ರಾಜ್ಯ ಪೊಲೀಸ್ ಇಲಾಖೆಯಿಂದ ಒಟ್ಟು 162 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ

ರಾಜ್ಯ ಪೊಲೀಸ್ ಇಲಾಖೆಯಿಂದ ಒಟ್ಟು 162 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ
Published by Basavaraj Halli
06 ಮೇ 2020 Karnataka State Police
Tags: Degree
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಲು ಮತ್ತೊಂದು ಸುವರ್ಣ ಅವಕಾಶ ಒದಗಿ ಬಂದಿದ್ದು, ರಾಜ್ಯ ಪೊಲೀಸ್ ಪಡೆಯಲ್ಲಿ - ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ (KSISF) , ವಿಶೇಷ ಮೀಸಲು ಪೊಲೀಸ್ ಸಬ್ ಸ್ಪೆಕ್ಟರ್(KSRP) ಮತ್ತು ಪೊಲೀಸ್ ಸಬ್ಇನ್ಸ್ಪೆಕ್ಟರ್ (ವಯರ್ಲೆಸ್) ನ ಒಟ್ಟು 162 ಹುದ್ದೆಗಳ ನೇಮಕಾತಿಗಾಗಿ ದಿನಾಂಕ 26 ಮೇ 2020 ರಂದು ಅಧಿಕೃತ ಅಧಿಸೂಚನೆ ಹಾಗು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26 ಜೂನ್ 2020 ಆಗಿರುತ್ತದೆ. * ಹುದ್ದೆಗಳ ವಿವರ : - ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್ಪೆಕ್ಟರ್(RSI) 45 ಹುದ್ದೆಗಳು - ಸಬ್ ಇನ್ಸ್ ಪೆಕ್ಟರ್ (KSISF) 51 ಹುದ್ದೆಗಳು - ವಿಶೇಷ ಮೀಸಲು ಪೊಲೀಸ್ ಸಬ್ ಸ್ಪೆಕ್ಟರ್(KSRP) 40 ಹುದ್ದೆಗಳು - ಪೊಲೀಸ್ ಸಬ್ಇನ್ಸ್ಪೆಕ್ಟರ್ (WireLess) 26 ಹುದ್ದೆಗಳು ಒಟ್ಟು ಹುದ್ದೆಗಳ ಸಂಖ್ಯೆ 162 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ : 26-05-2020 ರಂದು ಆರಂಭವಾಗಲಿದ್ದು ಅರ್ಜಿ ಸಲ್ಲಿಸಲು 27 July 2020 ಕೊನೆಯ ದಿನಾಂಕವಾಗಿರುತ್ತದೆ. ಈ ನೇಮಕಾತಿ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಅಪ್ಡೇಟ್ ಮಾಡಲಾಗುವುದು ನಿರೀಕ್ಷಿಸಿ.
Job Overview
No. of posts
162
Start Date
26 ಮೇ 2020
End Date
27 ಜುಲೈ 2020
Employment Type
FULL_TIME
Organization
KPSC Vaani (Website)
Location
ಕರ್ನಾಟಕ, KA,
Qualification:
ಯು.ಜಿ.ಸಿಯಿಂದ ಮಾನ್ಯತೆ ಪಡೆದಿರುವ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿ ಪಡೆದಿರಬೇಕು (ಮಾಜಿ ಸೈನಿಕ ಅಭ್ಯರ್ಥಿಗಳು ಸೈನ್ಯದಲ್ಲಿ ನೀಡಿದ ಪದವಿ ಪ್ರಮಾಣ ಪತ್ರವನ್ನು ದಿನಾಂಕ ಳಗೆ ಪಡೆದಿದ್ದರೆ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ಪರಿಗಣಿಸಲಾಗುವುದು).

Civil Wireless:
ಯು.ಜಿ.ಸಿಯಿಂದ ಮಾನ್ಯತೆ ಪಡೆದಿರುವ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್/ ಕಂಪ್ಯೂಟರ್ ಸೈನ್ಸ್/ ಟೆಲಿ ಕಮ್ಯುನಿಕೇಷನ್ಸ್ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯುಳ್ಳ ವಿಜ್ಞಾನ ವಿಷಯಗಳಲ್ಲಿನ ಅಂತಿಮ ಪರೀಕ್ಷೆಯಲ್ಲಿ ಕನಿಷ್ಠ ಸರಾಸರಿ 50 % ರಷ್ಟು ಅಂಕಗಳನ್ನು ಪಡೆದಿರಬೇಕು. (SC / ST ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ 45 %) ಪದವಿಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ ಅಂದರೆ 26.06.2020 ಹೊಂದಿರಬೇಕು.
Fee:
- ಸಾಮಾನ್ಯವರ್ಗ, ಪ್ರವರ್ಗ 2(A), 2(B), 3(A), 3(B) ಗೆ ಸೇರಿದ ಅಭ್ಯರ್ಥಿಗಳಿಗೆ : 250/-
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಪ್ರವರ್ಗ - 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ : 100/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ ವಯೋಮಿತಿ ಈ ಕೆಳಗಿನಂತಿರುತ್ತದೆ
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 28 ವರ್ಷಗಳ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
* ಇತರೆ ಅಭ್ಯರ್ಥಿಗಳಿಗೆ 26 ವರ್ಷ

ಸೇವಾ ಕಾರ್ಯನಿರತ ಅಭ್ಯರ್ಥಿಗಳಿಗೆ:
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 40 ವರ್ಷಗಳ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
* ಇತರೆ ಅಭ್ಯರ್ಥಿಗಳಿಗೆ 35 ವರ್ಷ
to download official Press Release Notification
Official Notification
Related Tags: Degree
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.