ಪದವೀಧರರಿಗೆ ಭರ್ಜರಿ ಗುಡ್ ನ್ಯೂಸ್: ಇಂಡಿಯನ್ ಬ್ಯಾಂಕ್‌ನಲ್ಲಿ 1500 ಹುದ್ದೆಗಳಿಗೆ ಬೃಹತ್ ನೇಮಕಾತಿ, ಈಗಲೇ ಅರ್ಜಿ ಸಲ್ಲಿಸಿ!
ಇಂಡಿಯನ್ ಬ್ಯಾಂಕ್‌ನಲ್ಲಿ 1,500 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ. ಕರ್ನಾಟಕಕ್ಕೆ 35 ಸ್ಥಾನಗಳು, ₹15,000 ಸ್ಟೈಪೆಂಡ್, ಪದವಿ ವಿದ್ಯಾರ್ಹತೆ. ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ತರಬೇತಿ ಪಡೆದು ಅನುಭವ ಗಳಿಸಲು ಬಯಸುವ ಪದವೀಧರ ಅಭ್ಯರ್ಥಿಗಳಿಗೆ ಇಲ್ಲೊಂದು ಉತ್ತಮ ಅವಕಾಶವಿದೆ. ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಇಂಡಿಯನ್ ಬ್ಯಾಂಕ್ (Indian Bank) 2026-27ನೇ ಹಣಕಾಸು ವರ್ಷಕ್ಕಾಗಿ ಅಪ್ರೆಂಟಿಸ್ ತರಬೇತಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.
ಅಪ್ರೆಂಟಿಸ್ ಕಾಯ್ದೆ, 1961ರ ಅಡಿಯಲ್ಲಿ ದೇಶಾದ್ಯಂತ ಒಟ್ಟು 1,500 ತರಬೇತಿ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಪೈಕಿ ಕರ್ನಾಟಕ ರಾಜ್ಯಕ್ಕೆ 35 ಸ್ಥಾನಗಳನ್ನು ಮೀಸಲಿಡಲಾಗಿದೆ. ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ನಿಗದಿತ ಅರ್ಹತೆಗಳನ್ನು ಪೂರೈಸಿದರೆ ಅರ್ಜಿ ಸಲ್ಲಿಸಬಹುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ 12 ತಿಂಗಳ ಕಾಲ ಬ್ಯಾಂಕ್ ಶಾಖೆಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಶಾಖೆಯ ಸ್ಥಳದ ಆಧಾರದ ಮೇಲೆ ತಿಂಗಳಿಗೆ ₹12,300ರಿಂದ ₹15,000ರವರೆಗೆ ಸ್ಟೈಪೆಂಡ್ ದೊರೆಯಲಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 2026ರ ನವೆಂಬರ್ 5ರಿಂದ ಆರಂಭವಾಗಿದ್ದು, ನವೆಂಬರ್ 25 ಕೊನೆಯ ದಿನವಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಗಳ ವಿವರ, ಕರ್ನಾಟಕದ ಮೀಸಲಾತಿ, ವಿದ್ಯಾರ್ಹತೆ, ವಯೋಮಿತಿ, ಸ್ಟೈಪೆಂಡ್, ಆಯ್ಕೆ ವಿಧಾನ, ಪರೀಕ್ಷಾ ಮಾದರಿ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಇಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಿ.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..
