ಸಂಜೀವಿನಿ KSRLPS ಉಡುಪಿ ಜಿಲ್ಲಾ ನೇಮಕಾತಿ 2026: ಕ್ಲಸ್ಟರ್ ಸೂಪರ್‌ವೈಸರ್, ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸರ್ಕಾರಿ ಕ್ಷೇತ್ರದಲ್ಲಿ ಅದರಲ್ಲೂ ಗ್ರಾಮೀಣಾಭಿವೃದ್ಧಿ ವಿಭಾಗದಲ್ಲಿ ಉತ್ತಮ ವೃತ್ತಿಜೀವನ ಕಟ್ಟಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಒಂದು ಉತ್ತಮ ಅವಕಾಶ ಸಿಕ್ಕಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಸ್ಥೆಯು (KSRLPS - ಸಂಜೀವಿನಿ)ಉಡುಪಿ ಜಿಲ್ಲೆಯ ಉಡುಪಿ ಹಾಗೂ ಕಾರ್ಕಳ ತಾಲೂಕುಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯು ಆನ್‌ಲೈನ್ ಮೂಲವೇ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳಿಗೆ ಮಾಸಿಕ 30,000 ರೂಪಾಯಿಯವರೆಗೆ ವೇತನ ದೊರೆಯಲಿದೆ.
ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಬಯಸುವ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಇದೊಂದು ಅತ್ಯುತ್ತಮ ಅವಕಾಶ. 2026ರ ಆಗಸ್ಟ್ 24 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು, ಸೆಪ್ಟೆಂಬರ್ 7ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ರೀತಿಯ ಪರೀಕ್ಷಾ ಶುಲ್ಕವಿಲ್ಲದೆ ನೇರ ಸಂದರ್ಶನ ಮತ್ತು ಅನುಭವದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಈ ನೇಮಕಾತಿಯ ಕುರಿತಾದ ಸಮಗ್ರ ಮಾಹಿತಿ, ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ಸರಳ ಹಂತಗಳನ್ನು ಕೆಳಗೆ ನೀಡಲಾಗಿದೆ. ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮುನ್ನ ಪ್ರತಿಯೊಂದು ವಿವರವನ್ನು ಸರಿಯಾಗಿ ತಿಳಿದುಕೊಳ್ಳಿ.
ನೇಮಕಾತಿಯ ಸಂಕ್ಷಿಪ್ತ ವಿವರಗಳು:
- ಸಂಸ್ಥೆಯ ಹೆಸರು: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಸ್ಥೆ (KSRLPS - ಸಂಜೀವಿನಿ)
- ಹುದ್ದೆಯ ಹೆಸರು: ಕ್ಲಸ್ಟರ್ ಸೂಪರ್‌ವೈಸರ್, ಬ್ಲಾಕ್ ಮ್ಯಾನೇಜರ್ (ಫಾರ್ಮ್ & ನಾನ್-ಫಾರ್ಮ್), ತಾಲೂಕು ಪ್ರೋಗ್ರಾಂ
- ಮ್ಯಾನೇಜರ್ ಮತ್ತು ಡಿಸ್ಟ್ರಿಕ್ಟ್ ಮ್ಯಾನೇಜರ್
- ಒಟ್ಟು ಹುದ್ದೆಗಳು: 06
- ವೇತನ ಶ್ರೇಣಿ: ₹18,000/- ರಿಂದ ₹30,000/- (ಮಾಸಿಕ)
- ಉದ್ಯೋಗ ಸ್ಥಳ: ಉಡುಪಿ ಮತ್ತು ಕಾರ್ಕಳ (ಉಡುಪಿ ಜಿಲ್ಲೆ)
- ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
- ಅಧಿಕೃತ ವೆಬ್‌ಸೈಟ್: ksrlps.karnataka.gov.in
ನೇಮಕಾತಿಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ: 24 ಆಗಸ್ಟ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಸೆಪ್ಟೆಂಬರ್ 2026
