SAIL Jobs 2026: ಪರೀಕ್ಷೆ ಇಲ್ಲ, ಕೇವಲ ವಾಕ್-ಇನ್ ಇಂಟರ್ವ್ಯೂ ಮೂಲಕ ನೇಮಕಾತಿ, ಇಂದೇ ಸಂಪೂರ್ಣ ಮಾಹಿತಿ ತಿಳಿಯಿರಿ.

SAIL Jobs 2026: ಪರೀಕ್ಷೆ ಇಲ್ಲ, ಕೇವಲ ವಾಕ್-ಇನ್ ಇಂಟರ್ವ್ಯೂ ಮೂಲಕ ನೇಮಕಾತಿ, ಇಂದೇ ಸಂಪೂರ್ಣ ಮಾಹಿತಿ ತಿಳಿಯಿರಿ.
Published by Yallamma G
48 minutes ago Others State
Tags: Degree

ಭಾರತೀಯ ಉಕ್ಕು ಪ್ರಾಧಿಕಾರದ (SAIL) ಬಿಲಾಯ್ ಘಟಕದಲ್ಲಿ 710 ಅಪ್ರೆಂಟಿಸ್ ಹುದ್ದೆಗಳಿಗೆ ಭರ್ಜರಿ ನೇಮಕಾತಿ!

 

ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಾರ್ವಜನಿಕ ಉದ್ದಿಮೆಯಾದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ತನ್ನ ಬಿಲಾಯ್ ಸ್ಟೀಲ್ ಪ್ಲಾಂಟ್ (BSP) ಘಟಕದಲ್ಲಿ 2026-27ನೇ ಸಾಲಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. 10ನೇ ತರಗತಿ, ಐಟಿಐ, ಡಿಪ್ಲೊಮಾ ಹಾಗೂ ಪದವಿ ಪೂರ್ಣಗೊಳಿಸಿ ವೃತ್ತಿಪರ ಕೌಶಲ್ಯ ತರಬೇತಿ ಪಡೆಯಲು ಉತ್ಸುಕರಾಗಿರುವ ಯುವಕರಿಗೆ ಇದೊಂದು ಮಹತ್ವದ ಅವಕಾಶವಾಗಿದೆ.

 

ಅಕ್ಟೋಬರ್ 20, 2026 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಒಟ್ಟು 710 ಅಪ್ರೆಂಟಿಸ್ ಹುದ್ದೆಗಳನ್ನು ಈ ಅಭಿಯಾನದ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹9,600 ರಿಂದ ₹12,300 ರವರೆಗೆ ಆಕರ್ಷಕ ಸ್ಟೈಫಂಡ್ ಅಥವಾ ಭತ್ಯೆಯನ್ನು ನೀಡಲಾಗುತ್ತದೆ.

 

ದೇಶದ ಅತ್ಯಂತ ದೊಡ್ಡ ಉಕ್ಕು ಉತ್ಪಾದನಾ ಘಟಕದಲ್ಲಿ ತರಬೇತಿ ಪಡೆಯುವ ಮೂಲಕ ಭವಿಷ್ಯದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಗಿಳಿಸಿಕೊಳ್ಳಲು ಇದು ಸೂಕ್ತ ವೇದಿಕೆಯಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕೂ ಮುನ್ನ ತಮ್ಮ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಬಹಳ ಮುಖ್ಯವಾಗಿದೆ.

 

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..

 

SAIL ಹುದ್ದೆಯ ಅಧಿಸೂಚನೆ

  • ಸಂಸ್ಥೆಯ ಹೆಸರು : ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (SAIL)
  • ಹುದ್ದೆಗಳ ಸಂಖ್ಯೆ: 710
  • ಉದ್ಯೋಗ ಸ್ಥಳ: ಛತ್ತೀಸ್‌ಗಢ
  • ಹುದ್ದೆ ಹೆಸರು: ಅಪ್ರೆಂಟಿಸ್
  • ಸಂಬಳ: ತಿಂಗಳಿಗೆ ರೂ. 9,600 – 12,300/-

 

ಶೈಕ್ಷಣಿಕ ಅರ್ಹತೆ ಮತ್ತು ಪ್ರಮುಖ ಷರತ್ತುಗಳು

  • ವಿದ್ಯಾರ್ಹತೆ: ಮಾನ್ಯತೆ ಪಡೆದ ಸಂಸ್ಥೆಯಿಂದ ಐಟಿಐ, ಡಿಪ್ಲೊಮಾ ಅಥವಾ ಸಂಬಂಧಪಟ್ಟ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
  • ಮುಖ್ಯ ನಿಯಮ: ಕಳೆದ 5 ವರ್ಷಗಳಲ್ಲಿ (ಅಂದರೆ 2022 ರಿಂದ 2026ರ ನಡುವೆ) ರೇಗ್ಯುಲರ್ ಕೋರ್ಸ್ ಮೂಲಕ ತೇರ್ಗಡೆಯಾದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

