ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ನ್ಯೂಸ್: ಎಸ್‌ಬಿಐನಲ್ಲಿ ಟ್ರೇಡ್ ಫೈನಾನ್ಸ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಉತ್ತಮ ವೇತನ!
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ನಂಬಿಕಸ್ಥ ಹಾಗೂ ಭದ್ರವಾದ ವೃತ್ತಿಬದುಕು ಕಟ್ಟಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಸೂಕ್ತ ವೇದಿಕೆ ಕಲ್ಪಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸ್ಪೆಷಲಿಸ್ಟ್ ಕ್ಯಾಡರ್ ಆಫೀಸರ್ ವಿಭಾಗದಲ್ಲಿ ಖಾಲಿ ಇರುವ 35 ಟ್ರೇಡ್ ಫೈನಾನ್ಸ್ ಆಫೀಸರ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಈ ಬಾರಿ ಜಾಗತಿಕ ಬ್ಯಾಂಕಿಂಗ್ ಸಮೂಹದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಟ್ರೇಡ್ ಫೈನಾನ್ಸ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸೂಕ್ತ ಶೈಕ್ಷಣಿಕ ಅರ್ಹತೆ ಮತ್ತು ಬ್ಯಾಂಕಿಂಗ್ ಅನುಭವ ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಆಸಕ್ತರು ಆನ್‌ಲೈನ್ ಮೂಲಕವೇ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ನಿಮಯಾವಳಿಗಳಂತೆ ಆಕರ್ಷಕ ವೇತನ ಶ್ರೇಣಿಯ ಜೊತೆಗೆ ವಿವಿಧ ಸೌಲಭ್ಯಗಳು ದೊರೆಯಲಿವೆ. ಈ ನೇಮಕಾತಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಆಯ್ಕೆ ವಿಧಾನ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು KPSCVAANI.COM ಕೆಳಗೆ ವಿವರವಾಗಿ ನೀಡಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 29 ಆಗಸ್ಟ್ 2026 ರಿಂದ ಪ್ರಾರಂಭವಾಗಲಿದ್ದು, 28 ಸೆಪ್ಟೆಂಬರ್ 2026 ರವರೆಗೆ ಲಭ್ಯವಿರುತ್ತದೆ (ವಿಸ್ತರಿಸಲಾಗಿದೆ).
SBI SCO Recruitment 2026 ಪ್ರಮುಖ ವಿವರಗಳು:
- ಸಂಸ್ಥೆಯ ಹೆಸರು: ಭಾರತೀಯ ಸ್ಟೇಟ್ ಬ್ಯಾಂಕ್ (SBI)
- ಅಧಿಸೂಚನೆ ಸಂಖ್ಯೆ: CRPD/SCO/2026-27/15
- ಹುದ್ದೆಯ ಹೆಸರು: ಟ್ರೇಡ್ ಫೈನಾನ್ಸ್ ಆಫೀಸರ್ - IBG (JMGS-I ಹಾಗೂ MMGS-II)
- ಒಟ್ಟು ಖಾಲಿ ಹುದ್ದೆಗಳು: 35
- ಕೆಲಸದ ಸ್ಥಳ: ಹೈದರಾಬಾದ್ ಮತ್ತು ಕೋಲ್ಕತ್ತಾ (ಅಥವಾ ಸಂಸ್ಥೆಯ ಅಗತ್ಯಕ್ಕೆ ತಕ್ಕಂತೆ ಭಾರತದಾದ್ಯಂತ)
- ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ (Online)
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 29 ಆಗಸ್ಟ್ 2026
- ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ: 28 ಸೆಪ್ಟೆಂಬರ್ 2026
ಹುದ್ದೆಗಳ ವರ್ಗೀಕರಣ: ಖಾಲಿ ಇರುವ ಒಟ್ಟು 35 ಹುದ್ದೆಗಳನ್ನು ಎರಡು ಹಂತಗಳಲ್ಲಿ ವರ್ಗೀಕರಿಸಲಾಗಿದೆ:
- ಟ್ರೇಡ್ ಫೈನಾನ್ಸ್ ಆಫೀಸರ್ - IBG (JMGS-I): 14 ಹುದ್ದೆಗಳು
- ಟ್ರೇಡ್ ಫೈನಾನ್ಸ್ ಆಫೀಸರ್ - IBG (MMGS-II): 21 ಹುದ್ದೆಗಳು
- ವಿಶೇಷ ಸೂಚನೆ: ನಿಯಮಾವಳಿಗಳ ಪ್ರಕಾರ ವಿಕಲಚೇತನ (PwBD) ಅಭ್ಯರ್ಥಿಗಳಿಗೆ ಮೀಸಲಾತಿ ಸೌಲಭ್ಯಗಳು ಅನ್ವಯವಾಗಲಿವೆ.