KSRLPS Recruitment 2026: ಉಡುಪಿ ಜಿಲ್ಲಾ ಹುದ್ದೆಗಳ ವಿವರ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಸ್ಥೆಯು ಉಡುಪಿ ಮತ್ತು ಕಾರ್ಕಳ ತಾಲೂಕುಗಳ ಬ್ಲಾಕ್ ಹಾಗೂ ಕ್ಲಸ್ಟರ್ ಮಟ್ಟದಲ್ಲಿ ಈ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
- ಕ್ಲಸ್ಟರ್ ಸೂಪರ್‌ವೈಸರ್ (Skill / DDU-GKY): ಉಡುಪಿ: 01
- ಬ್ಲಾಕ್ ಮ್ಯಾನೇಜರ್ (Farm Livelihoods) : ಉಡುಪಿ: 01
- ಬ್ಲಾಕ್ ಮ್ಯಾನೇಜರ್ (Farm Livelihoods) : ಕಾರ್ಕಳ : 01
- ಬ್ಲಾಕ್ ಮ್ಯಾನೇಜರ್ (Non-Farm Livelihoods) : ಕಾರ್ಕಳ : 01
- ತಾಲೂಕು ಪ್ರೋಗ್ರಾಂ ಮ್ಯಾನೇಜರ್ (TPM - Level L4) : ಉಡುಪಿ : 01
- ಡಿಸ್ಟ್ರಿಕ್ಟ್ ಮ್ಯಾನೇಜರ್ (Social Mobilization & IB) : ಉಡುಪಿ (ಎಲ್ಲಾ ತಾಲೂಕುಗಳು) : 01
- ಒಟ್ಟು ಹುದ್ದೆಗಳು : 6 ಹುದ್ದೆಗಳು
ಹುದ್ದೆಗಳಿಗೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆ ಮತ್ತು ಅನುಭವ:
1. ಕ್ಲಸ್ಟರ್ ಸೂಪರ್‌ವೈಸರ್ (Cluster Supervisor):ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation) ಪೂರ್ಣಗೊಳಿಸಿರಬೇಕು. ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವವಿರಬೇಕು. ಗ್ರಾಮಗಳಲ್ಲಿ ಕೌಶಲ್ಯ ಪಂಜಿ (Kaushal Panjee) ಮೂಲಕ ಮಾಹಿತಿ ಸಂಗ್ರಹಿಸುವುದು, ಗ್ರಾಮೀಣ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ಕೇಂದ್ರಗಳ ಉಸ್ತುವಾರಿ ವಹಿಸುವುದು ಮತ್ತು ಉದ್ಯೋಗ ಲಭ್ಯತೆಯ ಟ್ರ್ಯಾಕಿಂಗ್ ಮಾಡುವುದು ಇವರ ಪ್ರಮುಖ ಕಾರ್ಯವಾಗಿರುತ್ತದೆ.
2. ಬ್ಲಾಕ್ ಮ್ಯಾನೇಜರ್ - Farm Livelihoods (ಕಾರ್ಕಳ ಮತ್ತು ಉಡುಪಿ): M.Sc (ಅಗ್ರಿಕಲ್ಚರ್/ಅಲೈಡ್ ಸೈನ್ಸ್) ಜೊತೆಗೆ 1 ವರ್ಷದ ಅನುಭವ ಅಥವಾ B.Sc (ಅಗ್ರಿಕಲ್ಚರ್/ಅಲೈಡ್ ಸೈನ್ಸ್) ಜೊತೆಗೆ 3 ವರ್ಷಗಳ ಅನುಭವ ಹೊಂದಿರಬೇಕು. ಅಥವಾ ಯಾವುದೇ ಮಾಸ್ಟರ್ಸ್ ಡಿಗ್ರಿ ಪಡೆದು 5 ವರ್ಷ ಕೃಷಿ ಆಧಾರಿತ ಜೀವನೋಪಾಯ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಮಹಿಳಾ ಕಿಸಾನ್‌ಗಳಿಗೆ ಬೆಂಬಲ ನೀಡುವುದು ಮತ್ತು ಜೈವಿಕ ಕೃಷಿ ಪದ್ಧತಿ ಪ್ರೋತ್ಸಾಹಿಸುವುದು ಇವರ ಕೆಲಸವಾಗಿದೆ.
3. ಬ್ಲಾಕ್ ಮ್ಯಾನೇಜರ್ - Non-Farm Livelihoods (ಕಾರ್ಕಳ): ಸ್ನಾತಕೋತ್ತರ ಪದವಿ (Post Graduation Degree) ಹೊಂದಿದ್ದು, ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು. ಗ್ರಾಮೀಣ ಉದ್ಯಮಿಗಳನ್ನು ಉತ್ತೇಜಿಸುವುದು, ಇ-ಕಾಮರ್ಸ್ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು ಮತ್ತು ಮುದ್ರಾ ಸಾಲ ಸೌಲಭ್ಯ ಒದಗಿಸುವುದು ಇವರ ಮುಖ್ಯ ಕರ್ತವ್ಯ.
