ಬ್ಯಾಂಕಿಂಗ್ ಕ್ಷೇತ್ರ (IBPS)ದಲ್ಲಿ ಖಾಲಿ ಇರುವ 710 ಭರ್ಜರಿ ಹುದ್ದೆಗಳಿಗೆ ಪದವಿ ಪಾಸಾದವರಿಂದ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಬ್ಯಾಂಕಿಂಗ್ ಕ್ಷೇತ್ರ (IBPS)ದಲ್ಲಿ ಖಾಲಿ ಇರುವ 710 ಭರ್ಜರಿ ಹುದ್ದೆಗಳಿಗೆ ಪದವಿ ಪಾಸಾದವರಿಂದ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by Yallamma G
01 ನವೆಂಬರ್ 2022 Others Central Important

ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೋನಲ್ ಸೆಲೆಕ್ಷನ್ (IBPS)ನಲ್ಲಿ ಖಾಲಿ ಇರುವ 710 ಅಗ್ರಿಕಲ್ಚರಲ್ ಫೀಲ್ಡ್‌ ಆಫೀಸರ್, ಐಟಿ ಆಫೀಸರ್, ರಾಜ್ಯಭಾಷಾ ಅಧಿಕಾರಿ ಮತ್ತು ಕಾನೂನು ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 21/11/2022 ರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕದಲ್ಲಿಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 

ಒಟ್ಟು ಹುದ್ದೆಗಳ ವಿವರ : 710
* ಐಟಿ ಆಫೀಸರ್ - 44
* ಅಗ್ರಿಕಲ್ಚರಲ್ ಫೀಲ್ಡ್‌ ಆಫೀಸರ್ - 516
* ರಾಜ್ಯಭಾಷಾ ಅಧಿಕಾರಿ - 25 
* ಕಾನೂನು ಅಧಿಕಾರಿ - 10
* HR/ಪರ್ಸೊನೆಲ್ ಆಫೀಸರ್ - 15
* ಮಾರ್ಕೆಟಿಂಗ್ ಆಫೀಸರ್ - 100

Job Overview
No. of posts
710
Start Date
1 ನವೆಂಬರ್ 2022
End Date
21 ನವೆಂಬರ್ 2022
Employment Type
FULL_TIME
Organization
KPSC Vaani (Website)
Location
ಭಾರತದಾದ್ಯಂತ, KA,
Selection Procedure:

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆ (ಪ್ರಿಲಿಮಿನರಿ, ಮುಖ್ಯ ಪರೀಕ್ಷೆ) ಮತ್ತು ಸಂದರ್ಶನವನ್ನು ನಡೆಸುವ ಮೂಲಕ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
* ಆಯಾ ರಾಜ್ಯಗಳ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆ ಇರಲಿದೆ.

Qualification:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಅಂಗೀಕೃತ ಸಂಸ್ಥೆ/ ವಿಶ್ವ ವಿದ್ಯಾಲಯದಿಂದ ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು.
* ಕಂಪ್ಯೂಟರ ಜ್ಞಾನವನ್ನು ಹೊಂದಿರಬೇಕು.

Fee:

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು 
* ಸಾಮಾನ್ಯ, ಮತ್ತು OBC ವರ್ಗದ ಅಭ್ಯರ್ಥಿಗಳಿಗೆ ರೂ.850. ಹಾಗೂ 
* SC/ ST/ PWD ಅಭ್ಯರ್ಥಿಗಳಿಗೆ ರೂ.175.ರೂ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. 

Age Limit:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 20 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ 30 ವರ್ಷಗಳ ವಯೋಮಿತಿಯನ್ನು ಮೀರಿರಬಾರದು 
- ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಗರಿಷ್ಠ 3 ವರ್ಷಗಳು ಹಾಗೂ 
- SC ST ಪ್ರವರ್ಗ-1 ರ ಮತ್ತು ಮಾಜಿ ಸೈನಿಕರು ಅಭ್ಯರ್ಥಿಗಳಿಗೆ ಗರಿಷ್ಠ 5 ವರ್ಷಗಳು ಹಾಗೂ 
- ಅಂಗವಿಕಲ  ಅಭ್ಯರ್ಥಿಗಳಿಗೆ ಗರಿಷ್ಠ 10 ವರ್ಷಗಳು ವಯೋಮಿತಿಯ ಸಡಿಲಿಕೆಯನ್ನು ನಿಗದಿಪಡಿಸಲಾಗಿದೆ.

To Download Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.