ಕೊಪ್ಪಳ ಕೃಷಿ ಇಲಾಖೆ ನೇಮಕಾತಿ 2026: ಕರ್ನಾಟಕ ಸರ್ಕಾರದ ಆತ್ಮ (ATMA) ಯೋಜನೆಯಡಿ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ!
ಸರ್ಕಾರಿ ವಲಯದಲ್ಲಿ ಕೆಲಸ ಮಾಡಲು ಬಯಸುವ ಕೃಷಿ ಪದವೀಧರರಿಗೆ ಇಲ್ಲಿದೆ ಒಂದು ಉತ್ತಮ ಅವಕಾಶ. ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಕಚೇರಿಯು ಆತ್ಮ (ATMA) ಯೋಜನೆಯಡಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು (BTM) ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕರು (ATM) ಸೇರಿದಂತೆ ಒಟ್ಟು 7 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ನೇಮಕಾತಿಯ ವಿಶೇಷತೆ ಎಂದರೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ನಿಮ್ಮ ಶೈಕ್ಷಣಿಕ ಅಂಕಗಳು ಮತ್ತು ಕಾರ್ಯಾನುಭವದ ಆಧಾರದ ಮೇಲೆ ನೇರವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು, ಸೆಪ್ಟೆಂಬರ್ 19, 2026 ರ ಸಂಜೆ 5:30 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಗರಿಷ್ಠ 45 ವರ್ಷ ವಯೋಮಿತಿಯೊಳಗಿನ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 30,000 ರೂಪಾಯಿವರೆಗೆ ಗೌರವ ಧನ ಸಿಗಲಿದೆ. ಸಂಪೂರ್ಣ ಅಧಿಕೃತ ಅಧಿಸೂಚನೆ, ಶೈಕ್ಷಣಿಕ ಅರ್ಹತೆಯ ವಿವರ, ವೇತನ ಶ್ರೇಣಿ ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಸುವ ನೇರ ಲಿಂಕ್‌ಗಾಗಿ (Direct Online Apply Link) ತಕ್ಷಣವೇ KPSCVAANI.COM ವೆಬ್‌ಸೈಟ್‌ಗೆ ಭೇಟಿ ನೀಡಿ. ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ನೋಟ್ಸ್, ಪಿಡಿಎಫ್ ಹಾಗೂ ಪ್ರತಿದಿನದ ಕ್ಷಣಕ್ಷಣದ ಸರ್ಕಾರಿ ಉದ್ಯೋಗ ಮಾಹಿತಿಗಾಗಿ KPSCVAANI.COM ನಿಯಮಿತವಾಗಿ ಪರಿಶೀಲಿಸಿ!
ನೇಮಕಾತಿಯ ಸಂಕ್ಷಿಪ್ತ ವಿವರಗಳು:
- ಸಂಸ್ಥೆಯ ಹೆಸರು: ಕೃಷಿ ಇಲಾಖೆ, ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಕಚೇರಿ (ಆತ್ಮ - ATMA ಯೋಜನೆ)
- ಹುದ್ದೆಯ ಹೆಸರು: ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು (BTM) ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು (ATM)
- ಒಟ್ಟು ಹುದ್ದೆಗಳು: 07 ಹುದ್ದೆಗಳು
- ವೇತನ ಶ್ರೇಣಿ: ₹25,000/- ರಿಂದ ₹30,000/- (ಮಾಸಿಕ ಗೌರವ ಧನ)
- ಉದ್ಯೋಗ ಸ್ಥಳ: ಕೊಪ್ಪಳ ಜಿಲ್ಲೆ (ಕರ್ನಾಟಕ)
- ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ (Online)
- ಅಧಿಕೃತ ವೆಬ್‌ಸೈಟ್: koppal.nic.in
