RRB NTPC Recruitment 2026: ರೈಲ್ವೆ ಇಲಾಖೆಯಲ್ಲಿ 3,477 ಹುದ್ದೆಗಳ ಬೃಹತ್ ನೇಮಕಾತಿ! ಅಧಿಸೂಚನೆ ಪ್ರಕಟ, ಸಂಪೂರ್ಣ ಮಾಹಿತಿ ಇಲ್ಲಿದೆ

RRB NTPC Recruitment 2026: ರೈಲ್ವೆ ಇಲಾಖೆಯಲ್ಲಿ 3,477 ಹುದ್ದೆಗಳ ಬೃಹತ್ ನೇಮಕಾತಿ! ಅಧಿಸೂಚನೆ ಪ್ರಕಟ, ಸಂಪೂರ್ಣ ಮಾಹಿತಿ ಇಲ್ಲಿದೆ
Published by Yallamma G
21 ಸೆಪ್ಟೆಂಬರ್ 2026 Indian Railway
Tags: Degree

RRB NTPC Recruitment 2026: ರೈಲ್ವೆ ಇಲಾಖೆಯಲ್ಲಿ 3,477 ಪದವೀಧರ ಹುದ್ದೆಗಳ ಬೃಹತ್ ನೇಮಕಾತಿ! ಮುನ್ಸೂಚನಾ ಅಧಿಸೂಚನೆ ಪ್ರಕಟ

 

ಭಾರತೀಯ ರೈಲ್ವೆಯಲ್ಲಿ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಲು ಕಾಯುತ್ತಿರುವ ರಾಜ್ಯದ ಪದವೀಧರ ಉದ್ಯೋಗಾಕಾಂಕ್ಷಿಗಳಿಗೆ ರೈಲ್ವೆ ನೇಮಕಾತಿ ಮಂಡಳಿಯು (RRB) ಬೃಹತ್ ಸಿಹಿಸುದ್ದಿ ನೀಡಿದೆ. ಬಹುನಿರೀಕ್ಷಿತ 'ನಾನ್-ಟೆಕ್ನಿಕಲ್ ಪಾಪ್ಯುಲರ್ ಕ್ಯಾಟಗರಿಸ್' (NTPC - Graduate Level) ಹುದ್ದೆಗಳ ಭರ್ತಿಗಾಗಿ ಕೇಂದ್ರೀಕೃತ ಉದ್ಯೋಗ ಅಧಿಸೂಚನೆ (CEN No. 06/2026) ಯ ಮುನ್ಸೂಚನಾ ಪ್ರಕಟಣೆಯನ್ನು ಬಿಡುಗಡೆ ಮಾಡಲಾಗಿದೆ.

 

ಒಟ್ಟು 3,477 ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ಮಂಡಳಿ ನಿರ್ಧರಿಸಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯು ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾಗಲಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ: 08 ಅಕ್ಟೋಬರ್ 2026 ರಿಂದ ಪ್ರಾರಂಭಗೊಂಡು 06 ನವೆಂಬರ್ 2026 ರಾತ್ರಿ 23:59 ಗಂಟೆಯವರೆಗೆ ಅರ್ಜಿಸಲ್ಲಿಸಲು ಅವಕಾಶವನ್ನುನೀಡಲಾಗಿದೆ.
 

ಈ ನೇಮಕಾತಿಯ ಪ್ರಮುಖ ದಿನಾಂಕಗಳು, ವೇತನ ಶ್ರೇಣಿ ಮತ್ತು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಕಡ್ಡಾಯವಾಗಿ ಮಾಡಬೇಕಾದ ಆಧಾರ್ ಅಪ್‌ಡೇಟ್ ಕುರಿತಾದ ಸಂಪೂರ್ಣ ವಿವರಣೆ ಇಲ್ಲಿದೆ.  

 

 

ನೇಮಕಾತಿ ಮುಖ್ಯಾಂಶಗಳು (Overview)

  • ನೇಮಕಾತಿ ಪ್ರಾಧಿಕಾರ: ರೈಲ್ವೆ ನೇಮಕಾತಿ ಮಂಡಳಿಗಳು (RRBs)
  • ಅಧಿಸೂಚನೆ ಸಂಖ್ಯೆ: CEN No. 06/2026
  • ಹುದ್ದೆಯ ಹೆಸರು: NTPC - ಪದವೀಧರ ಹಂತದ ವಿವಿಧ ಹುದ್ದೆಗಳು (Graduate Level)
  • ಒಟ್ಟು ಹುದ್ದೆಗಳ ಸಂಖ್ಯೆ: 3,477 ಹುದ್ದೆಗಳು
  • ವೇತನ ಶ್ರೇಣಿ: 7ನೇ ವೇತನ ಆಯೋಗದ ಅನ್ವಯ ಲೆವೆಲ್-5 ಮತ್ತು ಲೆವೆಲ್-6
  • ಅರ್ಜಿ ಸಲ್ಲಿಕೆ ವಿಧಾನ: ಕೇವಲ ಆನ್‌ಲೈನ್ ಮೂಲಕ

