PNB ನೇಮಕಾತಿ 2026: ಪದವೀಧರರಿಗೆ ಸಿಹಿ ಸುದ್ದಿ! ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 5,000 ಕ್ಕೂ ಹೆಚ್ಚು ಅಪ್ರೆಂಟಿಸ್ ಹುದ್ದೆಗಳು - ಕರ್ನಾಟಕದಲ್ಲೂ ಭರ್ಜರಿ ಅವಕಾಶ
Published by Yallamma G
24 ಫೆಬ್ರವರಿ 2026
Others
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 2025-26ನೇ ಸಾಲಿನ 'ಅಪ್ರೆಂಟಿಸ್' (ಶಿಶಿಕ್ಷು) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಯಾವುದೇ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 24-ಫೆಬ್ರವರಿ-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 15,000 ರೂ. ವರೆಗೆ ಶಿಷ್ಯವೇತನ (Stipend) ದೊರೆಯಲಿದ್ದು, ಇದರ ಸಂಪೂರ್ಣ ಮಾಹಿತಿ, ಅರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ವಿವರವಾಗಿ ನೀಡಲಾಗಿದೆ.
VSKUB ಹುದ್ದೆಯ ಅಧಿಸೂಚನೆ
| ವಿವರ | ಮಾಹಿತಿ |
| ಸಂಸ್ಥೆ | ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) |
| ಹುದ್ದೆಯ ಹೆಸರು | ಅಪ್ರೆಂಟಿಸ್ (Apprentice) |
| ಒಟ್ಟು ಹುದ್ದೆಗಳು | 5,138 |
| ಕರ್ನಾಟಕದಲ್ಲಿರುವ ಹುದ್ದೆಗಳು | 64 (ಬೆಂಗಳೂರು ಮತ್ತು ಹುಬ್ಬಳ್ಳಿ ವೃತ್ತ) |
| ಅರ್ಜಿ ಸಲ್ಲಿಸಲು ಆರಂಭ ದಿನಾಂಕ | 08-02-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 24-02-2026 |
| ಪರೀಕ್ಷೆ ದಿನಾಂಕ (Tentative) | ಮಾರ್ಚ್ 2026ರ ಮೊದಲ ವಾರ |
ಕರ್ನಾಟಕ ರಾಜ್ಯದಲ್ಲಿ ಒಟ್ಟು 64 ಹುದ್ದೆಗಳನ್ನು ಮೀಸಲಿಡಲಾಗಿದೆ. ಇವುಗಳನ್ನು ಬೆಂಗಳೂರು ಮತ್ತು ಹುಬ್ಬಳ್ಳಿ ವೃತ್ತಗಳ ಅಡಿಯಲ್ಲಿ ಹಂಚಿಕೆ ಮಾಡಲಾಗಿದೆ:
| ವೃತ್ತ (Circle) | ಒಟ್ಟು ಹುದ್ದೆಗಳು |
| ಬೆಂಗಳೂರು (Bangalore) | 44 |
| ಹುಬ್ಬಳ್ಳಿ (Hubli) | 20 |
| ಒಟ್ಟು | 64 |
- ಕಡ್ಡಾಯ ಭಾಷೆ: ಕರ್ನಾಟಕದಿಂದ ಅರ್ಜಿ ಸಲ್ಲಿಸುವವರು 'ಕನ್ನಡ' ಭಾಷೆಯಲ್ಲಿ ಓದಲು, ಬರೆಯಲು ಮತ್ತು ಮಾತನಾಡಲು ಶಕ್ತರಾಗಿರಬೇಕು.
ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Degree) ಮುಗಿರಿಸಬೇಕು.
- ಪ್ರಮುಖ ಸೂಚನೆ: ಪದವಿ ಫಲಿತಾಂಶವು 31.12.2025 ರ ಒಳಗಾಗಿ ಪ್ರಕಟವಾಗಿರಬೇಕು. ಅಭ್ಯರ್ಥಿಯು ಮಾರ್ಕ್ಸ್ ಕಾರ್ಡ್ ಅಥವಾ ಪ್ರಾವಿಜನಲ್ ಸರ್ಟಿಫಿಕೇಟ್ ಹೊಂದಿರಬೇಕು.
- ಭಾಷಾ ಜ್ಞಾನ: ಅಭ್ಯರ್ಥಿಯು ತಾನು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯಲ್ಲಿ (ಕರ್ನಾಟಕಕ್ಕೆ - ಕನ್ನಡ) ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಸಮರ್ಥರಾಗಿರಬೇಕು.
ಅಭ್ಯರ್ಥಿಗಳ ವಯಸ್ಸನ್ನು 01.01.2026 ಕ್ಕೆ ಅನ್ವಯವಾಗುವಂತೆ ಲೆಕ್ಕಹಾಕಲಾಗುತ್ತದೆ:
ಕನಿಷ್ಠ ವಯಸ್ಸು: 20 ವರ್ಷಗಳು
ಗರಿಷ್ಠ ವಯಸ್ಸು: 28 ವರ್ಷಗಳು (ಸಾಮಾನ್ಯ ವರ್ಗ)
ಜನ್ಮ ದಿನಾಂಕ: ಅಭ್ಯರ್ಥಿಯು 02.01.1998 ಮತ್ತು 01.01.2006 ರ ನಡುವೆ ಜನಿಸಿರಬೇಕು.
ವಯೋಮಿತಿ ಸಡಿಲಿಕೆ (Age Relaxation):
SC/ST ಅಭ್ಯರ್ಥಿಗಳಿಗೆ: 05 ವರ್ಷ
OBC (NCL) ಅಭ್ಯರ್ಥಿಗಳಿಗೆ: 03 ವರ್ಷ
PwBD ಅಭ್ಯರ್ಥಿಗಳಿಗೆ: 10 ವರ್ಷ
ಮಾಸಿಕ ವೇತನ / ಸ್ಟೈಫಂಡ್ (Monthly Stipend)
ಮೆಟ್ರೋ ನಗರಗಳಲ್ಲಿ (ಉದಾ: ಬೆಂಗಳೂರು): ರೂ. 15,000/- ಪ್ರತಿ ತಿಂಗಳಿಗೆ.
ಗ್ರಾಮೀಣ / ಅರೆ-ನಗರ / ನಗರ ಪ್ರದೇಶಗಳಲ್ಲಿ: ರೂ. 12,300/- ಪ್ರತಿ ತಿಂಗಳಿಗೆ.
ಆಯ್ಕೆ ಪ್ರಕ್ರಿಯೆ (Selection Process)
ಅಭ್ಯರ್ಥಿಗಳನ್ನು ಈ ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
- ಆನ್‌ಲೈನ್ ಲಿಖಿತ ಪರೀಕ್ಷೆ (Online Written Test)
- ದಾಖಲೆ ಪರಿಶೀಲನೆ (Document Verification)
- ಸ್ಥಳೀಯ ಭಾಷಾ ಪರೀಕ್ಷೆ (Local Language Test): 10ನೇ ಅಥವಾ 12ನೇ ತರಗತಿಯಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಓದಿದವರಿಗೆ ಈ ಪರೀಕ್ಷೆಯಿಂದ ವಿನಾಯಿತಿ ಇದೆ.
- ವೈದ್ಯಕೀಯ ಪರೀಕ್ಷೆ (Medical Examination)
- ಸಾಮಾನ್ಯ/ಹಣಕಾಸು ಅರಿವು (General/Financial Awareness) - 25 ಪ್ರಶ್ನೆಗಳು
- ಸಾಮಾನ್ಯ ಇಂಗ್ಲಿಷ್ (General English) - 25 ಪ್ರಶ್ನೆಗಳು
- ಕ್ವಾಂಟಿಟೇಟಿವ್ & ರೀಸನಿಂಗ್ ಆಪ್ಟಿಟ್ಯೂಡ್ - 25 ಪ್ರಶ್ನೆಗಳು
- ಕಂಪ್ಯೂಟರ್ ಜ್ಞಾನ (Computer Knowledge) - 25 ಪ್ರಶ್ನೆಗಳು
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಶುಲ್ಕದ ವಿವರ ಈ ಕೆಳಗಿನಂತಿದೆ (GST ಸೇರಿ):
GEN / OBC / EWS (ಪುರುಷರು): ರೂ. 944/-
GEN / OBC / EWS (ಮಹಿಳೆಯರು): ರೂ. 708/-
SC / ST / PwBD (ಪುರುಷ/ಮಹಿಳೆ): ರೂ. 236/-
ಅರ್ಜಿ ಸಲ್ಲಿಸುವುದು ಹೇಗೆ? (How to Apply)
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:
- ಮೊದಲು PNB ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಅಥವಾ BFSI SSC ಪೋರ್ಟಲ್‌ಗೆ (bfsissc.com) ಭೇಟಿ ನೀಡಿ.
