್ಟ್ ಮಾಡಿದ್ದಾರೆ.