ನೇಮಕಾತಿಯ ಪ್ರಮುಖ ವಿವರಗಳು
- ಸಂಸ್ಥೆ :ಇಂಡಿಯನ್ ಬ್ಯಾಂಕ್
- ಹುದ್ದೆ : ಅಪ್ರೆಂಟಿಸ್ (Apprentice)
- ಅಧಿಸೂಚನೆ ವರ್ಷ : 2026-27
- ಒಟ್ಟು ಸ್ಥಾನಗಳು : 1,500
- ಅರ್ಜಿ ಕೊನೆಯ ದಿನಾಂಕ : 25 ನವೆಂಬರ್ 2026
- ಅಧಿಕೃತ ವೆಬ್‌ಸೈಟ್ : www.indianbank.bank.in
ಒಟ್ಟು 1,500 ಅಪ್ರೆಂಟಿಸ್ ಸ್ಥಾನಗಳು – ಕರ್ನಾಟಕಕ್ಕೆ 35 ಹುದ್ದೆಗಳು
ಕರ್ನಾಟಕದ ವರ್ಗವಾರು ಸ್ಥಾನಗಳ ವಿವರ:
- ಪರಿಶಿಷ್ಟ ಜಾತಿ (SC) : 5
- ಪರಿಶಿಷ್ಟ ಪಂಗಡ (ST) : 2
- ಇತರೆ ಹಿಂದುಳಿದ ವರ್ಗ (OBC) : 9
- ಆರ್ಥಿಕವಾಗಿ ದುರ್ಬಲ ವರ್ಗ (EWS) : 3
- ಸಾಮಾನ್ಯ ವರ್ಗ (UR) : 16
- ಒಟ್ಟು : 35
ಪ್ರಮುಖ ದಿನಾಂಕಗಳು (Important Dates) :
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05-11-2026.
- ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 25-11-2026.
- ವಯಸ್ಸು ಮತ್ತು ವಿದ್ಯಾರ್ಹತೆ ಪರಿಗಣಿಸುವ ಕಟ್-ಆಫ್ ದಿನಾಂಕ: 01-11-2026.
ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ (Eligibility Criteria):
- ವಿದ್ಯಾರ್ಹತೆ (Education): ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Graduation Degree) ಪೂರ್ಣಗೊಳಿಸಿರಬೇಕು.
- ಷರತ್ತು: ಅಭ್ಯರ್ಥಿಗಳು ತಮ್ಮ ಪದವಿಯನ್ನು 01-04-2022 ರ ನಂತರ ಮತ್ತು 01-11-2026 ರ ಒಳಗೆ ಪೂರ್ಣಗೊಳಿಸಿರಬೇಕು (ಈ ಅವಧಿಯೊಳಗೆ ರಿಸಲ್ಟ್ ಬಂದಿರಬೇಕು).
- ವಯೋಮಿತಿ (Age Limit): 01-11-2026 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯಸ್ಸು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷಗಳ ಒಳಗಿರಬೇಕು (ಅಂದರೆ 02-11-1998 ರಿಂದ 01-11-2006 ರ ನಡುವೆ ಜನಿಸಿರಬೇಕು).
ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳಿಗೆ 5 ವರ್ಷ,
OBC ಅಭ್ಯರ್ಥಿಗಳಿಗೆ 3 ವರ್ಷ ಹಾಗೂ
ವಿಕಲಚೇತನ (PwBD) ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಸ್ಟೈಪೆಂಡ್ ಮತ್ತು ತರಬೇತಿ ಅವಧಿ (Stipend & Training Period):
- ಆಯ್ಕೆಯಾದ ಅಭ್ಯರ್ಥಿಗಳಿಗೆ ಒಟ್ಟು 12 ತಿಂಗಳ (1 ವರ್ಷ) ಕಾಲ 'ಆನ್-ದಿ-ಜಾಬ್ ಟ್ರೈನಿಂಗ್' (Apprenticeship Training) ನೀಡಲಾಗುತ್ತದೆ.
- ಮೆಟ್ರೋ / ನಗರ ಪ್ರದೇಶದ ಬ್ರಾಂಚ್‌ಗಳಲ್ಲಿ: ಮಾಸಿಕ ₹15,000/- ಸ್ಟೈಪೆಂಡ್ ನೀಡಲಾಗುತ್ತದೆ (ಇದರಲ್ಲಿ ಬ್ಯಾಂಕ್ ಪಾಲು ₹8,850 ಮತ್ತು ಸರ್ಕಾರದ ಪಾಲು ₹6,150).
