KEA ಇಂದ ಬಂಪರ್ ಕೊಡುಗೆ! ಪೌರಾಡಳಿತ ಇಲಾಖೆಯ 210 ಗ್ರೂಪ್-ಸಿ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ. ₹76,100 ವರೆಗೆ ಸಂಬಳ!
KEA DMA Recruitment 2026: ಪೌರಾಡಳಿತ ನಿರ್ದೇಶನಾಲಯದ 210 ಗ್ರೂಪ್-ಸಿ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ! ITI ಪಾಸಾದವರಿಗೆ ಬಂಪರ್ ಅವಕಾಶ
ಕರ್ನಾಟಕ ರಾಜ್ಯದ ಕಲ್ಯಾಣ-ಕರ್ನಾಟಕ ಪ್ರದೇಶದ ನಿರುದ್ಯೋಗಿ ಯುವಜನತೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅತ್ಯಂತ ಉತ್ಸಾಹದಾಯಕ ಸುದ್ದಿಯೊಂದನ್ನು ನೀಡಿದೆ. ಕರ್ನಾಟಕ ಸರ್ಕಾರದ ಪೌರಾಡಳಿತ ನಿರ್ದೇಶನಾಲಯದ ಅಧೀನದಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಗ್ರೂಪ್-ಸಿ ವೃಂದದ ನೇರ ನೇಮಕಾತಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಈ ನೇಮಕಾತಿಯು ಕೇವಲ ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದಕ್ಕೆ (Kalyana-Karnataka Local Cadre) ಮಾತ್ರ ಸಂಪೂರ್ಣವಾಗಿ ಸೀಮಿತವಾಗಿದೆ. ನೀರು ಸರಬರಾಜು ಆಪರೇಟರ್ ಹಾಗೂ ಎಲೆಕ್ಟ್ರಿಷಿಯನ್ ಸೇರಿದಂತೆ ಒಟ್ಟು 210 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸೆಪ್ಟೆಂಬರ್ 16 ರಿಂದ ಆರಂಭವಾಗಲಿರುವ ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 07, 2026 ರವರೆಗೆ ಅವಕಾಶವಿದೆ.
ಪೌರಾಡಳಿತ ಇಲಾಖೆ ನೇಮಕಾತಿಯ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ ಸಡಿಲಿಕೆ ಮತ್ತು ಅರ್ಜಿ ಸಲ್ಲಿಕೆ ಕುರಿತ ಸಂಪೂರ್ಣ ವಿವರಗಳು ಇಲ್ಲಿವೆ.
KEA DMA ನೇಮಕಾತಿ 2026: ಪ್ರಮುಖ ಮುಖ್ಯಾಂಶಗಳು
- ನೇಮಕಾತಿ ಪ್ರಾಧಿಕಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
- ಇಲಾಖೆ: ಪೌರಾಡಳಿತ ನಿರ್ದೇಶನಾಲಯ, ಕರ್ನಾಟಕ ಸರ್ಕಾರ
- ವೃಂದ: ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದ (Kalyana-Karnataka Cadre)
- ಒಟ್ಟು ಖಾಲಿ ಹುದ್ದೆಗಳು: 210 ಹುದ್ದೆಗಳು
- ಅಧಿಕೃತ ವೆಬ್‌ಸೈಟ್: cetonline.karnataka.gov.in/kea
ಹುದ್ದೆಗಳ ವಿವರ : 210
1 ನೀರು ಸರಬರಾಜು ಆಪರೇಟರ್ (Water Supply Operator) : 80
2 ಎಲೆಕ್ಟ್ರಿಷಿಯನ್ ಗ್ರೇಡ್-1 (Electrician Grade-1) : 03
3 ಸಹಾಯಕ ನೀರು ಸರಬರಾಜು ಆಪರೇಟರ್ (Assistant Water Supply Operator) : 122
4 ಎಲೆಕ್ಟ್ರಿಷಿಯನ್ ಗ್ರೇಡ್-2 (Electrician Grade-2) : 05
ಶೈಕ್ಷಣಿಕ ವಿದ್ಯಾರ್ಹತೆ
ನೀರು ಸರಬರಾಜು ಆಪರೇಟರ್ :
- ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು; ಮತ್ತು
- ಸರ್ಕಾರದಿಂದ ಮಾನ್ಯತೆ ಪಡೆದ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಅಥವಾ ಫಿಟ್ಟರ್ ಟ್ರೇಡ್‌ನಲ್ಲಿ ಎರಡು ವರ್ಷಗಳ ಐಟಿಐ ಕೋರ್ಸ್ ಪ್ರಮಾಣಪತ್ರವನ್ನು ಹೊಂದಿರಬೇಕು ಮತ್ತು ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ (ಎನ್‌ಟಿಸಿ) ಹೊಂದಿರಬೇಕು; ಮತ್ತು
- ರಾಷ್ಟ್ರೀಯ ಶಿಷ್ಯವೃತ್ತಿ ಪ್ರಮಾಣಪತ್ರ (NAC) ಪಡೆಯಲು ಯಾವುದೇ ಉದ್ಯಮದಲ್ಲಿ ಒಂದು ವರ್ಷದ ಶಿಷ್ಯವೃತ್ತಿ ತರಬೇತಿಯನ್ನು ಪೂರ್ಣಗೊಳಿಸಿರಬೇಕು.
