ಕರ್ನಾಟಕ ಕೋಸ್ಟಲ್ ಪೊಲೀಸ್ ನೇಮಕಾತಿ 2026: ತಾಂತ್ರಿಕ ಹುದ್ದೆಗಳಿಗೆ ಬಂಪರ್ ಅವಕಾಶ; SSLC/ಐಟಿಐ ಮುಗಿಸಿದವರಿಗೆ ಸುವರ್ಣಾವಕಾಶ!

ಕರ್ನಾಟಕ ಕೋಸ್ಟಲ್ ಪೊಲೀಸ್ ನೇಮಕಾತಿ 2026: ತಾಂತ್ರಿಕ ಹುದ್ದೆಗಳಿಗೆ ಬಂಪರ್ ಅವಕಾಶ; SSLC/ಐಟಿಐ ಮುಗಿಸಿದವರಿಗೆ ಸುವರ್ಣಾವಕಾಶ!
Published by Yallamma G
19 ಮೇ 2026 Karnataka State Police
Tags: SSLC
ಉಡುಪಿ: ಕರಾವಳಿ ರಕ್ಷಣಾ ಪಡೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಭರ್ಜರಿ ಅವಕಾಶವೊಂದನ್ನು ನೀಡಿದೆ. ಉಡುಪಿಯ ಕರಾವಳಿ ಕಾವಲು ಪೊಲೀಸ್ (Coastal Security Police - CSP) ಘಟಕದಲ್ಲಿ ಖಾಲಿ ಇರುವ ವಿವಿಧ ಮಾದರಿಯ ಒಟ್ಟು 30 ತಾಂತ್ರಿಕ ಹುದ್ದೆಗಳ (Technical Posts) ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಜೂನ್ 06, 2026.

ಈ ನೇಮಕಾತಿ ಅಡಿಯಲ್ಲಿ ದೋಣಿ ಕ್ಯಾಪ್ಟನ್ (ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ದರ್ಜೆ), ಸಹಾಯಕ ದೋಣಿ ಕ್ಯಾಪ್ಟನ್(ಸಹಾಯಕ ಸಬ್ ಇನ್ಸ್‌ಪೆಕ್ಟರ್ ದರ್ಜೆ), ಮೋಟಾರ್ ಲಾಂಚ್ ಮೆಕ್ಯಾನಿಕ್(ಸಹಾಯಕ ಸಬ್ ಇನ್ಸ್‌ಪೆಕ್ಟರ್ ದರ್ಜೆ), ಎಂಜಿನ್ ಚಾಲಕ (ಹೆಡ್ ಕಾನ್‌ಸ್ಟೆಬಲ್ ದರ್ಜೆ) ಮತ್ತು ಸೈಬರ್ ಭದ್ರತಾ ವಿಶ್ಲೇಷಕ ಸೇರಿದಂತ್ತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಉಡುಪಿ, ಬೆಂಗಳೂರು - ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 06-ಜೂನ್-2026 ರಂದು ಅಥವಾ ಮೊದಲು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳನ್ನು ಒಪ್ಪಂದದ ಆಧಾರದ ಮೇಲೆ (Contract Basis) 5 ವರ್ಷಗಳ ಅವಧಿಗೆ ಅಥವಾ 60 ವರ್ಷ ವಯಸ್ಸಾಗುವವರೆಗೆ (ಯಾವುದು ಮೊದಲೋ ಅಲ್ಲಿಯವರೆಗೆ) ಭರ್ತಿ ಮಾಡಿಕೊಳ್ಳಲಾಗುತ್ತಿದೆ. KPSCVaani ಓದುಗರಿಗಾಗಿ ಈ ನೇಮಕಾತಿಯ ಸಂಪೂರ್ಣ ಇಂಚಿಂಚೂ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರ ಮತ್ತು ಮಾಸಿಕ ವೇತನ (Vacancy & Salary Details)
ಈ ನೇಮಕಾತಿಯಡಿ ಸಬ್ ಇನ್ಸ್‌ಪೆಕ್ಟರ್ ಶ್ರೇಣಿಯಿಂದ ಹಿಡಿದು ಕಾನ್‌ಸ್ಟೆಬಲ್ ಶ್ರೇಣಿಯವರೆಗಿನ ತಾಂತ್ರಿಕ ಹುದ್ದೆಗಳ ಭರ್ತಿ ನಡೆಯುತ್ತಿದ್ದು, ಆಯಾ ಹುದ್ದೆಗಳಿಗೆ ನಿಗದಿಪಡಿಸಲಾದ ಸಂಬಳದ ವಿವರ ಹೀಗಿದೆ:



ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ

ಅರ್ಹತಾ ಮಾನದಂಡಗಳು (Eligibility Criteria)

ಈ ಹುದ್ದೆಗಳು ವಿಶೇಷ ತಾಂತ್ರಿಕ ಸ್ವರೂಪದ್ದಾಗಿದ್ದು, ಕೇಂದ್ರ ಗೃಹ ಸಚಿವಾಲಯದ ಕರಾವಳಿ ಭದ್ರತಾ ಯೋಜನೆಯಡಿ ಮಂಜೂರಾದ ಬೋಟ್‌ಗಳನ್ನು ಚಲಾಯಿಸಲು ಮತ್ತು ನಿರ್ವಹಿಸಲು ನೇಮಕ ಮಾಡಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಈ ಕೆಳಗಿನ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ: 
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
  • ನಿವೃತ್ತ ನೌಕಾಸೇನೆ (Navy), ಕೋಸ್ಟ್ ಗಾರ್ಡ್ (Coast Guard) ಮತ್ತು ಬಿಎಸ್ಎಫ್ (BSF - Water Wing) ಅಧಿಕಾರಿಗಳು ಹಾಗೂ ಸಿಬ್ಬಂದಿಗಳು.  
  • ಕೋಸ್ಟಲ್ ಸೆಕ್ಯುರಿಟಿ ಪೊಲೀಸ್ (CSP) ತಾಂತ್ರಿಕ ವಿಭಾಗದ ಮರು-ನೇಮಕಾತಿ ಅಭ್ಯರ್ಥಿಗಳು.
ಸಾಮಾನ್ಯ ನಿಯಮಗಳು ಹಾಗೂ ಶೈಕ್ಷಣಿಕ ಅರ್ಹತೆ:
  1. ವಯೋಮಿತಿ: ಅರ್ಜಿ ಸಲ್ಲಿಸುವ ನಿವೃತ್ತ ಸಿಬ್ಬಂದಿಗಳಿಗೆ ಗರಿಷ್ಠ ವಯೋಮಿತಿ 58 ವರ್ಷಗಳು.  
  2. ಅನುಭವ: ಕನಿಷ್ಠ 5 ವರ್ಷಗಳ ಕಾಲ ಸಾಗರ/ಮರೈನ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಕಡ್ಡಾಯವಾಗಿರುತ್ತದೆ (ಅಥವಾ CSP ಯಲ್ಲಿ ಕನಿಷ್ಠ 1 ವರ್ಷ ಅದೇ ಹುದ್ದೆಯಲ್ಲಿ ಕೆಲಸ ಮಾಡಿರಬೇಕು).  
  3. ವಿದ್ಯಾರ್ಹತೆ: ಮಾನ್ಯತೆ ಪಡೆದ ಮಂಡಳಿಯಿಂದ ಎಸ್‌ಎಸ್‌ಎಲ್‌ಸಿ (Matriculation) ಉತ್ತೀರ್ಣರಾಗಿರಬೇಕು. ಇದರ ಜೊತೆಗೆ ಹುದ್ದೆಗೆ ಅನುಗುಣವಾಗಿ ತಾಂತ್ರಿಕ ಸರ್ಟಿಫಿಕೇಟ್‌ಗಳು (ಉದಾಹರಣೆಗೆ: ಮೆರಿಟೈಮ್ ಬೋರ್ಡ್‌ನ ಫಸ್ಟ್/ಸೆಕೆಂಡ್ ಕ್ಲಾಸ್ ಮಾಸ್ಟರ್ ಸರ್ಟಿಫಿಕೇಟ್ ಅಥವಾ ಎಂಜಿನ್ ಡ್ರೈವರ್ ಸರ್ಟಿಫಿಕೇಟ್, ಅಥವಾ ಮೋಟಾರ್ ಮೆಕಾನಿಕ್/ಡೀಸೆಲ್ ಮೆಕಾನಿಕ್/ಫಿಟ್ಟರ್ ಇತ್ಯಾದಿಗಳಲ್ಲಿ ಐಟಿಐ/ಡಿಪ್ಲೊಮಾ) ಹೊಂದಿರಬೇಕಾಗುತ್ತದೆ.  
ಅರ್ಜಿಯೊಂದಿಗೆ ಲಗತ್ತಿಸಬೇಕಾದ ಪ್ರಮುಖ ದಾಖಲೆಗಳು (Enclosures):   
  • ನೌಕಾಸೇನೆ/ಕೋಸ್ಟ್‌ಗಾರ್ಡ್/ಬಿಎಸ್‌ಎಫ್‌ನಿಂದ ಪಡೆದ ಡಿಸ್ಚಾರ್ಜ್ ಸರ್ಟಿಫಿಕೇಟ್ (Discharge Certificate).  
  • ಪಿಂಚಣಿ ಆದೇಶದ ಪ್ರತಿ (Pension Order Copy).  
  • ಶೈಕ್ಷಣಿಕ ವಿದ್ಯಾರ್ಹತೆಯ ಪ್ರಮಾಣಪತ್ರಗಳು.  
  • ವಯಸ್ಸಿನ ಪುರಾವೆಗಾಗಿ ಟ್ರಾನ್ಸ್‌ಫರ್ ಸರ್ಟಿಫಿಕೇಟ್ (TC) ಅಥವಾ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ.  
  • ಇತ್ತೀಚಿನ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು.  
  • ತಾಂತ್ರಿಕ ಪರೀಕ್ಷೆಗಳ ಸರ್ಟಿಫಿಕೇಟ್‌ಗಳು (ಇದ್ದಲ್ಲಿ ಮಾತ್ರ).
ಆಯ್ಕೆ ಪ್ರಕ್ರಿಯೆ
ಆಯ್ಕೆ ವಿಧಾನ: ಅರ್ಹ ಅಭ್ಯರ್ಥಿಗಳನ್ನು ವಿಶೇಷ ನೇಮಕಾತಿ ಸಮಿತಿಯ ಮೂಲಕ ನೇರ ಸಂದರ್ಶನ (Interview) ನಡೆಸಿ ಆಯ್ಕೆ ಮಾಡಲಾಗುವುದು. ಸಂದರ್ಶನ ನಡೆಯುವ ದಿನಾಂಕ ಮತ್ತು ಸ್ಥಳದ ವಿವರವನ್ನು ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ತಿಳಿಸಲಾಗುವುದು.