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08 ಸೆಪ್ಟೆಂಬರ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19 ಸೆಪ್ಟೆಂಬರ್ 2026 (ಸಂಜೆ 5:30 ರವರೆಗೆ)
ಹುದ್ದೆಗಳ ವಿವರ ಮತ್ತು ಮಾಸಿಕ ಸಂಭಾವನೆ:
- ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು (BTM): 03 ಹುದ್ದೆಗಳು
- ಸಹಾಯಕ ತಾಂತ್ರಿಕ ವ್ಯವಸ್ಥಾಪಕರು (ATM): 04 ಹುದ್ದೆಗಳು
- ಒಟ್ಟು ಖಾಲಿ ಹುದ್ದೆಗಳು: 07 ಹುದ್ದೆಗಳು
ಮಾಸಿಕ ಸಂಭಾವನೆ:
- ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು (BTM): ಮಾಸಿಕ ಗೌರವ ಧನ: ₹30,000/-
- ಸಹಾಯಕ ತಾಂತ್ರಿಕ ವ್ಯವಸ್ಥಾಪಕರು (ATM): ಮಾಸಿಕ ಗೌರವ ಧನ: ₹25,000/-
ಮೀಸಲಾತಿ ವಿವರಗಳು (ವರ್ಗೀಕರಣ):
1. ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು (BTM) - 03 ಹುದ್ದೆಗಳು:
ಕಲ್ಯಾಣ ಕರ್ನಾಟಕ ವೃಂದ: ಪರಿಶಿಷ್ಟ ಜಾತಿ - 01, ಇತರೆ - 01
ಉಳಿಕೆ ವೃಂದ (Non-HK): ಪರಿಶಿಷ್ಟ ಜಾತಿ - 01
2. ಸಹಾಯಕ ತಾಂತ್ರಿಕ ವ್ಯವಸ್ಥಾಪಕರು (ATM) - 04 ಹುದ್ದೆಗಳು:
ಕಲ್ಯಾಣ ಕರ್ನಾಟಕ ವೃಂದ: ಪರಿಶಿಷ್ಟ ಜಾತಿ - 01, ಪರಿಶಿಷ್ಟ ಪಂಗಡ - 01, ಇತರೆ - 01
ಉಳಿಕೆ ವೃಂದ (Non-HK): ಪರಿಶಿಷ್ಟ ಜಾತಿ - 01
ವಯೋಮಿತಿ ಮತ್ತು ಅರ್ಹತಾ ಷರತ್ತುಗಳು:
- ಗರಿಷ್ಠ ವಯೋಮಿತಿ: ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ಮೀರತಿಯಿರಬಾರದು.
- ಶೈಕ್ಷಣಿಕ ವಿದ್ಯಾರ್ಹತೆ:
BTM: ಕೃಷಿ ಅಥವಾ ಕೃಷಿ ಸಂಬಂಧಿತ ರಂಗದಲ್ಲಿ ಸ್ನಾತಕೋತ್ತರ ಪದವಿ (Post Graduate) ಜೊತೆಗೆ ಕಂಪ್ಯೂಟರ್ ಜ್ಞಾನ. ಅಥವಾ ಕನಿಷ್ಠ 5 ವರ್ಷ ATM ಆಗಿ ಸೇವಾ ಅನುಭವ ಹೊಂದಿರುವ ಕೃಷಿ ಪದವೀಧರರು.
ATM: ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯಗಳಲ್ಲಿ ಪದವಿ (Graduate) ಅಥವಾ ಸ್ನಾತಕೋತ್ತರ ಪದವಿ (Post Graduate) ಹೊಂದಿರಬೇಕು. - ಸೇವಾ ಅನುಭವ: BTM ಹುದ್ದೆಗೆ ಕನಿಷ್ಠ 2 ವರ್ಷ ಹಾಗೂ ATM ಹುದ್ದೆಗೆ ಕನಿಷ್ಠ 1 ವರ್ಷದ ಕೃಷಿ ಸಂಬಂಧಿತ ಕ್ಷೇತ್ರ ಅನುಭವ ಕಡ್ಡಾಯ.
- ಭಾಷಾ ಜ್ಞಾನ: ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.
ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯಿಲ್ಲದೆ, ಶೈಕ್ಷಣಿಕ ಅಂಕಗಳು, ಕಂಪ್ಯೂಟರ್ ಕೋರ್ಸ್ ಪ್ರಮಾಣಪತ್ರದ ಅವಧಿ, ಕೃಷಿ ಲೇಖನಗಳು/ಪುರಸ್ಕಾರಗಳು ಮತ್ತು ಸೇವಾ ಅನುಭವದ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಿ ಆಯ್ಕೆ ಮಾಡಲಾಗುತ್ತದೆ. (ಗಮನಿಸಿ: ಸ್ಥಳೀಯ ಜಿಲ್ಲೆಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು).
