ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿನ ಖಾಲಿ ಇರುವ 60 ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನ |ಈ ಕುರಿತು ಮಾಹಿತಿ ನಿಮಗಾಗಿ
ತುಮಕೂರು ಜಿಲ್ಲಾ ನ್ಯಾಯಾಂಗ ಇಲಾಖೆಯಲ್ಲಿ ಖಾಲಿ ಇರುವ 60 ಸ್ಟೆನೋಗ್ರಾಫರ್ ಗ್ರೇಡ್-III, ಬೆರಳಚ್ಚುಗಾರ, ಟೈಪಿಸ್ಟ್-ಕಾಪಿಸ್ಟ್ ಮತ್ತು ಪ್ಯೂನ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಕೊನೆಯ ದಿನಾಂಕ ದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಪ್ರಾರಂಭ ದಿನಾಂಕ 12/03/2024 ಹಾಗೂ ಕೊನೆಯ ದಿನಾಂಕ 10 ಏಪ್ರಿಲ್ 2024 ರಾತ್ರಿ : 11.59 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ : 60
ಸ್ಟೆನೋಗ್ರಾಫರ್ ಗ್ರೇಡ್-III - 10
ಬೆರಳಚ್ಚುಗಾರ - 05
ಟೈಪಿಸ್ಟ್-ಕಾಪಿಸ್ಟ್ - 05
ಪ್ಯೂನ್ - 40
- No. of posts
- 60
- Start Date
- 18 ಮಾರ್ಚ್ 2024
- End Date
- 10 ಎಪ್ರಿಲ್ 2024
- Last Payment
- 11 ಎಪ್ರಿಲ್ 2024
- Employment Type
- FULL_TIME
- Organization
- KPSC Vaani (Website)
- Location
- ತುಮಕೂರು ಜಿಲ್ಲಾ, KA,
Selection Procedure:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
Qualification:
* ಸ್ಟೆನೋಗ್ರಾಫರ್ ಗ್ರೇಡ್-III, ಬೆರಳಚ್ಚುಗಾರ ಮತ್ತು ಟೈಪಿಸ್ಟ್-ಕಾಪಿಸ್ಟ್ ಹುದ್ದೆಗಳಿಗೆ :
- ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ 3 ವರ್ಷ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು .
* ಪ್ಯೂನ್ ಹುದ್ದೆಗೆ :
- ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕನ್ನಡ ಓದಲು ಮತ್ತು ಬರೆಯಲು ಬರಬೇಕು.
Fee:
- ಪ್ರವರ್ಗ-2ಎ, 2ಬಿ, 3ಎ, 3ಬಿ ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ ರೂ 200 / -
- ಪ .ಜಾ, ಪ .ಪಂ, ಪ್ರವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತದೆ.
Age Limit:
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷ
- ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 35 ವರ್ಷ
ಪ್ರವರ್ಗ -2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ : 38 ವರ್ಷ
ಪ.ಜಾ, ಪ.ಪಂ, ಪ್ರವರ್ಗ 1 ವರ್ಗದ ಅಭ್ಯರ್ಥಿಗಳಿಗೆ : 40 ವರ್ಷ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.