➤ ಭಾರತವು 2026ರ ಬ್ರಿಕ್ಸ್ (BRICS) ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಇದರ ಭಾಗವಾಗಿ 12ನೇ ಬ್ರಿಕ್ಸ್ ಪರಿಸರ ಸಚಿವರ ಸಭೆ (12th BRICS Environment Ministers' Meeting) ಯನ್ನು ನವದೆಹಲಿಯಲ್ಲಿ ಆಯೋಜಿಸಿದೆ.
- ಅಧ್ಯಕ್ಷತೆ: ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪೇಂದರ್ ಯಾದವ್
- ಮುಖ್ಯ ಧ್ಯೇಯವಾಕ್ಯ (Theme): "ಸ್ಥಿತಿ ಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ" ("Building for Resilience, Innovation, Cooperation and Sustainability")
- ಪೂರ್ವಭಾವಿ ಸಭೆ: ಸಚಿವರ ಸಭೆಗೂ ಮುನ್ನ ಸೋಮವಾರದಂದು ಪರಿಸರ ಕಾರ್ಯಪಡೆ (Environment Working Group) ಮತ್ತು ಹವಾಮಾನ ಬದಲಾವಣೆ ಹಾಗೂ ಸುಸ್ಥಿರ ಅಭಿವೃದ್ಧಿ ಸಂಪರ್ಕ ಗುಂಪಿನ ಹಿರಿಯ ಅಧಿಕಾರಿಗಳ ಸಭೆ ತನ್ಮಯ್ ಕುಮಾರ್ (ಕಾರ್ಯದರ್ಶಿ, MoEFCC) ಅವರ ನೇತೃತ್ವದಲ್ಲಿ ಭಾರತ ಮಂಟಪದಲ್ಲಿಸ ನಡೆಯಿತು.
➤ 4 ಆದ್ಯತಾ ಕ್ಷೇತ್ರಗಳು (4 Priority Areas): ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಪರಿಸರ ಕಾರ್ಯಪಡೆಯು ಸುಸ್ಥಿರ ಭವಿಷ್ಯಕ್ಕಾಗಿ 4 ಮುಖ್ಯ ಆದ್ಯತಾ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ ಹರಿಸಿದೆ:
- ಸುಸ್ಥಿರ ಜೀವನಶೈಲಿ ಪ್ರಚಾರ (Promoting Sustainable Lifestyles): ಜಾಗರೂಕ ಬಳಕೆ (Mindful Consumption) ಮತ್ತು ಸಮುದಾಯ ಆಧಾರಿತ ಅಭ್ಯಾಸಗಳ ಮೂಲಕ ಪರಿಸರ ರಕ್ಷಣೆ. (ಭಾರತದ 'ಮಿಷನ್ LiFE' ತತ್ವಕ್ಕೆ ಪೂರಕ).
- ಕಾಡು ಬೆಳೆಸುವುದು, ಅರಣ್ಯ ಕಿಚ್ಚು ನಿರ್ವಹಣೆ ಮತ್ತು ವಿಪತ್ತು ಸ್ಥಿತಿಸ್ಥಾಪಕತ್ವ (Afforestation, Forest Fire Management and Disaster Resilience): ಭೂಮಿ ಮರುಸ್ಥಾಪನೆ, ದತ್ತಾಂಶ ಸಂಗ್ರಹಣೆ ಹಾಗೂ ಅರಣ್ಯ ಪ್ರದೇಶಗಳ ಹಸಿರೀಕರಣದ ಮೂಲಕ ಪರಿಸರ ಸಮತೋಲನ ಕಾಯ್ದುಕೊಳ್ಳುವುದು.
- ವೃತ್ತಾಕಾರದ ಅರ್ಥವ್ಯವಸ್ಥೆ (Circular Economy): ತ್ಯಾಜ್ಯ ನಿರ್ವಹಣೆ, ವಿಸ್ತೃತ ಉತ್ಪಾದಕರ ಹೊಣೆಗಾರಿಕೆ (Extended Producer Responsibility - EPR) ನೀತಿಗಳನ್ನು ಬಲಪಡಿಸುವುದು ಮತ್ತು ಸಂಪನ್ಮೂಲಗಳ ಮರುಬಳಕೆಗೆ ಆದ್ಯತೆ ನೀಡುವುದು.
- ಹವಾಮಾನ ಅಳವಡಿಕೆಯಲ್ಲಿ ಸಹಕಾರ (Climate Adaptation through Traditional Knowledge): ಪಾರಂಪರಿಕ ಜ್ಞಾನ ಮತ್ತು ಸಮುದಾಯ ಆಧಾರಿತ ಮಾದರಿಗಳನ್ನು ಬಳಸಿಕೊಂಡು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುವುದು.