ಧಾರವಾಡದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತಾಂತ್ರಿಕ ಸಹಾಯಕ, ಡೇಟಾ ಎಂಟ್ರಿ ಆಪರೇಟರ್ ಸೇರಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
ಕೇಂದ್ರ ಸರ್ಕಾರದ ಮಹಾತ್ಮಾ ಗಾಂಧಿ ರಾಷ್ಟೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಧಾರವಾಡದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 18-06-2021 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
* ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 03-06-2021
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18-06-2021
* ಹುದ್ದೆಗಳ ವಿವರ :
- ಸಹಾಯಕ ಜಿಲ್ಲಾ ಸಮನ್ವಯ ಅಧಿಕಾರಿ ADPC - 1
- ಜಿಲ್ಲಾ ಐ.ಇ.ಸಿ.ಸಂಯೋಜಕರು DIEC - 1
- ತಾಲೂಕಾ ಎಂ.ಐ.ಎಸ್. ಸಂಯೋಜಕರು TIMS - 2
- ತಾಲೂಕ ಐ.ಇ.ಸಿ. ಸಂಯೋಜಕರಾದ TIEC - 2
- ತಾಲ್ಲೂಕು ಸಂಯೋಜಕರು TC - 2
- ಡಾಟಾ ಎಂಟ್ರಿ ಆಪರೇಟರ್ DEO - 2
- ತಾಂತ್ರಿಕ ಸಹಾಯಕರು (ಕೃಷಿ) - 1
- ತಾಂತ್ರಿಕ ಸಹಾಯಕರು (ಅರಣ್ಯ) - 2
- ತಾಲ್ಲೂಕ ತಾಂತ್ರಿಕ ಸಹಾಯಕರು TAE - 1
Job Overview
- No. of posts
- 14
- Start Date
- 3 ಜೂನ್ 2021
- End Date
- 18 ಜೂನ್ 2021
- Employment Type
- FULL_TIME
- Organization
- KPSC Vaani (Website)
- Location
- ಧಾರವಾಡ, KA,
Qualification:
- ಸಹಾಯಕ ಜಿಲ್ಲಾ ಸಮನ್ವಯ ಅಧಿಕಾರಿ ADPC ಹುದ್ದೆಗೆ :
ಭಾರತೀಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ / ಸಮಾನ ಸಂಸ್ಥೆಗಳಲ್ಲಿ ಬಿ.ಇ / ಬಿಟೆಕ್ ಅಥವಾ ಎಂಬಿಎ ಪದವಿಯನ್ನು ಹೊಂದಿರಬೇಕು.
- ಜಿಲ್ಲಾ ಐ.ಇ.ಸಿ.ಸಂಯೋಜಕರು DIEC ಹುದ್ದೆಗೆ :
ಕಂಪ್ಯೂಟರ್ ಜ್ಞಾನದೊಂದಿಗೆ ಸಾಮೂಹಿಕ ಸಂವಹನ, ಜಾಹೀರಾತು ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ಪೋಸ್ಟ್ ಪದವಿಯನ್ನು ಹೊಂದಿರಬೇಕು.
- ತಾಲೂಕಾ ಎಂ.ಐ.ಎಸ್. ಸಂಯೋಜಕರು TIMS ಹುದ್ದೆಗೆ :
ಕಂಪ್ಯೂಟರ್ ವಿಭಾಗದಲ್ಲಿ ಬಿ.ಸಿಎ / ಬಿಎಸ್ಸಿ ಪದವಿಯನ್ನು ಹೊಂದಿರಬೇಕು ಮತ್ತು ಕಂಪ್ಯೂಟರ್ ಮತ್ತು ಎಂ.ಎಸ್ ಆಫೀಸ್ನಲ್ಲಿ ಪ್ರವೀಣರಾಗಿರಬೇಕು.
- ತಾಲೂಕ ಐ.ಇ.ಸಿ. ಸಂಯೋಜಕರಾದ TIEC ಹುದ್ದೆಗೆ :
ಎಂ.ಎಸ್.ಡಬ್ಲ್ಯೂ / ಕಂಪ್ಯೂಟರ್ ಜ್ಞಾನದೊಂದಿಗೆ ಸಾಮೂಹಿಕ ಸಂವಹನ, ಜಾಹೀರಾತು ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ಪದವಿ.
- ತಾಲ್ಲೂಕು ಸಂಯೋಜಕರು TC ಹುದ್ದೆಗೆ :
ಸಿವಿಲ್ ಎಂಜಿನಿಯರಿಂಗ್ ನಲ್ಲಿ ಬಿ.ಇ ಅಥವಾ ಬಿಟೆಕ್ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ಡಾಟಾ ಎಂಟ್ರಿ ಆಪರೇಟರ್ DEO ಹುದ್ದೆಗೆ :
ಒಂದು ವರ್ಷದ ಕಂಪ್ಯೂಟರ್ ಜ್ಞಾನ ಪ್ರಮಾಣಪತ್ರದೊಂದಿಗೆ ಪಿ.ಯು.ಸಿ ಯನ್ನು ಮುಗಿಸಿರಬೇಕು.
- ತಾಂತ್ರಿಕ ಸಹಾಯಕರು (ಕೃಷಿ) ಹುದ್ದೆಗೆ :
ಬಿ.ಎಸ್.ಸಿ (ಕೃಷಿ) ಪದವಿಯನ್ನು ಹೊಂದಿರಬೇಕು.
- ತಾಂತ್ರಿಕ ಸಹಾಯಕರು (ಅರಣ್ಯ) ಹುದ್ದೆಗೆ :
ಬಿ.ಎಸ್.ಸಿ (ಅರಣ್ಯ) ಪದವಿಯನ್ನು ಹೊಂದಿರಬೇಕು.
- ತಾಲ್ಲೂಕ ತಾಂತ್ರಿಕ ಸಹಾಯಕರು TAE ಹುದ್ದೆಗೆ :
ಸಿವಿಲ್ ಎಂಜಿನಿಯರಿಂಗ್ ನಲ್ಲಿ ಬಿ.ಇ ಅಥವಾ ಬಿಟೆಕ್ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
Age Limit:
- ಕನಿಷ್ಠ 21 ವರ್ಷ ವಯಸ್ಸನ್ನು ಹೊಂದಿರಬೇಕು.
- ಗರಿಷ್ಟ 40 ವರ್ಷ ವಯಸ್ಸನ್ನು ಮೀರಿರಬಾರದು.
Comments