ಭಾರತೀಯ ಸೈನ್ಯದಲ್ಲಿ ಉದ್ಯೋಗ ಅವಕಾಶ: 10+2 ಟೆಕ್ನಿಕಲ್ ಎಂಟ್ರಿ ಸ್ಕೀಮ್ (TES-57) ಜುಲೈ 2027ರ ಅಧಿಸೂಚನೆ ಬಿಡುಗಡೆ
ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ದೇಶಸೇವೆ ಸಲ್ಲಿಸುವ ಕನಸು ನಿಮಗಿದೆಯೇ? ಹಾಗಿದ್ದರೆ ದ್ವಿತೀಯ ಪಿಯುಸಿ ಮುಗಿಸಿದ ಯುವಕರಿಗೆ ಇಲ್ಲಿದೆ ಒಂದು ಅತ್ಯುತ್ತಮ ಅವಕಾಶ.
ಭಾರತೀಯ ಭೂಸೇನೆಯು 10+2 ತಾಂತ್ರಿಕ ಪ್ರವೇಶ ಯೋಜನೆ (Technical Entry Scheme - TES 57) ಜುಲೈ 2027ರ ಕೋರ್ಸ್‌ಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 90 ಹುದ್ದೆಗಳಿಗೆ ಅರ್ಹ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.
ಈ ಯೋಜನೆಯಡಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉಚಿತ ಇಂಜಿನಿಯರಿಂಗ್ ಶಿಕ್ಷಣದ ಜೊತೆಗೆ ತರಬೇತಿ ಅವಧಿಯಲ್ಲೇ ತಿಂಗಳಿಗೆ ₹56,100 ಸ್ಟೈಪೆಂಡ್ ದೊರೆಯಲಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಆಸಕ್ತರು ತಡಮಾಡದೆ ಅರ್ಜಿ ಸಲ್ಲಿಸಬಹುದು. ಉದ್ಯೋಗಕ್ಕೆ ಸಂಬಂಧಿಸಿದ ಪ್ರಮುಖ ವಿವರಗಳನ್ನು KPSCVAANI.COM ನಿಮ್ಮ ಮುಂದೆ ತಂದಿದೆ. ಪ್ರತಿಯೊಬ್ಬ ಉದ್ಯೋಗ ಆಕಾಂಕ್ಷಿಯ ಕನಸನ್ನು ಸಾಕಾರಗೊಳಿಸಲು KPSCVAANI.COM ಅತ್ಯುತ್ತಮ ನೇಮಕಾತಿ ಮತ್ತು ಪ್ರವೇಶ ಅಧಿಸೂಚನೆಗಳನ್ನು ನೇರವಾಗಿ ನಿಮ್ಮ ಬಳಿಗೆ ತರುತ್ತದೆ.
Indian Army ನೇಮಕಾತಿಯ ಪ್ರಮುಖ ವಿವರಗಳು:
- ಸಂಸ್ಥೆಯ ಹೆಸರು: ಭಾರತೀಯ ಸೇನೆ (Indian Army)
- ಯೋಜನೆಯ ಹೆಸರು: Technical Entry Scheme (TES 57)
- ಕೋರ್ಸ್ ಪ್ರಾರಂಭ: ಜುಲೈ 2027
- ಒಟ್ಟು ಖಾಲಿ ಹುದ್ದೆಗಳು: 90 ಹುದ್ದೆಗಳು
- ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್
- ಕೊನೆಯ ದಿನಾಂಕ: 12 ನವೆಂಬರ್ 2026
ಪ್ರಮುಖ ದಿನಾಂಕಗಳು (Important Dates):
- ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: 14 ಅಕ್ಟೋಬರ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12 ನವೆಂಬರ್ 2026 (ಮಧ್ಯಾಹ್ನ 12:00 ಗಂಟೆಯವರೆಗೆ)
- ಶಾರ್ಟ್‌ಲಿಸ್ಟ್ ಕಟ್-ಆಫ್ ಪ್ರಕಟಣೆ: ನವೆಂಬರ್ 2026 ರ 3ನೇ/4ನೇ ವಾರ (ಸಂಭವನೀಯ)
- ಎಸ್‌ಎಸ್‌ಬಿ (SSB) ಸಂದರ್ಶನ: ಫೆಬ್ರವರಿ - ಮಾರ್ಚ್ 2027
ವಿದ್ಯಾರ್ಹತೆ (Educational Qualification):
- ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಿಯಿಂದ ಭೌತಶಾಸ್ತ್ರ (Physics), ರಸಾಯನಶಾಸ್ತ್ರ (Chemistry) ಮತ್ತು ಗಣಿತ (Mathematics - PCM) ವಿಷಯಗಳೊಂದಿಗೆ ಕನಿಷ್ಠ 60% ಒಟ್ಟು ಅಂಕಗಳೊಂದಿಗೆ 10+2 ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಇದರೊಂದಿಗೆ ಅಭ್ಯರ್ಥಿಯು ಕಡ್ಡಾಯವಾಗಿ JEE Mains 2026 ಪ್ರವೇಶ ಪರೀಕ್ಷೆಯಲ್ಲಿ ಹಾಜರಾಗಿರಬೇಕು.