ಎಲೆಕ್ಟ್ರಿಷಿಯನ್ ಗ್ರೇಡ್-1:
- ಎಸ್‌ಎಸ್‌ಎಲ್‌ಸಿ ಅಥವಾ ಯಾವುದೇ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು; ಮತ್ತು
- ಸರ್ಕಾರದಿಂದ ಮಾನ್ಯತೆ ಪಡೆದ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಟ್ರೇಡ್‌ನಲ್ಲಿ ಎರಡು ವರ್ಷಗಳ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು ಮತ್ತು ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ (ಎನ್‌ಟಿಸಿ) ಪಡೆಯಬೇಕು.
- ರಾಷ್ಟ್ರೀಯ ಶಿಷ್ಯವೃತ್ತಿ ಪ್ರಮಾಣಪತ್ರ (NAC) ಪಡೆಯಲು ಯಾವುದೇ ಉದ್ಯಮದಲ್ಲಿ ಒಂದು ವರ್ಷದ ಶಿಷ್ಯವೃತ್ತಿ ತರಬೇತಿಯನ್ನು ಪೂರ್ಣಗೊಳಿಸಿರಬೇಕು.
ಸಹಾಯಕ ಆಪರೇಟರ್ :
- ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು; ಮತ್ತು
- ಸರ್ಕಾರದಿಂದ ಮಾನ್ಯತೆ ಪಡೆದ ಕೈಗಾರಿಕಾ ತರಬೇತಿ ಸಂಸ್ಥೆಯಿಂದ (ITI) ಎಲೆಕ್ಟ್ರಿಕಲ್ ಅಥವಾ ಫಿಟ್ಟರ್ ಟ್ರೇಡ್‌ನಲ್ಲಿ ಎರಡು ವರ್ಷಗಳ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು ಮತ್ತು ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ (NTC) ಪಡೆಯಬೇಕು.
ಎಲೆಕ್ಟ್ರಿಷಿಯನ್ ಗ್ರೇಡ್-2:
- ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು; ಮತ್ತು
- ಸರ್ಕಾರದಿಂದ ಮಾನ್ಯತೆ ಪಡೆದ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಟ್ರೇಡ್‌ನಲ್ಲಿ ಎರಡು ವರ್ಷಗಳ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು ಮತ್ತು ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ (ಎನ್‌ಟಿಸಿ) ಪಡೆಯಬೇಕು.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..
ವೇತನ ಶ್ರೇಣಿ
1 ನೀರು ಸರಬರಾಜು ಆಪರೇಟರ್ (Water Supply Operator) : ₹37,500 ರಿಂದ ₹76,100
2 ಎಲೆಕ್ಟ್ರಿಷಿಯನ್ ಗ್ರೇಡ್-1 (Electrician Grade-1) : ₹37,500 ರಿಂದ ₹76,100
3 ಸಹಾಯಕ ನೀರು ಸರಬರಾಜು ಆಪರೇಟರ್ (Assistant Water Supply Operator) : ₹34,100 ರಿಂದ ₹67,600
4 ಎಲೆಕ್ಟ್ರಿಷಿಯನ್ ಗ್ರೇಡ್-2 (Electrician Grade-2) : ₹34,100 ರಿಂದ ₹67,600
ಅರ್ಜಿ ಸಲ್ಲಿಕೆ ಮತ್ತು ಪ್ರಮುಖ ದಿನಾಂಕಗಳು (Important Dates)
ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಕೊನೆಯ ಸಮಯದಲ್ಲಿ ಸರ್ವರ್ ದೋಷಗಳಾದಲ್ಲಿ ಪ್ರಾಧಿಕಾರ ಜವಾಬ್ದಾರಿಯಲ್ಲ.
- ಅಧಿಸೂಚನೆ ಪ್ರಕಟವಾದ ದಿನಾಂಕ : 11.09.2026
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 16.09.2026
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07.10.2026
- ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ : 07.10.2026
- ಪರೀಕ್ಷಾ ದಿನಾಂಕ : ನಂತರದಲ್ಲಿ ಪ್ರಕಟಿಸಲಾಗುವುದು (ನವೆಂಬರ್-2026 ರಲ್ಲಿ ನಿರೀಕ್ಷಿತ)
ವಯೋಮಿತಿ (Age Limit) - ಭರ್ಜರಿ ಸಡಿಲಿಕೆ!