ಅಗತ್ಯವಿರುವ ಪ್ರಮಾಣಪತ್ರಗಳು ಮತ್ತು ಅಪ್‌ಲೋಡ್ ಮಾರ್ಗದರ್ಶಿ: ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಹಾಗೂ ದಾಖಲಾತಿ ಪರಿಶೀಲನೆ ಸಮಯದಲ್ಲಿ ಕೆಳಗಿನ ಮೂಲ ದಾಖಲೆಗಳು ಅಗತ್ಯವಿರುತ್ತವೆ:
- ವಿದ್ಯಾರ್ಹತೆ ಮತ್ತು ಅಂಕಪಟ್ಟಿಗಳು
- ಜನ್ಮ ದಿನಾಂಕ ದೃಢೀಕರಣಕ್ಕೆ ಎಸ್‌ಎಸ್‌ಎಲ್‌ಸಿ (SSLC) ಅಂಕಪಟ್ಟಿ
- ಕಂಪ್ಯೂಟರ್ ಜ್ಞಾನ ಪ್ರಮಾಣಪತ್ರ
- ಕೃಷಿ ಕ್ಷೇತ್ರದ ಸೇವಾ ಅನುಭವ ಪ್ರಮಾಣಪತ್ರ
- ಲೇಖನಗಳು, ಸಂಶೋಧನಾ ಪ್ರಬಂಧ ಹಾಗೂ ಪ್ರಶಸ್ತಿಗಳ ಪ್ರಮಾಣಪತ್ರಗಳು (ಅನ್ವಯಿಸಿದಲ್ಲಿ)
- ಫೋಟೋ ಮತ್ತು ಸಹಿ: ಭಾವಚಿತ್ರದ ಗಾತ್ರ 100 KB ಗಿಂತ ಕಡಿಮೆ ಹಾಗೂ ಸಹಿಯ ಗಾತ್ರ 50 KB ಗಿಂತ ಕಡಿಮೆ ಇರಬೇಕು.
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ಜಾಲತಾಣ koppal.nic.in ಗೆ ಭೇಟಿ ನೀಡಿ.
- ಮುಖಪುಟದಲ್ಲಿರುವ recruitment ಲಿಂಕ್ ಆಯ್ಕೆ ಮಾಡಿ, ನೇಮಕಾತಿ ಸೂಚನೆಗಳನ್ನು ಸಂಪೂರ್ಣವಾಗಿ ಓದಿಕೊಳ್ಳಿ.
- ಅಗತ್ಯವಿರುವ ಎಲ್ಲಾ ವೈಯಕ್ತಿಕ ವಿವರಗಳು, ಶೈಕ್ಷಣಿಕ ಮಾಹಿತಿ ಹಾಗೂ ಅನುಭವದ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ನಿಗದಿತ ಗಾತ್ರದಲ್ಲಿ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ, ಅರ್ಜಿಯನ್ನು ಸಲ್ಲಿಸಿ (Submit).
- ಸಲ್ಲಿಕೆಯಾದ ಅರ್ಜಿಯ ಪ್ರಿಂಟ್‌ಔಟ್ ಪ್ರತಿಯನ್ನು ನಿಮ್ಮ ಬಳಿ ಕಾಯ್ದಿರಿಸಿಕೊಳ್ಳಿ.
ಇದನ್ನು ಓದಿ: ಬೆಂಗಳೂರಿನ CPRI ನಲ್ಲಿ ಬೃಹತ್ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ : 10th, ITI, ಡಿಪ್ಲೊಮಾ ಅಭ್ಯರ್ಥಿಗಳಿಗೆ ಸುವರ್ಣಾವಕಾಶ!
- End Date
- 19 ಸೆಪ್ಟೆಂಬರ್ 2026
- Pay Scale
- 25000 - 30000 INR
- Employment Type
- FULL_TIME
- Organization
- Agriculture Department Koppal (Website)
- Location
- Patil Nagar, Koppal, KA, 583231


Comments