 

ಪ್ರಮುಖ ದಿನಾಂಕಗಳು (Tentative Dates)
ಅಭ್ಯರ್ಥಿಗಳು ಈ ಕೆಳಗಿನ ತಾತ್ಕಾಲಿಕ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧತೆ ಆರಂಭಿಸಬಹುದು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 08 ಅಕ್ಟೋಬರ್ 2026 (ತಾತ್ಕಾಲಿಕ)
  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06 ನವೆಂಬರ್ 2026 (ರಾತ್ರಿ 23:59 ಗಂಟೆಯವರೆಗೆ)
  • ಅಧಿಕೃತ ಅರ್ಜಿ ಸಲ್ಲಿಕೆ ಪೋರ್ಟಲ್: www.rrbapply.gov.in

 

ಮುಂದೆ ಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಈ ಲಿಂಕ್ ಮೂಲಕ ಕೂಡಲೇ ಖರೀದಿಸಿ

 

ಹುದ್ದೆಗಳ ಸ್ವರೂಪ ಮತ್ತು ವೇತನ (Level 5 & 6)
ಈ ನೇಮಕಾತಿಯು ಕೇವಲ ಪದವೀಧರರಿಗೆ (Graduates) ಮಾತ್ರ ಸೀಮಿತವಾಗಿದೆ. ರೈಲ್ವೆ ಇಲಾಖೆಯಲ್ಲಿ ಲೆವೆಲ್-5 ಮತ್ತು ಲೆವೆಲ್-6 ಎಂದರೆ ಅತ್ಯಂತ ಜವಾಬ್ದಾರಿಯುತ ಹಾಗೂ ಹೆಚ್ಚಿನ ವೇತನ ಶ್ರೇಣಿಯ ಹುದ್ದೆಗಳಾಗಿವೆ.

(ಸಾಮಾನ್ಯವಾಗಿ NTPC ಯಲ್ಲಿ ಲೆವೆಲ್-5 ಮತ್ತು 6 ರ ಅಡಿಯಲ್ಲಿ ಸ್ಟೇಷನ್ ಮಾಸ್ಟರ್ (Station Master), ಗೂಡ್ಸ್ ಗಾರ್ಡ್ (Goods Guard), ಸೀನಿಯರ್ ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಮುಂತಾದ ಹುದ್ದೆಗಳು ಬರುತ್ತವೆ).   

ಈ ಹುದ್ದೆಗಳಿಗೆ ನಿಗದಿತ ಶೈಕ್ಷಣಿಕ ಅರ್ಹತೆ, ವೈದ್ಯಕೀಯ ಮಾನದಂಡಗಳು ಮತ್ತು ನಿಖರವಾದ ವಯೋಮಿತಿಯ ಮಾಹಿತಿಯು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ವಿವರವಾದ ಅಧಿಸೂಚನೆಯಲ್ಲಿ (Detailed CEN) ಲಭ್ಯವಾಗಲಿದೆ. 

 

ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಕಡ್ಡಾಯವಾಗಿ ಮಾಡಬೇಕಾದ ಕೆಲಸ!
ರೈಲ್ವೆ ಇಲಾಖೆಯು ಈ ಬಾರಿಯ ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿದೆ. ಅರ್ಜಿ ಸಲ್ಲಿಕೆಯ ವಿಳಂಬ ಮತ್ತು ಅನನುಕೂಲತೆಯನ್ನು ತಪ್ಪಿಸಲು ಅಭ್ಯರ್ಥಿಗಳು ಈ ಕೆಳಗಿನ ಅಂಶಗಳನ್ನು ತಪ್ಪದೇ ಪಾಲಿಸಬೇಕು:

