KVS Walk-in Interview 2026: ಹುಬ್ಬಳ್ಳಿಯಲ್ಲಿ ಕೇಂದ್ರೀಯ ವಿದ್ಯಾಲಯ ಹುದ್ದೆಗಳ ಭರ್ತಿ, ಸೆಪ್ಟೆಂಬರ್ 26ಕ್ಕೆ ನೇರ ಸಂದರ್ಶನ!

Tags: B.E
Published by: Heena Sheregar
|
KVS Walk-in Interview 2026: ಹುಬ್ಬಳ್ಳಿಯಲ್ಲಿ ಕೇಂದ್ರೀಯ ವಿದ್ಯಾಲಯ ಹುದ್ದೆಗಳ ಭರ್ತಿ, ಸೆಪ್ಟೆಂಬರ್ 26ಕ್ಕೆ ನೇರ ಸಂದರ್ಶನ!

ಕೇಂದ್ರ ಸರ್ಕಾರದ ಶಾಲೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಯಸುವ ಕರ್ನಾಟಕದ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ ಸಿಕ್ಕಿದೆ! ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹುಬ್ಬಳ್ಳಿಯ ಪಿ ಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ.2 (PM SHRI Kendriya Vidyalaya No. 2, Hubballi) 2026-27 ನೇ ಶೈಕ್ಷಣಿಕ ಸಾಲಿಗೆ ಗುತ್ತಿಗೆ ಆಧಾರದ ಮೇಲೆ ವೃತ್ತಿಪರ ಬೋಧಕರು (Vocational Instructor) ಹುದ್ದೆಯ ಭರ್ತಿಗೆ ನೇರ ಸಂದರ್ಶನ (Walk-in-Interview) ಕರೆದಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹30,000 ಗೌರವ ಧನ ಸಿಗಲಿದೆ.

 

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯದಲ್ಲಿ ಬಿ.ಇ / ಬಿ.ಟೆಕ್ / ಎಂ.ಟೆಕ್ (Electronics & Communication Engineering) ಪದವಿ ಹಾಗೂ 1 ವರ್ಷದ ಅನುಭವ ಹೊಂದಿರಬೇಕಾಗುತ್ತದೆ. ವಯೋಮಿತಿ 18 ರಿಂದ 65 ವರ್ಷಗಳಾಗಿದ್ದು, ಯಾವುದೇ ರೀತಿಯ ಅರ್ಜಿ ಶುಲ್ಕವಿರುವುದಿಲ್ಲ. ಅರ್ಹ ಅಭ್ಯರ್ಥಿಗಳು ತಮ್ಮ ಅಗತ್ಯ ಮೂಲ ದಾಖಲೆಗಳೊಂದಿಗೆ ಸೆಪ್ಟೆಂಬರ್ 26, 2026 ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

 

ಕೇಂದ್ರ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳು ತಡಮಾಡದೆ ಈ ಅವಕಾಶವನ್ನು ಬಳಸಿಕೊಳ್ಳಿ. ಈ ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಅಧಿಕೃತ ವಿವರಗಳು, ಅರ್ಜಿ ನಮೂನೆ ಮತ್ತು ಸಂಪೂರ್ಣ ಮಾಹಿತಿಗಾಗಿ KPSCVAANI.COM ವೆಬ್‌ಸೈಟ್‌ಗೆ ಭೇಟಿ ನೀಡಿ.

 

 

KVS Hubballi  ನೇಮಕಾತಿ ಮಾಹಿತಿ:

  • ಸಂಸ್ಥೆಯ ಹೆಸರು: ಪಿ ಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ. 2, ಹುಬ್ಬಳ್ಳಿ (KVS Hubballi)
  • ಹುದ್ದೆಯ ಹೆಸರು: ವೃತ್ತಿಪರ ಬೋಧಕರು (Vocational Instructor - Skill Education)  
  • ಒಟ್ಟು ಹುದ್ದೆಗಳು: 01 ಹುದ್ದೆ
  • ಮಾಸಿಕ ವೇತನ: ₹30,000/- (Consolidated Remuneration)  
  • ಉದ್ಯೋಗ ಸ್ಥಳ: ಹುಬ್ಬಳ್ಳಿ, ಕರ್ನಾಟಕ  
  • ಸಂದರ್ಶನದ ದಿನಾಂಕ: 26 ಸೆಪ್ಟೆಂಬರ್ 2026 (ಮಧ್ಯಾಹ್ನ 3:00 ಗಂಟೆಗೆ)   

 

ವಿದ್ಯಾರ್ಹತೆ ಮತ್ತು ಅನುಭವ (Eligibility Criteria):

  • ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ B.E / B.Tech / M.Tech (Electronics & Communication Engineering) ಪೂರ್ಣಗೊಳಿಸಿರಬೇಕು.  
  • ವೃತ್ತಿಪರ ಅನುಭವ: ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷದ ಅನುಭವ (1 Year Experience) ಹೊಂದಿರಬೇಕು.  
  • ಭಾಷಾ ಪ್ರಾವೀಣ್ಯತೆ: ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಬೋಧಿಸುವ ಪ್ರಾವೀಣ್ಯತೆ ಹೊಂದಿರಬೇಕು.  
  • ಕಂಪ್ಯೂಟರ್ ಜ್ಞಾನ: ಗಣಕಯಂತ್ರದ ಬಳಕೆಯ ಜ್ಞಾನ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು

 

 

ವಯೋಮಿತಿ (Age Limit):

  • 31 ಮಾರ್ಚ್ 2026 ರ ಅನ್ವಯ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಕೆಳಗಿನಂತಿರಬೇಕು:  
  • ಕನಿಷ್ಠ ವಯಸ್ಸು: 18 ವರ್ಷಗಳು  
  • ಗರಿಷ್ಠ ವಯಸ್ಸು: 65 ವರ್ಷಗಳು   

 

ಸಂದರ್ಶನ ನಡೆಯುವ ಸ್ಥಳ ಮತ್ತು ಸಮಯ (Interview Venue & Time):

  • ದಿನಾಂಕ: 26/09/2026 (ಶನಿವಾರ)  
  • ಸಮಯ: ಮಧ್ಯಾಹ್ನ 3:00 ಗಂಟೆಗೆ  
  • ಸ್ಥಳ (Venue):
    ಪಿ ಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ. 2,
    ರೈಲ್ವೇ ಜನರಲ್ ಸ್ಟೋರ್ ಎದುರು, ವಿನೋಬಾ ನಗರ,
    ಗದಗ ರಸ್ತೆ, ಹುಬ್ಬಳ್ಳಿ - 580020.   
    ದೂರವಾಣಿ ಸಂಖ್ಯೆ: 0836-2972003   

 

ಇದನ್ನು ಓದಿ: RRB NTPC ನೇಮಕಾತಿ 2026: 12ನೇ ತರಗತಿ ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ 1,688 ಹುದ್ದೆಗಳ ಅವಕಾಶ!

 

ಅರ್ಜಿ ಸಲ್ಲಿಸುವ / ನೋಂದಾಯಿಸಿಕೊಳ್ಳುವ ವಿಧಾನ (Step-by-Step Application Process):

1. ಸಮೈದಾ ಸಾಥಿ ಪೋರ್ಟಲ್‌ನಲ್ಲಿ ನೋಂದಣಿ (Mandatory Registration): ಸಂದರ್ಶನಕ್ಕೆ ಹಾಜರಾಗುವ ಪ್ರತಿಯೊಬ್ಬ ಅಭ್ಯರ್ಥಿಯೂ ಕಡ್ಡಾಯವಾಗಿ https://samvida-sathi.kvs.gov.in/ ಪೋರ್ಟಲ್‌ನಲ್ಲಿ ತಮ್ಮ ಮಾಹಿತಿಯನ್ನು ನೋಂದಾಯಿಸಿಕೊಳ್ಳಬೇಕು.   
2. ಅಗತ್ಯ ದಾಖಲೆಗಳು (Documents Required):

  • ಸಂದರ್ಶನದ ದಿನದಂದು ಕೆಳಗಿನ ದಾಖಲೆಗಳನ್ನು ತರಬೇಕು:  
  • ಎಲ್ಲಾ ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಅನುಭವದ ಮೂಲ ಪ್ರಮಾಣಪತ್ರಗಳು (Original Certificates).  
  • ಸ್ವಯಂ-ದೃಢೀಕರಿಸಿದ (Self-Attested) ಒಂದು ಸೆಟ್ ಝೆರಾಕ್ಸ್ ಪ್ರತಿಗಳು.  
  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು (Passport Size Photos).  
  • ಸರ್ಕಾರಿ ಗುರುತಿನ ಚೀಟಿ (Aadhaar / Voter ID / Driving License).

3. ಪ್ರಮುಖ ಸೂಚನೆ:
ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆ ಅಥವಾ ದಿನಭತ್ಯೆ (TA/DA) ನೀಡುವುದಿಲ್ಲ.  

 

Job Overview
End Date
26 ಸೆಪ್ಟೆಂಬರ್ 2026
Employment Type
FULL_TIME
Organization
KVS Hubballi (Website)
Location
Gadag Road, Huballi, KA, 580020
To download official notification
Related Tags: B.E

Comments