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು (30.09.2026) ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳನ್ನು ತುಂಬಿರತಕ್ಕದ್ದು. ಸರ್ಕಾರದ ಆದೇಶದಂತೆ (ದಿನಾಂಕ 29.01.2026), ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ ಭರ್ಜರಿ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ.
ಪರಿಷ್ಕೃತ ಗರಿಷ್ಠ ವಯೋಮಿತಿ ವಿವರ ಹೀಗಿದೆ:
- ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ (General Merit) : 40 ವರ್ಷಗಳು
- ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ (OBC : 43 ವರ್ಷಗಳು
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ (SC/ST/Cat-1) : 45 ವರ್ಷಗಳು
- ಇತರೆ ವಿಶೇಷ ವರ್ಗಗಳಾದ ಮಾಜಿ ಸೈನಿಕರು, ವಿಶೇಷ ಚೇತನರು, ವಿಧವೆಯರು ಇತ್ಯಾದಿ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ (ವಿವರಗಳಿಗಾಗಿ ಅಧಿಸೂಚನೆ ನೋಡಿ)
ಆಯ್ಕೆ ವಿಧಾನ (Selection Process)
ಆರ್ಹ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ (Competitive Exam) ಮೂಲಕ ಆಯ್ಕೆ ಮಾಡಲಾಗುವುದು. ಪರೀಕ್ಷೆಯನ್ನು ಆನ್‌ಲೈನ್ (CBT) ಅಥವಾ ಆಫ್‌ಲೈನ್-ಓಎಂಆರ್ ಮಾದರಿ (Offline-OMR type)ಯಲ್ಲಿ ನಡೆಸಲಾಗುವುದು.
1 ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ: ಎಸ್‌ಎಸ್‌ಎಲ್‌ಸಿಯಲ್ಲಿ ಅಥವಾ ಅದಕ್ಕಿಂತ ಉನ್ನತ ಪರೀಕ್ಷೆಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡದ ಅಭ್ಯರ್ಥಿಗಳಿಗೆ 150 ಅಂಕಗಳ ಬಹು ಆಯ್ಕೆ ಮಾದರಿಯ ಕನ್ನಡ ಪರೀಕ್ಷೆ ನಡೆಯುತ್ತದೆ. ಇದರಲ್ಲಿ ಅರ್ಹತೆ ಗಳಿಸಲು ಕನಿಷ್ಠ 50 ಅಂಕಗಳನ್ನು ಗಳಿಸುವುದು ಕಡ್ಡಾಯ. (ಈ ಅಂಕಗಳನ್ನು ಆಯ್ಕೆಗೆ ಪರಿಗಣಿಸುವುದಿಲ್ಲ)
2 ಸ್ಪರ್ಧಾತ್ಮಕ ಪರೀಕ್ಷಾ ಪತ್ರಿಕೆಗಳು:
ಕನ್ನಡ ಭಾಷಾ ಪರೀಕ್ಷೆ: ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಕಡ್ಡಾಯವಾಗಿ ಓದದವರಿಗೆ 150 ಅಂಕಗಳ ಕನ್ನಡ ಪರೀಕ್ಷೆ ಇರುತ್ತದೆ (ಅರ್ಹತೆಗಾಗಿ 50 ಅಂಕ ಗಳಿಸಬೇಕು).
ಪತ್ರಿಕೆ-1: ಸಾಮಾನ್ಯ ಜ್ಞಾನ (100 ಅಂಕಗಳು, 1 ಗಂಟೆ).
ಪತ್ರಿಕೆ-2: ನಿರ್ದಿಷ್ಟ ತಾಂತ್ರಿಕ ವಿಷಯದ ಪತ್ರಿಕೆ (100 ಅಂಕಗಳು, 2 ಗಂಟೆ).
ನೆಗೆಟಿವ್ ಮಾರ್ಕಿಂಗ್: ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತಗೊಳಿಸಲಾಗುತ್ತದೆ. OMR ಶೀಟ್‌ನಲ್ಲಿ 5ನೇ ಆಯ್ಕೆ ಕಡ್ಡಾಯವಾಗಿದೆ.