4. ತಾಲೂಕು ಪ್ರೋಗ್ರಾಂ ಮ್ಯಾನೇಜರ್ (Taluk Program Manager - Level L4): 2 ವರ್ಷಗಳ ಪೂರ್ಣಾವಧಿ Post Graduate Degree ಅಥವಾ PG Diploma ಕೋರ್ಸ್ ಪೂರ್ಣಗೊಳಿಸಿರಬೇಕು. ಕನಿಷ್ಠ 5 ವರ್ಷಗಳ ಅನುಭವ ಅಗತ್ಯ (ತಾಲೂಕು ಮಿಷನ್ ಮ್ಯಾನೇಜರ್ ಅಥವಾ ಕ್ಲಸ್ಟರ್ ಸೂಪರ್‌ವೈಸರ್ ಆಗಿ ಕೆಲಸ ಮಾಡಿದವರಿಗೆ ಆದ್ಯತೆ). ಕನ್ನಡ ಮತ್ತು ಇಂಗ್ಲಿಷ್ ಭಾಷಾ ಜ್ಞಾನದ ಜೊತೆಗೆ ಕಂಪ್ಯೂಟರ್ ಬಳಕೆಯ ಜ್ಞಾನ ಕಡ್ಡಾಯ.
5. ಡಿಸ್ಟ್ರಿಕ್ಟ್ ಮ್ಯಾನೇಜರ್ - Social Mobilization & IB: ಸೋಷಿಯಲ್ ಸೈನ್ಸ್, ರೂರಲ್ ಡೆವಲಪ್‌ಮೆಂಟ್, MSW, MBA ಅಥವಾ ಅಗ್ರಿಕಲ್ಚರ್ ಸೈನ್ಸ್‌ನಲ್ಲಿ PG ಪದವಿ ಪಡೆದಿರಬೇಕು. ಸಂಬಂಧಿತ ಕ್ಷೇತ್ರದಲ್ಲಿ 5 ವರ್ಷಕ್ಕಿಂತ ಹೆಚ್ಚಿನ ಅನುಭವ ಹೊಂದಿರಬೇಕು. ಸ್ವಸಹಾಯ ಸಂಘಗಳ (SHG) ಸ್ಥಾಪನೆ, ಬ್ಯಾಂಕ್ ಲಿಂಕ್ ಒದಗಿಸುವುದು ಮತ್ತು ತರಬೇತಿಗಳನ್ನು ಆಯೋಜಿಸುವುದು ಇವರ ಕಾರ್ಯವಾಗಿರುತ್ತದೆ.
ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ
ವಯೋಮಿತಿ ವಿವರ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ 45 ರಿಂದ 50 ವರ್ಷಗಳ ನಡುವೆ ಇರಲಿದೆ. ಹುದ್ದೆಯ ಆಧಾರದ ಮೇಲೆ ವಯೋಮಿತಿಯ ಸಡಿಲಿಕೆ ಅನ್ವಯವಾಗುತ್ತದೆ.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳು, ಕಾರ್ಯಾನುಭವ ಹಾಗೂ ಆನ್‌ಲೈನ್ ಮೂಲಕ ನಡೆಯುವ ನೇರ ಸಂದರ್ಶನ (Interview) ಮತ್ತು ದಾಖಲಾತಿ ಪರಿಶೀಲನೆ ಆಧಾರದ ಮೇಲೆ ಅಂತಿಮ ಆಯ್ಕೆ ಮಾಡಲಾಗುತ್ತದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸರಳ ಹಂತಗಳು:
- ಅಧಿಕೃತ ಜಾಲತಾಣ ksrlps.karnataka.gov.in ಗೆ ಭೇಟಿ ನೀಡಿ.
- ಪೋರ್ಟಲ್‌ನಲ್ಲಿ ನೀವು ಹೊಸ ಬಳಕೆದಾರರಾಗಿದ್ದರೆ Create Account ಅಥವಾ Sign In ಮೂಲಕ ಉದ್ಯೋಗಿ ವಿವರಗಳನ್ನು ನೋಂದಾಯಿಸಿ.
- ನಿಮ್ಮ ಶೈಕ್ಷಣಿಕ ಅರ್ಹತೆಗೆ ಸೂಕ್ತವಾದ ಹುದ್ದೆ ಹಾಗೂ ತಾಲೂಕನ್ನು (ಉಡುಪಿ/ಕಾರ್ಕಳ) ಆಯ್ಕೆ ಮಾಡಿಕೊಳ್ಳಿ.
- ಅಗತ್ಯವಿರುವ ದಾಖಲೆಗಳಾದ ಪದವಿ ಪ್ರಮಾಣಪತ್ರ, ಅನುಭವದ ಸರ್ಟಿಫಿಕೇಟ್, ಆಧಾರ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಅಳತೆಯ ಫೋಟೋ ಅಪ್‌ಲೋಡ್ ಮಾಡಿ.
- ಅರ್ಜಿ ಭರ್ತಿ ಮಾಡಿದ ನಂತರ ಪ್ರಿಂಟ್ ಪಡೆದು ಭವಿಷ್ಯದ ಉಲ್ಲೇಖಕ್ಕಾಗಿ ಕಾಯ್ದಿರಿಸಿಕೊಳ್ಳಿ.


.jpeg)
Comments