ಶೈಕ್ಷಣಿಕ ಅರ್ಹತೆ (31.07.2026 ರಂತೆ): ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Graduate) ಪೂರ್ಣಗೊಳಿಸಿರಬೇಕು. ಇದರೊಂದಿಗೆ IIBF ಸಂಸ್ಥೆಯಿಂದ Forex Operations Certificate ಹೊಂದಿರುವುದು ಕಡ್ಡಾಯ.
ಆದ್ಯತೆಯ ಪ್ರಮಾಣಪತ್ರಗಳು: LIBF ಸಂಸ್ಥೆಯ CDCS ಅಥವಾ CSDG, ICC Academy ನೀಡುವ CTFP ಅಥವಾ GTC ಹಾಗೂ IIBF/LIBF ನ CITF ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಆಯ್ಕೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.
ಇದನ್ನು ಓದಿ: IRCTC ನೇಮಕಾತಿ 2026: ಹಾಸ್ಪಿಟಾಲಿಟಿ ಮೊನಿಟರ್ ಹುದ್ದೆಗಳಿಗೆ ವಾಕ್-ಇನ್ ಇಂಟರ್‌ವ್ಯೂ
ಅನುಭವದ ವಿವರ (31.07.2026 ರಂತೆ):
- JMGS-I ಹುದ್ದೆಗೆ: ಯಾವುದೇ ವಾಣಿಜ್ಯ ಬ್ಯಾಂಕ್‌ನಲ್ಲಿ (Scheduled Commercial Bank) ಆಫೀಸರ್ ಹುದ್ದೆಯಲ್ಲಿ ಟ್ರೇಡ್ ಫೈನಾನ್ಸ್ ಪ್ರೊಸೆಸಿಂಗ್ ಮತ್ತು ಕಾರ್ಯಾಚರಣೆ ವಿಭಾಗದಲ್ಲಿ ಕನಿಷ್ಠ 1 ವರ್ಷದ ಅನುಭವವಿರಬೇಕು.
- MMGS-II ಹುದ್ದೆಗೆ: ವಾಣಿಜ್ಯ ಬ್ಯಾಂಕ್‌ನಲ್ಲಿ ಆಫೀಸರ್ ಆಗಿ ಟ್ರೇಡ್ ಫೈನಾನ್ಸ್ ಪ್ರೊಸೆಸಿಂಗ್‌ನಲ್ಲಿ ಕನಿಷ್ಠ 3 ವರ್ಷಗಳ ಸೇವಾ ಅನುಭವ ಕಡ್ಡಾಯ.