ಅರ್ಜಿ ಶುಲ್ಕ (Application Fee)
ಅರ್ಜಿ ಶುಲ್ಕವನ್ನು ಕೇವಲ ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕು
- ವರ್ಗಶುಲ್ಕಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು (2A, 2B, 3A, 3B) : ₹750/-
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 / ಮಾಜಿ ಸೈನಿಕ / ತೃತೀಯ ಲಿಂಗಿ ಅಭ್ಯರ್ಥಿಗಳು : ₹500/-
- ವಿಶೇಷ ಚೇತನ ಅಭ್ಯರ್ಥಿಗಳಿಗೆ : ₹250/-
ಇದನ್ನು ಓದಿ : SSC ದೆಹಲಿ ಪೊಲೀಸ್ ಮತ್ತು CAPF ನಲ್ಲಿ ಬರೋಬ್ಬರಿ 1870ಕ್ಕೂ ಅಧಿಕ ಹುದ್ದೆಗಳ ಬೃಹತ್ ನೇಮಕಾತಿ! ತಿಂಗಳಿಗೆ ₹1,12,400 ವರೆಗೆ ಸಂಬಳ.
ಅರ್ಜಿ ಸಲ್ಲಿಸುವುದು ಹೇಗೆ? (How to Apply Online)
- KEA ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
- ಅಲ್ಲಿ ನೇಮಕಾತಿಗೆ ಸಂಬಂಧಿಸಿದ ಲಿಂಕ್ ಅನ್ನು ಆಯ್ಕೆ ಮಾಡಿ ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿ.
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಬಿಳಿ ಹಿನ್ನೆಲೆಯ ಭಾವಚಿತ್ರ (50KB-200KB) ಮತ್ತು ಬಿಳಿ ಹಾಳೆಯ ಮೇಲೆ ಕಪ್ಪು ಶಾಹಿಯಲ್ಲಿ ಮಾಡಿದ ಸಹಿಯನ್ನು (50KB-70KB) ಸ್ಕ್ಯಾನ್ ಮಾಡಿ JPEG ಫಾರ್ಮ್ಯಾಟ್‌ನಲ್ಲಿ ಅಪ್‌ಲೋಡ್ ಮಾಡಿ.
- ಅರ್ಜಿಯನ್ನು ಸಲ್ಲಿಸಿದ ನಂತರ, ಅದರ ಒಂದು ಪ್ರತಿಯನ್ನು ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ಶುಲ್ಕ ಪಾವತಿಯ ಚಲನ್ ಅನ್ನು ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ಕಾಯ್ದಿಟ್ಟುಕೊಳ್ಳಿ.
KPSCVaani ವಿಶೇಷ ಸಲಹೆ
- ಕೊನೆಯ ದಿನದವರೆಗೆ ಕಾಯಬೇಡಿ: ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದ್ದರೂ, ಕೊನೆಯ ದಿನಗಳಲ್ಲಿ ಸರ್ವರ್ ದಟ್ಟಣೆ ಹೆಚ್ಚಾಗಿ ಅರ್ಜಿ ಸಲ್ಲಿಸಲು ತೊಂದರೆಯಾಗಬಹುದು. ಆದ್ದರಿಂದ ಇಂದೇ ಅರ್ಜಿ ಸಲ್ಲಿಸಿ.
- ದಾಖಲೆಗಳನ್ನು ಪರಿಶೀಲಿಸಿ: ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಐಟಿಐ ಅಂಕಪಟ್ಟಿಗಳು, ಆಪ್ರೆಂಟಿಸ್‌ಶಿಪ್ ಸರ್ಟಿಫಿಕೇಟ್ (ಅಗತ್ಯವಿದ್ದರೆ), ಜಾತಿ ಮತ್ತು ಆದಾಯ ಪ್ರಮಾಣಪತ್ರಗಳು ಚಾಲ್ತಿಯಲ್ಲಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮೀಸಲಾತಿ ಪ್ರಮಾಣಪತ್ರಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು (07.10.2026) ಚಾಲ್ತಿಯಲ್ಲಿರಬೇಕು
ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ www.kpscvaani.com ಜಾಲತಾಣವನ್ನು ಪ್ರತಿದಿನ ಭೇಟಿ ನೀಡಿ ಮತ್ತು ನಮ್ಮ ಟೆಲಿಗ್ರಾಂ ಚಾನಲ್ ಸೇರಿ.
- No. of posts
- 210
- Start Date
- 16 ಸೆಪ್ಟೆಂಬರ್ 2026
- End Date
- 7 ಅಕ್ಟೋಬರ್ 2026
- Last Payment
- 7 ಅಕ್ಟೋಬರ್ 2026
- Pay Scale
- 37500 - 76100 INR
- Employment Type
- FULL_TIME
- Organization
- KEA (Website)
- Location
- 9ನೇ ಮತ್ತು 10ನೇ ಮಹಡಿ, ವಿಶ್ವೇಶ್ವರಯ್ಯ ಗೋಪುರ ಡಾ. ಬಿ.ಆರ್. ಅಂಬೇಡ್ಕರ್ ವೀಧಿನಗರ, Bengaluru, KA, 560001
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.

.jpeg)