* ಒಂದು ಕೊಂಬಿನ ಘಂಡಾಮೃಗಗಳಿಗೆ ಹೆಸರಾಗಿದ್ದ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ಇದೀಗ ಭಾರತದ ಎರಡನೇ ಅತಿದೊಡ್ಡ ಚಿಟ್ಟೆ ವೈವಿಧ್ಯತೆಯ ಕೇಂದ್ರವಾಗಿ ಮನ್ನಣೆ ಗಳಿಸಿದೆ.
* ಅರುಣಾಚಲ ಪ್ರದೇಶದ ನಾಮದಾಫ ರಾಷ್ಟ್ರೀಯ ಉದ್ಯಾನವನ ಚಿಟ್ಟೆಗಳಿಗೆ ಹೆಸರಾಗಿದ್ದು, ಇದರ ನಂತರದ ಸ್ಥಾನದಲ್ಲಿ ಕಾಜಿರಂಗ ಗುರುತಿಸಲ್ಪಟ್ಟಿದೆ.
* ಕಾಜಿರಂಗ ಅಂದಾಜು 446 ಚಿಟ್ಟೆ ಪ್ರಭೇದಗಳಿಗೆ ನೆಲೆಯಾಗಿದ್ದು, ವೈವಿಧ್ಯಮಯ ಚಿಟ್ಟೆಗಳ ಶ್ರೀಮಂತ ಜೀವವೈವಿಧ್ಯತೆಗೆ ಹೆಸರಾಗಿದೆ. ಯುವ ವಿಜ್ಞಾನಿ 2007 ರಿಂದ ಉದ್ಯಾನವನದ ಬಗ್ಗೆ ಅಧ್ಯಯನ ನಡೆಸುತ್ತಿದ್ದು, ಇದರ ಫಲವಾಗಿ ಉದ್ಯಾನವನಕ್ಕೆ ಈ ಮನ್ನಣೆ ಲಭಿಸಿದೆ.
* ಮೊದಲ ಬಾರಿಗೆ ಕಾಜಿರಂಗದಲ್ಲಿ ಚಿಟ್ಟೆ ಪ್ರಭೇದಗಳ ವಿವರವಾದ ಅಧ್ಯಯನಕ್ಕಾಗಿ 2024ರ ಸೆಪ್ಟೆಂಬರ್‌ನಲ್ಲಿ ಚಿಟ್ಟೆ ಸಂರಕ್ಷಣಾ ಸಭೆ ನಡೆಸಲಾಯಿತು. ಇದರಲ್ಲಿ ಸುಮಾರು 40ಕ್ಕೂ ಅಧಿಕ ಚಿಟ್ಟೆ ಆಸಕ್ತರು ಪಾಲ್ಗೊಂಡಿದ್ದರು.
* 18 ಹೊಸ ಜಾತಿಯ ಚಿಟ್ಟೆಗಳನ್ನು ಗುರುತಿಸಲಾಗಿದೆ. ಬರ್ಮೀಸ್ ತ್ರಿರಿಂಗ್, ಗ್ಲಾಸಿ ಸೆರುಲಿಯನ್, ಡಾರ್ಕ್ ಬಾರ್ಡರ್ಡ್ ಹೆಡ್ಜ್ ಬ್ಲೂ, ಅಂಡಮಾನ್ ಎಲ್ಲೋ ಬ್ಯಾಂಡೆಡ್ ಫ್ಲಾಟ್, ಫರಾರ್ಸ ಸೆರುಲಿಯನ್ ಸೇರಿದಂತೆ ಹಲವು ಚಿಟ್ಟೆಗಳು ಕಾಜಿರಂಗದ ಪನ್ಬರಿ ಮೀಸಲು ಅರಣ್ಯದಲ್ಲಿ ಪತ್ತೆಯಾಗಿವೆ.
* ರಾಷ್ಟ್ರೀಯ ಉದ್ಯಾನವನದ ಹೊರತಾಗಿ, ಕಾಜಿರಂಗದಲ್ಲಿರುವ ಪನ್ಬರಿ ಮೀಸಲು ಅರಣ್ಯವು ವೈವಿಧ್ಯಮಯ ಚಿಟ್ಟೆ ಪ್ರಭೇದಗಳಿಗೆ ನೆಲೆಯಾಗಿದೆ.
* ಕಾಜಿರಂಗ ಉದ್ಯಾನವನ ಅಸ್ಸಾಂನ ಗೋಲಾಘಾಟ್ ಮತ್ತು ನಾಗಾನ್ ಜಿಲ್ಲೆಗಳಲ್ಲಿದೆ. ಇದನ್ನು 1974 ರಲ್ಲಿ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು.
* ಇದು UNESCO ವಿಶ್ವ ಪರಂಪರೆಯ ತಾಣವಾಗಿದೆ ಮತ್ತು ದೊಡ್ಡ ಒಂದು ಕೊಂಬಿನ ಘೇಂಡಾಮೃಗಗಳ ಒಟ್ಟು ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ನೆಲೆಯಾಗಿದೆ.
ಕಾಜಿರಂಗ ಭಾರತದ ಎರಡನೇ ಅತಿ ದೊಡ್ಡ ಚಿಟ್ಟೆ ವೈವಿಧ್ಯ ಕೇಂದ್ರ
Published by Jyoti Angadi
22 ಅಕ್ಟೋಬರ್ 2024