ವಯೋಮಿತಿ (Age Limit):
- ಜುಲೈ 1, 2027ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯಸ್ಸು 16 ½ ವರ್ಷದಿಂದ 19 ½ ವರ್ಷದೊಳಗೆ ಇರಬೇಕು.
- ಅಂದರೆ ಅಭ್ಯರ್ಥಿಯು 01 ಜನವರಿ 2008ಕ್ಕಿಂತ ಮುಂಚೆ ಹಾಗೂ 01 ಜನವರಿ 2011ರ ನಂತರ ಜನಿಸಿರಬಾರದು (ಎರಡೂ ದಿನಗಳು ಸೇರಿ).

ಖಾಲಿ ಹುದ್ದೆಗಳ ವಿವರ (Vacancies):
- ಒಟ್ಟು ಹುದ್ದೆಗಳು: 90 (ಸಂಸ್ಥೆಯ ಅವಶ್ಯಕತೆಗೆ ಅನುಗುಣವಾಗಿ ಹುದ್ದೆಗಳ ಸಂಖ್ಯೆ ಬದಲಾಗಬಹುದು).
ಆಯ್ಕೆ ಪ್ರಕ್ರಿಯೆ (Selection Process): ಭಾರತೀಯ ಸೈನ್ಯದ TES-57 ಪ್ರವೇಶಕ್ಕಾಗಿ ಆಯ್ಕೆ ಪ್ರಕ್ರಿಯೆಯು ಕೆಳಗಿನ ಹಂತಗಳನ್ನು ಒಳಗೊಂಡಿದೆ:
1. ಆನ್‌ಲೈನ್ ಅರ್ಜಿ ಸಲ್ಲಿಕೆ
2. ಶಾರ್ಟ್‌ಲಿಸ್ಟಿಂಗ್: JEE Mains ಕಾಮನ್ ರ‍್ಯಾಂಕ್ ಲಿಸ್ಟ್ (CRL) ಆಧರಿಸಿ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
3. ಎಸ್‌ಎಸ್‌ಬಿ (SSB) ಸಂದರ್ಶನ: 5 ದಿನಗಳ ಕಾಲ ನಡೆಯುವ ಈ ಸಂದರ್ಶನವು ಪ್ರಮುಖವಾಗಿ ಪ್ರಯಾಗ್‌ರಾಜ್ (ಉತ್ತರ ಪ್ರದೇಶ), ಭೋಪಾಲ್ (ಮಧ್ಯಪ್ರದೇಶ), ಬೆಂಗಳೂರು (ಕರ್ನಾಟಕ) ಅಥವಾ ಜಲಂಧರ್ (ಪಂಜಾಬ್) ಕೇಂದ್ರಗಳಲ್ಲಿ ನಡೆಯಲಿದೆ.
4. ವೈದ್ಯಕೀಯ ಪರೀಕ್ಷೆ (Medical Examination): ಎಸ್‌ಎಸ್‌ಬಿ ಯಲ್ಲಿ ಶಿಫಾರಸುಗೊಂಡ ಅಭ್ಯರ್ಥಿಗಳಿಗೆ ಹತ್ತಿರದ ಮಿಲಿಟರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಇರುತ್ತದೆ.
5. ಅಂತಿಮ ಮೆರಿಟ್ ಪಟ್ಟಿ ಮತ್ತು ಜಾಯಿನಿಂಗ್ ಲೆಟರ್
ತರಬೇತಿ ಮತ್ತು ಇಂಜಿನಿಯರಿಂಗ್ ಡಿಗ್ರಿ (Training & Engineering Degree):
- ಆಯ್ಕೆಯಾದ ಅಭ್ಯರ್ಥಿಗಳಿಗೆ ಒಟ್ಟು 4 ವರ್ಷಗಳ ತರಬೇತಿ ನೀಡಲಾಗುತ್ತದೆ.
- ಮೊದಲ 3 ವರ್ಷಗಳು: ಕೇಡೆಟ್ಸ್ ಟ್ರೈನಿಂಗ್ ವಿಂಗ್ಸ್ (CME ಪುಣೆ, MCTE ಮಹೂ ಅಥವಾ MCEME ಸಿಂಕಂದರಾಬಾದ ) ನಲ್ಲಿ ತಾಂತ್ರಿಕ ಮತ್ತು ಮಿಲಿಟರಿ ತರಬೇತಿ.