ವಯೋಮಿತಿ ಹಾಗೂ ವಯೋಸಡಲಿಕೆ:
ವಯೋಮಿತಿ (31.07.2026 ಕ್ಕೆ ಅನ್ವಯವಾಗುವಂತೆ):
- JMGS-I: ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ
- MMGS-II: ಕನಿಷ್ಠ 23 ವರ್ಷ ಹಾಗೂ ಗರಿಷ್ಠ 32 ವರ್ಷ
ವಯೋಸಡಲಿಕೆ ನಿಯಮಗಳು:
- OBC (Non-Creamy Layer): 3 ವರ್ಷಗಳು
- SC / ST: 5 ವರ್ಷಗಳು
- PwBD (General/EWS): 10 ವರ್ಷಗಳು
- PwBD (OBC): 13 ವರ್ಷಗಳು
- PwBD (SC/ST): 15 ವರ್ಷಗಳು
ವೇತನ ಶ್ರೇಣಿ: ಆಯ್ಕೆಯಾಗುವ ಆಫೀಸರ್‌ಗಳಿಗೆ ಮಾಸಿಕ ಮೂಲ ವೇತನದ ಜೊತೆಗೆ ನಿಯಮಾನುಸಾರ DA, HRA, CCA, PF, NPS ಹಾಗೂ ವೈದ್ಯಕೀಯ ಸೌಲಭ್ಯಗಳು ಲಭ್ಯವಿರಲಿವೆ.
- JMGS-I: ₹48,480 ರಿಂದ ₹85,920
- MMGS-II: ₹64,820 ರಿಂದ ₹93,960
ಆಯ್ಕೆ ವಿಧಾನ:
- ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯಿಲ್ಲದೆ ನೇರವಾಗಿ ಶಾರ್ಟ್‌ಲಿಸ್ಟಿಂಗ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
- ಶಾರ್ಟ್‌ಲಿಸ್ಟಿಂಗ್: ಅರ್ಜಿದಾರರ ಶೈಕ್ಷಣಿಕ ಅಂಕಗಳು ಮತ್ತು ಕಾರ್ಯಾನುಭವದ ಆಧಾರದಲ್ಲಿ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
- ಸಂದರ್ಶನ: ಶಾರ್ಟ್‌ಲಿಸ್ಟ್ ಆದವರಿಗೆ 100 ಅಂಕಗಳ ಸಂದರ್ಶನ ನಡೆಸಲಾಗುತ್ತದೆ. ಈ ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆಯೇ ಅಂತಿಮ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.
ಅರ್ಜಿ ಶುಲ್ಕ:
- General / EWS / OBC ಅಭ್ಯರ್ಥಿಗಳಿಗೆ: ₹750
- SC / ST / PwBD ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿಲ್ಲ (Nil)
ಅರ್ಜಿ ಸಲ್ಲಿಸುವ ಹಂತಗಳು:
- ಎಸ್‌ಬಿಐನ ಅಧಿಕೃತ ಕೆರಿಯರ್ ಪೋರ್ಟಲ್‌ಗೆ (sbi.bank.in/web/careers/current-openings) ಭೇಟಿ ನೀಡಿ.
- ಅಧಿಸೂಚನೆ ಸಂಖ್ಯೆ CRPD/SCO/2026-27/15 ಲಿಂಕ್ ಆಯ್ಕೆ ಮಾಡಿ.
- 'Apply Online' ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರ ನಮೂದಿಸಿ ನೋಂದಣಿ ಪೂರ್ಣಗೊಳಿಸಿ.
- ಭಾವಚಿತ್ರ, ಸಹಿ, Resume, ಶೈಕ್ಷಣಿಕ ದಾಖಲೆ ಮತ್ತು IIBF Forex ಪ್ರಮಾಣಪತ್ರವನ್ನು PDF ರೂಪದಲ್ಲಿ (500 KB ಒಳಗಿರಲಿ) ಅಪ್‌ಲೋಡ್ ಮಾಡಿ.
- ಶುಲ್ಕ ಪಾವತಿಸಿ, ಅರ್ಜಿಯನ್ನು Submit ಮಾಡಿ ಹಾಗೂ ಮುಂದಿನ ಉಲ್ಲೇಖಕ್ಕೆ ಪ್ರಿಂಟ್‌ಔಟ್ ತೆಗೆದಿಟ್ಟುಕೊಳ್ಳಿ.
- End Date
- 28 ಸೆಪ್ಟೆಂಬರ್ 2026
- Employment Type
- FULL_TIME
- Organization
- SBI BANK (Website)
- Location
- Mark's Road, Bengaluru, KA, 560001


Comments