ಐಆರ್‌ಸಿಟಿಸಿ ನೇಮಕಾತಿ 2019-(IRCTC Recruitment-2019): ಮೇಲ್ವಿಚಾರಕ ಹುದ್ದೆಗಳಿಗೆ Walkin Interview

ಐಆರ್‌ಸಿಟಿಸಿ ನೇಮಕಾತಿ 2019-(IRCTC Recruitment-2019): ಮೇಲ್ವಿಚಾರಕ ಹುದ್ದೆಗಳಿಗೆ Walkin Interview
21 ಮಾರ್ಚ್ 2019 Indian Railway
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ನಿಯಮಿತ 74 ಮೇಲ್ವಿಚಾರಕ (ಹಾಸ್ಪಿಟಾಲಿಟಿ) ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್ ಗೆ ಹೋಗಿ ಅಧಿಸೂಚನೆಯನ್ನು ಓದಿಕೊಳ್ಳಬಹುದು. ಹುದ್ದೆಗಳಿಗೆ ಸೇರಬಯಸುವ ಆಸಕ್ತ ಅರ್ಹ ಅಭ್ಯರ್ಥಿಗಳು ಏಪ್ರಿಲ್ 9,10 ಮತ್ತು 12 ರಂದು ವಿವಿದೆಡೆ ನಡೆಯುವ ಸಂದರ್ಶನದಲ್ಲಿ ಭಾಗಿಯಾಬಹುದು. ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಂದರ್ಶನಕ್ಕೆ ಒಯ್ಯತಕ್ಕದ್ದು. ಅರ್ಜಿ ಸಲ್ಲಿಸುವುದು ಹೇಗೆ: ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 9,10 ಮತ್ತು 12 ರಂದು ನಡೆಯಲಿರುವ ವಾಕ್‌-ಇನ್‌ ಇಂಟರ್‌ವ್ಯೂ ನಲ್ಲಿ ಭಾಗವಹಿಸಬಹುದು. ಸಂದರ್ಶನ ನಡೆಯುವ ಸ್ಥಳದ ವಿವರ: * ಏಪ್ರಿಲ್ 9,2019 ರಂದು ಸಂದರ್ಶನ ನಡೆಯುವ ಸ್ಥಳ: ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕ್ಯಾಟರಿಂಗ್ ಟೆಕ್ನಾಲಜಿ ಮತ್ತು ಅಪ್ಲೈಡ್ ನ್ಯೂಟ್ರೀಶನ್ (ಕ್ಯಾಟರಿಂಗ್ ಕಾಲೇಜು), ಜಿ.ವಿ.ರಾಜ ರೋಡ್, ಕೊವಲಂ, ತಿರುವನಂತಪುರಂ,ಕೇರಳ-695527 * ಏಪ್ರಿಲ್ 10,2019 ರಂದು ಸಂದರ್ಶನ ನಡೆಯುವ ಸ್ಥಳ: ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕ್ಯಾಟರಿಂಗ್ ಟೆಕ್ನಾಲಜಿ ಮತ್ತು ಅಪ್ಲೈಡ್ ನ್ಯೂಟ್ರೀಶನ್, ಎಂ.ಎಸ್‌ ಬ್ಯುಲ್ಡಿಂಗ್ ಮತ್ತು ಎಸ್‌ಕೆಎಸ್‌ಜೆಟಿಐ ಹಾಸ್ಟೆಲ್ ಹತ್ತಿರ, ಎಸ್‌.ಜೆ ಪಾಲಿಟೆಕ್ನಿಕ್ ಕ್ಯಾಂಪಸ್, ಬೆಂಗಳೂರು- 560001 * ಏಪ್ರಿಲ್ 12,2019 ರಂದು ಸಂದರ್ಶನ ನಡೆಯುವ ಸ್ಥಳ: ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕ್ಯಾಟರಿಂಗ್ ಟೆಕ್ನಾಲಜಿ ಮತ್ತು ಅಪ್ಲೈಡ್ ನ್ಯೂಟ್ರೀಶನ್, 4ನೇ ಕ್ರಾಸ್, ಸಿ.ಐ.ಟಿ ಕ್ಯಾಂಪಸ್, ತಾರಾಮಣಿ (ಪೋ), ಚೆನ್ನೈ -600113
Job Overview
Start Date
21 ಮಾರ್ಚ್ 2019
End Date
10 ಎಪ್ರಿಲ್ 2019
Employment Type
FULL_TIME
Organization
KPSC Vaani (Website)
Location
ತಮಿಳು ನಾಡು, ಕೇರಳ, ಕರ್ನಾಟಕ, ಭಾರತದೆಲ್ಲೆಡೆ, KA,
Selection Procedure:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification:
ಈ ಹುದ್ದೆಗಳಿಗೆ ಬಿಎಸ್ಸಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
* ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬೇಕು.
Fee:
ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ.
Age Limit:
ಮಾರ್ಚ್ 1,2019 ರ ಅನ್ವಯ ಗರಿಷ್ಟ 30 ವರ್ಷ ವಯೋಮಿತಿಯ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ , ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಮತ್ತು ಅಂಗವಿಕಲ (ಓಬಿಸಿ) ಅಭ್ಯರ್ಥಿಗಳಿಗೆ 13 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
to download official notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.