  • ಆಧಾರ್ ಪರಿಶೀಲನೆ ಕಡ್ಡಾಯ: ಆನ್‌ಲೈನ್ ಅರ್ಜಿ ತುಂಬುವಾಗ ಅಭ್ಯರ್ಥಿಗಳು ತಮ್ಮ ಪ್ರಾಥಮಿಕ ವಿವರಗಳನ್ನು ಆಧಾರ್ (Aadhaar) ಬಳಸಿ ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಬೇಕು.  
  • SSLC ಅಂಕಪಟ್ಟಿಯೊಂದಿಗೆ ಹೊಂದಾಣಿಕೆ: ಆಧಾರ್ ಕಾರ್ಡ್‌ನಲ್ಲಿರುವ ನಿಮ್ಮ ಪೂರ್ಣ ಹೆಸರು (Full Name) ಮತ್ತು ಜನ್ಮ ದಿನಾಂಕ (Date of Birth) ಕಡ್ಡಾಯವಾಗಿ ನಿಮ್ಮ 10ನೇ ತರಗತಿಯ (SSLC) ಅಂಕಪಟ್ಟಿಯಲ್ಲಿರುವ ವಿವರಗಳಿಗೆ ಶೇ. 100ರಷ್ಟು ಹೊಂದಾಣಿಕೆಯಾಗಬೇಕು.  
  • ಬಯೋಮೆಟ್ರಿಕ್ ಅಪ್‌ಡೇಟ್: ಒಂದು ವೇಳೆ ಆಧಾರ್ ಮತ್ತು ಅಂಕಪಟ್ಟಿಯ ವಿವರಗಳಲ್ಲಿ ವ್ಯತ್ಯಾಸವಿದ್ದರೆ, ಆನ್‌ಲೈನ್ ಅರ್ಜಿ ಸಲ್ಲಿಸುವ ಮುನ್ನವೇ ನಿಮ್ಮ ಆಧಾರ್ ಕಾರ್ಡ್‌ ಅನ್ನು ಇತ್ತೀಚಿನ ಫೋಟೋ ಮತ್ತು ಬಯೋಮೆಟ್ರಿಕ್‌ನೊಂದಿಗೆ (ಬೆರಳಚ್ಚು & ಐರಿಸ್) ಕಡ್ಡಾಯವಾಗಿ ಅಪ್‌ಡೇಟ್ ಮಾಡಿಸಿಕೊಳ್ಳಲು RRB ಕಟ್ಟುನಿಟ್ಟಾಗಿ ಸೂಚಿಸಿದೆ.  

 

ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಕೆ (How to Apply)
ವಯೋಮಿತಿ (01.01.2027 ಕ್ಕೆ ಅನ್ವಯವಾಗುವಂತೆ), ವೈದ್ಯಕೀಯ ಮಾನದಂಡಗಳು (Medical Standard), ಶೈಕ್ಷಣಿಕ ಅರ್ಹತೆಗಳು ಮತ್ತು ಮೀಸಲಾತಿ ನಿಯಮಗಳ ಸಂಪೂರ್ಣ ವಿವರಗಳನ್ನು ಒಳಗೊಂಡ 'ವಿಸ್ತೃತ ಅಧಿಸೂಚನೆಯನ್ನು' (Detailed CEN No. 06/2026) RRB ಯ ಅಧಿಕೃತ ಸಾಮಾನ್ಯ ವೆಬ್‌ಸೈಟ್ https://rrb.indianrailways.gov.in ನಲ್ಲಿ ಶೀಘ್ರದಲ್ಲೇ ಪ್ರಕಟಿಸಲಾಗುವುದು.   

ಅರ್ಜಿಗಳನ್ನು ಸಲ್ಲಿಸಲು ಅಭ್ಯರ್ಥಿಗಳು https://www.rrbapply.gov.in ಪೋರ್ಟಲ್ ಅನ್ನು ಬಳಸಬೇಕು.

 

KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

KPSCVaani ಸಲಹೆ: ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಮತ್ತು SSLC ಮಾರ್ಕ್ಸ್ ಕಾರ್ಡ್‌ನಲ್ಲಿರುವ ಹೆಸರಿನ ಕಾಗುಣಿತ (Spelling) ಅಥವಾ ಜನ್ಮ ದಿನಾಂಕದಲ್ಲಿ ವ್ಯತ್ಯಾಸವಿದ್ದರೆ, ಇಂದೇ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಸರಿಪಡಿಸಿಕೊಳ್ಳಿ.

 

ಇದು ಕೇವಲ ಮುನ್ಸೂಚನಾ ಪ್ರಕಟಣೆಯಾಗಿದ್ದು (Indicative Notice), ಶೀಘ್ರದಲ್ಲೇ ಎಲ್ಲಾ RRB ಗಳ ಸಾಮಾನ್ಯ ವೆಬ್‌ಸೈಟ್‌ನಲ್ಲಿ (https://rrb.indianrailways.gov.in) ಸಂಪೂರ್ಣ ವಿವರವಾದ ಅಧಿಸೂಚನೆ ಪ್ರಕಟವಾಗಲಿದೆ.   

 

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ಸಿಲಬಸ್ ಮತ್ತು ನೇಮಕಾತಿಯ ಕ್ಷಣಕ್ಷಣದ ಲೈವ್ ಅಪ್‌ಡೇಟ್‌ಗಳಿಗಾಗಿ ನಮ್ಮ ಜಾಲತಾಣ KPSCVaani ಅನ್ನು ನಿರಂತರವಾಗಿ ಭೇಟಿ ಮಾಡಿ.

Job Overview
No. of posts
3477
Start Date
8 ಅಕ್ಟೋಬರ್ 2026
End Date
6 ನವೆಂಬರ್ 2026
Employment Type
FULL_TIME
Organization
RRB (Website)
Location
Room No. 457, Rail Bhawan, Raisina Road,, New Delhi, DL, 110001
To Download Official Notification
Related Tags: Degree
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.