ತೆಹ್ರಿ ಹೈಡ್ರೋ ಡೆವಲಪ್ ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (THDC)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

Tags: Engineering
Published by: Yallamma G
|
ತೆಹ್ರಿ ಹೈಡ್ರೋ ಡೆವಲಪ್ ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (THDC)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ತೆಹ್ರಿ ಹೈಡ್ರೋ ಡೆವಲಪ್ ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (THDC)ನಲ್ಲಿ ಖಾಲಿ ಇರುವ 100 ಇಂಜಿನಿಯರಿಂಗ್ ಟ್ರೇನಿ ಸಿವಿಲ್, ಇಂಜಿನಿಯರಿಂಗ್ ಟ್ರೇನಿ ಎಲೆಕ್ಟ್ರಿಕಲ್, ಇಂಜಿನಿಯರಿಂಗ್ ಟ್ರೇನಿ ಮೆಕ್ಯಾನಿಕಲ್ ಮತ್ತು ಇಂಜಿನಿಯರಿಂಗ್ ಟ್ರೇನಿ ಎಲೆಕ್ಟ್ರಾನಿಕ್ಸ್ & ಇನ್ ಸ್ಟ್ರುಮೆಂಟೇಶನ್ ಸೇರಿದಂತೆ ವಿವಿಧ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29/03/2024ರ ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 100
ಇಂಜಿನಿಯರಿಂಗ್ ಟ್ರೇನಿ ಸಿವಿಲ್ : 40 
ಇಂಜಿನಿಯರಿಂಗ್ ಟ್ರೇನಿ ಎಲೆಕ್ಟ್ರಿಕಲ್ : 25 
ಇಂಜಿನಿಯರಿಂಗ್ ಟ್ರೇನಿ ಮೆಕ್ಯಾನಿಕಲ್ : 30
ಇಂಜಿನಿಯರಿಂಗ್ ಟ್ರೇನಿ ಎಲೆಕ್ಟ್ರಾನಿಕ್ಸ್ & ಇನ್ ಸ್ಟ್ರುಮೆಂಟೇಶನ್ : 5

Job Overview
No. of posts
100
Start Date
4 ಮಾರ್ಚ್ 2024
End Date
29 ಮಾರ್ಚ್ 2024
Employment Type
FULL_TIME
Organization
KPSC Vaani (Website)
Location
ಭಾರತದಾದ್ಯಂತ, KA,
Selection Procedure:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಶಾರ್ಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು B.E/ B.Tech/ B.Sc ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಕನಿಷ್ಠ 65% ಅಂಕಗಳೊಂದಿಗೆ ಪಾಸಾಗಿರಬೇಕು.
Fee:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ 600/- ರೂ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. SC/ST/ PWBD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿಯನ್ನು ನೀಡಲಾಗಿದೆ.
Age Limit:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ 30 ವರ್ಷ ವಯಸ್ಸನ್ನು ಮೀರಿರಬಾರದು.
ವಯೋಮಿತಿ ಸಡಿಲಿಕೆ: 
OBC ಅಭ್ಯರ್ಥಿಗಳಿಗೆ : 3 ವರ್ಷಗಳು 
SC/ST/ PWBD ಅಭ್ಯರ್ಥಿಗಳಿಗೆ : 5 ವರ್ಷಗಳು ವಯೋಮಿತಿ ಸಡಿಲಿಕೆ ಇರಲಿದೆ.

To Download Official Notification
Related Tags: Engineering
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.