- ಕೊನೆಯ 1 ವರ್ಷ: ಭಾರತೀಯ ಮಿಲಿಟರಿ ಅಕಾಡೆಮಿ (IMA), Dehradun ನಲ್ಲಿ ತರಬೇತಿ.
- 4 ವರ್ಷಗಳ ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಡಿಗ್ರಿ ಪ್ರದಾನ ಮಾಡಲಾಗುತ್ತದೆ.
ಇದನ್ನು ಓದಿ: UCO Bank Recruitment 2026: 530 ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ₹16,650 ಸ್ಟೈಪೆಂಡ್!
ವೇತನ ಶ್ರೇಣಿ ಮತ್ತು ಹುದ್ದೆ (Rank & Salary):
- ಹುದ್ದೆ: ತರಬೇತಿ ಪೂರ್ಣಗೊಂಡ ನಂತರ ನೇರವಾಗಿ ಲೆಫ್ಟಿನೆಂಟ್ (Lieutenant) ಹುದ್ದೆಗೆ ಖಾಯಂ ಕಮಿಷನ್ (Permanent Commission) ನೀಡಲಾಗುತ್ತದೆ.
- ವೇತನ ಮ್ಯಾಟ್ರಿಕ್ಸ್: ರಕ್ಷಣಾ ಇಲಾಖೆಯ ಪೇ ಮ್ಯಾಟ್ರಿಕ್ಸ್ ಲೆವೆಲ್-10 ರ ಪ್ರಕಾರ ಮಾಸಿಕ ವೇತನ ₹56,100 ರಿಂದ ₹1,77,500 ರವರೆಗೆ ಇರುತ್ತದೆ. (ವಾರ್ಷಿಕ CTC ಸುಮಾರು ₹17-18 ಲಕ್ಷಗಳವರೆಗೆ ಇರುತ್ತದೆ).
- ಇದರೊಂದಿಗೆ ಮಿಲಿಟರಿ ಸರ್ವಿಸ್ ಪೇ (MSP ₹15,500 ಸ್ಥಿರ), ತುಟ್ಟಿಭತ್ಯೆ (DA), ಕಿಟ್ ನಿರ್ವಹಣಾ ಭತ್ಯೆ ಮತ್ತು ಇತರೆ ಅಪಾಯ ಹಾಗೂ ಕಠಿಣ ಪರಿಸ್ಥಿತಿ ಭತ್ಯೆಗಳು ಅನ್ವಯವಾಗಲಿವೆ.
ಅರ್ಜಿ ಸಲ್ಲಿಸುವುದು ಹೇಗೆ? (How to Apply):
- ಆಸಕ್ತ ಅಭ್ಯರ್ಥಿಗಳು ಭಾರತೀಯ ಸೈನ್ಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: www.joinindianarmy.nic.in
- ಮುಖಪುಟದಲ್ಲಿರುವ 'Officer Entry Apply/Login' ಅಥವಾ 'Online Application' ಬಟನ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಮೂಲ ವಿವರಗಳನ್ನು ನೊಂದಾಯಿಸಿ ಮತ್ತು ಲಾಗ್ ಇನ್ ಮಾಡಿ.
- '10+2 TES-57 Course (July 2027)' ಅರ್ಜಿಯನ್ನು ಆಯ್ಕೆ ಮಾಡಿ.
- ಕೇಳಲಾದ ಅಗತ್ಯ ಶೈಕ್ಷಣಿಕ ವಿವರಗಳು, 10th, 12th PCM ಅಂಕಗಳು ಹಾಗೂ JEE Mains 2026 ಅಪ್ಲಿಕೇಶನ್ ಸಂಖ್ಯೆಯನ್ನು ಸರಿಯಾಗಿ ಭರ್ತಿ ಮಾಡಿ.
- ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ಔಟ್ ತೆಗೆದುಕೊಳ್ಳಿ.
"ಕನಸುಗಳು ಕೇವಲ ನಿದ್ದೆಯಲ್ಲಿ ಕಾಣುವುದಲ್ಲ, ಯಾವ ಕನಸುಗಳು ನಿಮ್ಮ ನಿದ್ದೆಯನ್ನು ಕೆಡಿಸುತ್ತವೆಯೋ ಅದೇ ನಿಮ್ಮ ನಿಜವಾದ ಗುರಿಯಾಗಿರಬೇಕು."
- No. of posts
- 90
- End Date
- 12 ನವೆಂಬರ್ 2026
- Pay Scale
- 56100 - 177500 INR
- Employment Type
- FULL_TIME
- Organization
- Indian Army (Website)
- Location
- Raisina Hill, New Delhi, DL, 110011
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.