- ಗ್ರಾಮೀಣ / ಅರೆ-ನಗರ ಬ್ರಾಂಚ್‌ಗಳಲ್ಲಿ: ಮಾಸಿಕ ₹12,300/- ಸ್ಟೈಪೆಂಡ್ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ (Selection Process):ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
- ಆನ್‌ಲೈನ್ ಪರೀಕ್ಷೆ (Online Test): ಒಟ್ಟು 100 ಅಂಕಗಳಿಗೆ 60 ನಿಮಿಷಗಳ ಕಾಲ ಆಬ್ಜೆಕ್ಟಿವ್ ಮಾದರಿಯ ಪರೀಕ್ಷೆ ನಡೆಯಲಿದೆ. ಇದರಲ್ಲಿ ರೀಸನಿಂಗ್ (15 ಅಂಕ), ಕಂಪ್ಯೂಟರ್ ಜ್ಞಾನ (10 ಅಂಕ), ಇಂಗ್ಲಿಷ್ (25 ಅಂಕ), ಆಪ್ಟಿಟ್ಯೂಡ್ (25 ಅಂಕ) ಹಾಗೂ ಬ್ಯಾಂಕಿಂಗ್ ಸಾಮಾನ್ಯ ಜ್ಞಾನ (25 ಅಂಕ) ಪ್ರಶ್ನೆಗಳಿರುತ್ತವೆ.
- ಸ್ಥಳೀಯ ಭಾಷಾ ಪರೀಕ್ಷೆ (LLPT): ಅಭ್ಯರ್ಥಿಯು ತಾವು ಅರ್ಜಿ ಸಲ್ಲಿಸಿದ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು. ಕರ್ನಾಟಕಕ್ಕೆ ಅರ್ಜಿ ಸಲ್ಲಿಸುವವರು 'ಕನ್ನಡ' ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. (8ನೇ, 10ನೇ ಅಥವಾ 12ನೇ ತರಗತಿಯಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಓದಿದ್ದರೆ ಈ ಪರೀಕ್ಷೆಯಿಂದ ವಿನಾಯಿತಿ ಇರುತ್ತದೆ).
ಅರ್ಜಿ ಶುಲ್ಕ (Application Fee):
- ಸಾಮಾನ್ಯ, OBC, ಮತ್ತು EWS ಅಭ್ಯರ್ಥಿಗಳಿಗೆ: ರೂ. 800/- (+ GST).
- SC/ST ಮತ್ತು ವಿಕಲಚೇತನ (PwBD) ಅಭ್ಯರ್ಥಿಗಳಿಗೆ: ರೂ. 175/- (+ GST).
ಅರ್ಜಿ ಸಲ್ಲಿಸುವ ವಿಧಾನ – ಹಂತ ಹಂತವಾಗಿ
- ಮೊದಲು NATS 2.0 ಪೋರ್ಟಲ್ನಲ್ಲಿ ನೋಂದಣಿ ಮಾಡಿ. 01-04-2022 ಅಥವಾ ನಂತರ ಪದವಿ ಪಡೆದ ಅಭ್ಯರ್ಥಿಗಳಿಗೆ ಈ ನೋಂದಣಿ ಕಡ್ಡಾಯವಾಗಿದೆ.
- NATS ನೋಂದಣಿ ಪೂರ್ಣಗೊಳಿಸಿ, ನಿಮ್ಮ Enrolment ID ಅನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಿ.
- ನಂತರ Indian Bank ಅಧಿಕೃತ ವೆಬ್‌ಸೈಟ್ ತೆರೆಯಿರಿ.
- Careers ವಿಭಾಗಕ್ಕೆ ಹೋಗಿ “Engagement of Apprentices – 2026” ಅಧಿಸೂಚನೆಯನ್ನು ಆಯ್ಕೆಮಾಡಿ.
- “Click here for New Registration” ಆಯ್ಕೆಯ ಮೂಲಕ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸ ನೀಡಿ ನೋಂದಣಿ ಮಾಡಿ.
- ದೊರೆಯುವ Provisional Registration Number ಮತ್ತು Password ಅನ್ನು ಉಳಿಸಿಕೊಳ್ಳಿ.