- ಅಲ್ಲಿ "PNB Apprenticeship Program 2025-26" ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ವೈಯಕ್ತಿಕ ವಿವರಗಳು ಮತ್ತು ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು (ಫೋಟೋ, ಸಹಿ, ಜಾತಿ ಪ್ರಮಾಣಪತ್ರ) ಅಪ್‌ಲೋಡ್ ಮಾಡಿ.
- ನಿಗದಿತ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
- ಅರ್ಜಿ ಸಲ್ಲಿಸಿದ ನಂತರ, ಅದರ ಪ್ರಿಂಟ್‌ಔಟ್ ತೆಗೆದುಕೊಂಡು ಇಟ್ಟುಕೊಳ್ಳಿ.
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಪದವಿ ಮಾರ್ಕ್ಸ್ ಕಾರ್ಡ್
- ಫೋಟೋ
- ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ)
- PwBD ಪ್ರಮಾಣ ಪತ್ರ (ಅಗತ್ಯವಿದ್ದರೆ)
- PAN ಕಾರ್ಡ್
ಪ್ರಮುಖ ದಿನಾಂಕಗಳು (Important Dates)
|
ವಿಷಯ |
ದಿನಾಂಕ |
| ಅರ್ಜಿ ಸಲ್ಲಿಕೆ ಆರಂಭ 08 ಫೆಬ್ರವರಿ 2026 | 08 ಫೆಬ್ರವರಿ 2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 24 ಫೆಬ್ರವರಿ 2026 |
| ಆನ್‌ಲೈನ್ ಪರೀಕ್ಷೆ ದಿನಾಂಕ (ಸಂಭಾವ್ಯ) | ಮಾರ್ಚ್ 2026ರ ಮೊದಲ ವಾರ |
ಪ್ರಮುಖ ಸೂಚನೆ: ಇದು 1 ವರ್ಷದ ಅವಧಿಯ ಅಪ್ರೆಂಟಿಸ್ ತರಬೇತಿಯಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ಪಡೆಯಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ಇದೊಂದು ಉತ್ತಮ ಅವಕಾಶವಾಗಿದೆ.
ಮುಖ್ಯ ಷರತ್ತುಗಳು
- ಇದು ಉದ್ಯೋಗ ನೇಮಕಾತಿ ಅಲ್ಲ, ತರಬೇತಿ ಅವಕಾಶ ಮಾತ್ರ
- ತರಬೇತಿ ನಂತರ PNB ನಲ್ಲಿ ಕೆಲಸದ ಖಾತರಿ ಇಲ್ಲ
- PF, ESI, ಬೋನಸ್ ಮುಂತಾದ ಉದ್ಯೋಗ ಸೌಲಭ್ಯಗಳು ಸಿಗುವುದಿಲ್ಲ
- ಅಭ್ಯರ್ಥಿ ಹಿಂದೆ ಬೇರೆಡೆ Apprentice ಆಗಿರಬಾರದು
ಹೆಚ್ಚಿನ ಮಾಹಿತಿಗಾಗಿ: ಹೆಚ್ಚಿನ ಉದ್ಯೋಗ ಸುದ್ದಿಗಳಿಗೆ KPSCVaani ಫಾಲೋ ಮಾಡಿರಿ. ಕೆಪಿಎಸ್‌ಸಿ ವಾಣಿ (KPSCVaani) ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ!
Job Overview
- End Date
- 24 ಫೆಬ್ರುವರಿ 2026
- Employment Type
- FULL_TIME
- Organization
- KPSC Vaani (Website)
- Location
- KA,
Apply online Panjab National Bank Apprentice Recruitment 2026
To Buy: ನಿಮ್ಮ ಸ್ಪರ್ಧಾತ್ಮಕ ತಯಾರಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಖರೀದಿಸಿ
Related Tags:
Degree
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.