 

ಮಾಸಿಕ ಸ್ಟೈಫಂಡ್ (Stipend) ವಿವರ

  • ಗ್ರಾಜುಯೇಟ್ ಅಪ್ರೆಂಟಿಸ್‌ಗಳಿಗೆ: ಮಾಸಿಕ ₹12,300/-
  • ಡಿಪ್ಲೊಮಾ ಅಪ್ರೆಂಟಿಸ್‌ಗಳಿಗೆ: ಮಾಸಿಕ ₹10,900/-
  • ಐಟಿಐ ಅಪ್ರೆಂಟಿಸ್‌ಗಳಿಗೆ: ಮಾಸಿಕ ₹9,600/- ಅಥವಾ ಎಂಎಸ್‌ಡಿಇ ನಿಯಮಗಳನ್ವಯ ಭತ್ಯೆ ಸಿಗಲಿದೆ.

 

ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆ

  • ವಯೋಮಿತಿ: ಅಕ್ಟೋಬರ್ 31, 2026 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 28 ವರ್ಷ ವಯೋಮಿತಿ ಮೀರಿರಬಾರದು. ಸರ್ಕಾರಿ ನಿಯಮದಂತೆ ಸಡಿಲಿಕೆ ಇರುತ್ತದೆ.
  • ಆಯ್ಕೆ ವಿಧಾನ: 10ನೇ ತರಗತಿ ಅಂಕಗಳಿಗೆ ಶೇ.30 ಹಾಗೂ ಡಿಗ್ರಿ ಅಥವಾ ಡಿಪ್ಲೊಮಾ/ಐಟಿಐ ಅಂಕಗಳಿಗೆ ಶೇ.70 ರಷ್ಟು ವೇಟೇಜ್ ನೀಡಿ ಅಭ್ಯರ್ಥಿಗಳನ್ನು ಶಾರ್ಟ್‌‌ಲಿಸ್ಟ್ ಮಾಡಿ ನೇರ ವಾಕ್-ಇನ್ ಇಂಟರ್ವ್ಯೂ ಮೂಲಕ ಆಯ್ಕೆ ಮಾಡಲಾಗುತ್ತದೆ.

 

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಪ್ರಮುಖ ದಿನಾಂಕಗಳು

  1. ಐಟಿಐ ಅಭ್ಯರ್ಥಿಗಳು: apprenticeshipindia.org ಪೋರ್ಟಲ್ ಮೂಲಕ 'SAIL BHILAI STEEL PLANT' ಎಸ್ಟಾಬ್ಲಿಷ್ಮೆಂಟ್‌ಗೆ ಅರ್ಜಿ ಸಲ್ಲಿಸಬೇಕು.
  2. ಡಿಪ್ಲೊಮಾ ಮತ್ತು ಡಿಗ್ರಿ ಅಭ್ಯರ್ಥಿಗಳು: nats.education.gov.in ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು ಅರ್ಜಿ ಹಾಕಬೇಕು.
  3. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 20, 2026.
  4. ಸಂದರ್ಶನ ನಡೆಯುವ ಸ್ಥಳ: ರೂಮ್ ನಂಬರ್ 123, HRDC ಬಿಲಾಯ್ ಸ್ಟೀಲ್ ಪ್ಲಾಂಟ್, ಛತ್ತೀಸ್‌ಗಢ - 490001. ಅಕ್ಟೋಬರ್ 27 ರಿಂದ ನವೆಂಬರ್ 21, 2026 ರವರೆಗೆ ಸಂದರ್ಶನ ಜರುಗಲಿದೆ.

 

ಪ್ರತಿದಿನದ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್‌ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ

 

ವೃತ್ತಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಇದೊಂದು ಅತ್ಯುತ್ತಮ ವೇದಿಕೆಯಾಗಿದ್ದು, ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇಂತಹ ನಿಖರ ಉದ್ಯೋಗ ಅಧಿಸೂಚನೆಗಳಿಗಾಗಿ ಪ್ರತಿದಿನ KPSCVaani ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಿ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಟೆಲಿಗ್ರಾಮ್, ವಾಟ್ಸಾಪ್ ಗ್ರೂಪ್‌ಗಳಲ್ಲಿ ಹಂಚಿಕೊಳ್ಳಲು ಮರೆಯದಿರಿ!

 

Job Overview
No. of posts
710
End Date
17 ನವೆಂಬರ್ 2026
Pay Scale
9600 - 12300 INR
Employment Type
FULL_TIME
Organization
SAIL (Website)
Location
Ispat Bhawan, Lodhi Road, New Delhi, DL, 110003
To Download Official Notification
Related Tags: Degree
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.