ಅರ್ಜಿ ಸಲ್ಲಿಕೆ ಹೇಗೆ? (How to Apply?)
ಅರ್ಹ ಅಭ್ಯರ್ಥಿಗಳು ಇಲಾಖೆ ನೀಡಿರುವ ನಿಗದಿತ ಅರ್ಜಿ ನಮೂನೆಯನ್ನು (Proforma) ಭರ್ತಿ ಮಾಡಿ, ಅಗತ್ಯವಿರುವ ಎಲ್ಲಾ ಪ್ರಮಾಣೀಕೃತ ದಾಖಲೆಗಳೊಂದಿಗೆ (Attested Documents) ಉಡುಪಿಯ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕರ ಕಚೇರಿಗೆ ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ:
Superintendent of Police,
Coastal Security Police, Udupi &
Member Secretary to Special Recruitment Committee for Technical Posts,
Malpe, Udupi - 576108.

ಪ್ರಮುಖ ದಿನಾಂಕಗಳು : 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 06, 2026ರ ಸಂಜೆ 4:30ರ ಒಳಗೆ ಅರ್ಜಿ ತಲುಪಬೇಕು. ತಡವಾಗಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.  

ಗಮನಿಸಿ: ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೊಮ್ಮೆ ಸಲ್ಲಿಸುವ ಅಗತ್ಯವಿಲ್ಲ, ಅವರ ಅರ್ಜಿಗಳನ್ನೂ ಪರಿಗಣಿಸಲಾಗುತ್ತದೆ. 

KPSCVaani ಓದುಗರಿಗಾಗಿ ವಿಶೇಷ ಸೂಚನೆ: ಕರ್ನಾಟಕದ ಇಲಾಖೆಗಳ ಅಧಿಕೃತ ಉದ್ಯೋಗ ಮಾಹಿತಿಗಳು, ದಿನನಿತ್ಯದ ನೇಮಕಾತಿ ಸುದ್ದಿಗಳು ಮತ್ತು ಉದ್ಯೋಗ ಮಾರ್ಗದರ್ಶನಕ್ಕಾಗಿ ನಮ್ಮ KPSCVaani (kpscvaani.com) ವೆಬ್‌ಸೈಟ್ ಅನ್ನು ನಿಯಮಿತವಾಗಿ ಫಾಲೋ ಮಾಡಿ.

ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ.
Job Overview
End Date
6 ಜೂನ್ 2026
Employment Type
FULL_TIME
Organization
KSP (Website)
Location
ಬೆಂಗಳೂರು, KA, 560001
To Download Official Notification
Related Tags: SSLC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.