- ಅರ್ಜಿಯಲ್ಲಿ ಕೇಳಿರುವ ವೈಯಕ್ತಿಕ, ಶೈಕ್ಷಣಿಕ ಮತ್ತು ಇತರೆ ವಿವರಗಳನ್ನು ಭರ್ತಿ ಮಾಡಿ.
- ಭಾವಚಿತ್ರ, ಸಹಿ, ಎಡಗೈ ಹೆಬ್ಬೆರಳಿನ ಗುರುತು ಮತ್ತು ಕೈಬರಹದ ಘೋಷಣೆಯನ್ನು ಅಪ್‌ಲೋಡ್ ಮಾಡಿ.
- ಅರ್ಜಿಯನ್ನು Preview ಮೂಲಕ ಪರಿಶೀಲಿಸಿ, ಎಲ್ಲ ವಿವರಗಳು ಸರಿಯಾಗಿದ್ದರೆ Complete Registration ಮಾಡಿ.
- ನಿಗದಿತ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
- ಅರ್ಜಿ ಸಲ್ಲಿಕೆ ಪೂರ್ಣಗೊಂಡ ನಂತರ ಅದರ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಇಟ್ಟುಕೊಳ್ಳಿ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರ.
- ಅಭ್ಯರ್ಥಿಯ ಸಹಿ.
- ಎಡಗೈ ಹೆಬ್ಬೆರಳಿನ ಗುರುತು.
- ಇಂಗ್ಲಿಷ್‌ನಲ್ಲಿ ಕೈಬರಹದ ಘೋಷಣೆ.
- ಪದವಿ ಅಂಕಪಟ್ಟಿ ಅಥವಾ ಪ್ರಮಾಣಪತ್ರ.
- ಫಲಿತಾಂಶ ಪ್ರಕಟವಾದ ದಿನಾಂಕವನ್ನು ದೃಢೀಕರಿಸುವ ದಾಖಲೆ.
- NATS 2.0 Enrolment ID.
- ಆಧಾರ್ ಅಥವಾ ಮಾನ್ಯ ಗುರುತಿನ ಚೀಟಿ.
- ಜಾತಿ ಮತ್ತು ಮೀಸಲಾತಿ ಪ್ರಮಾಣಪತ್ರಗಳು (ಅನ್ವಯಿಸಿದರೆ).
- PwBD ಅಭ್ಯರ್ಥಿಗಳಿಗೆ ಅಂಗವೈಕಲ್ಯ ಪ್ರಮಾಣಪತ್ರ/UDID ಕಾರ್ಡ್ (ಅನ್ವಯಿಸಿದರೆ).
KPSCVaani ಸಲಹೆ: ಇದು ಖಾಯಂ ಉದ್ಯೋಗವಲ್ಲದಿದ್ದರೂ (Apprenticeship ಆಗಿದ್ದರೂ), 1 ವರ್ಷದ ಬ್ಯಾಂಕಿಂಗ್ ತರಬೇತಿ ಹಾಗೂ ಅಲ್ಲಿ ಸಿಗುವ ಅನುಭವವು ಭವಿಷ್ಯದಲ್ಲಿ ಐಬಿಪಿಎಸ್ (IBPS), ಎಸ್‌ಬಿಐ (SBI) ನಂತಹ ಪ್ರತಿಷ್ಠಿತ ಬ್ಯಾಂಕ್ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಯಂ ಉದ್ಯೋಗ ಪಡೆಯಲು ಬಲವಾದ ಬುನಾದಿಯಾಗುತ್ತದೆ. ಆದ್ದರಿಂದ ಪದವೀಧರರು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಆಲ್ ದಿ ಬೆಸ್ಟ್!
- No. of posts
- 1500
- Start Date
- 5 ನವೆಂಬರ್ 2026
- End Date
- 25 ನವೆಂಬರ್ 2026
- Employment Type
- FULL_TIME
- Organization
- Indian Bank (Website)
- Location
- Address: Indian Bank, Corporate Office, PB No: 5555, 254-260, Avvai Shanmugam Salai,, Royapettah, Chennai, 600014
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.
