SSLC, PUC, ನರ್ಸಿಂಗ್ ಆದವರಿಗೆ ಭರ್ಜರಿ ಅವಕಾಶ: ಹಾವೇರಿ ಆರೋಗ್ಯ ಇಲಾಖೆಯಲ್ಲಿ ನಮಕಾತಿ, ಯಾವುದೇ ಆನ್‌ಲೈನ್ ಅರ್ಜಿ ಇಲ್ಲ, ನೇರ ಸಂದರ್ಶನ!
ಹಾವೇರಿ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ವೈದ್ಯರು, ನರ್ಸಿಂಗ್ ಅಧಿಕಾರಿಗಳು ಸೇರಿ ವಿವಿಧ ಹುದ್ದೆಗಳ ನೇಮಕಾತಿ: ನ.16ರೊಳಗೆ ಅರ್ಜಿ ಸಲ್ಲಿಸಿ!
ಕರ್ನಾಟಕದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಹಾವೇರಿ ಜಿಲ್ಲೆಯಿಂದ ಉತ್ತಮ ಉದ್ಯೋಗಾವಕಾಶವೊಂದು ಪ್ರಕಟವಾಗಿದೆ. ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM), PM-ABHIM ಹಾಗೂ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಮಂಜೂರಾಗಿರುವ ಖಾಲಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹಾವೇರಿ ಜಿಲ್ಲಾ ಪಂಚಾಯತ್‌ನ ಜಿಲ್ಲಾ ಯೋಜನಾ ನಿರ್ವಹಣಾ ಘಟಕವು 2026ರ ನವೆಂಬರ್ 4ರಂದು ಈ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ. ಅಧಿಸೂಚನೆಯಲ್ಲಿ ವೈದ್ಯಾಧಿಕಾರಿಗಳು (MBBS), ಪ್ರಯೋಗಶಾಲಾ ತಂತ್ರಜ್ಞರು, ನರ್ಸಿಂಗ್ ಅಧಿಕಾರಿಗಳು, ಮನೋವೈದ್ಯಕೀಯ ನರ್ಸ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು (PHCO), ಮನೋವಿಜ್ಞಾನಿ, ಆಡಿಯಾಲಜಿಸ್ಟ್/ಸ್ಪೀಚ್ ಥೆರಪಿಸ್ಟ್, ಆಪ್ಟೋಮೆಟ್ರಿಸ್ಟ್, ಎಕ್ಸ್-ರೇ ತಂತ್ರಜ್ಞರು ಹಾಗೂ ಫಿಸಿಯೋಥೆರಪಿಸ್ಟ್ ಹುದ್ದೆಗಳನ್ನು ವಿವರಿಸಲಾಗಿದೆ.
ಈ ನೇಮಕಾತಿಯ ವಿಶೇಷವೆಂದರೆ ಅಭ್ಯರ್ಥಿಗಳು ಆನ್‌ಲೈನ್ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸುವಂತಿಲ್ಲ. ಸಂಬಂಧಿಸಿದ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಅದೇ ದಿನ ಭರ್ತಿ ಮಾಡಿ ಅಗತ್ಯ ದಾಖಲೆಗಳ ದೃಢೀಕೃತ ಜೆರಾಕ್ಸ್ ಪ್ರತಿಗಳು ಮತ್ತು ಇತ್ತೀಚಿನ ಭಾವಚಿತ್ರಗಳೊಂದಿಗೆ ಖುದ್ದಾಗಿ ಸಲ್ಲಿಸಬೇಕು.
ಕೆಲವು ಹುದ್ದೆಗಳಿಗೆ 2026ರ ನವೆಂಬರ್ 16 ಕೊನೆಯ ದಿನವಾಗಿದ್ದು, ವೈದ್ಯಾಧಿಕಾರಿಗಳ ಕೆಲವು ವಿಭಾಗಗಳಿಗೆ ಹುದ್ದೆಗಳು ಭರ್ತಿಯಾಗುವವರೆಗೆ ಅರ್ಜಿ ಸ್ವೀಕರಿಸುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಮುಖ ವಿವರಗಳು
- ನೇಮಕಾತಿ ಇಲಾಖೆ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾವೇರಿ
- ನೇಮಕಾತಿ ಘಟಕ : ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಹಾವೇರಿ
- ಅಧಿಸೂಚನೆ ದಿನಾಂಕ : 04-11-2026
- ಯೋಜನೆಗಳು : NHM, NUHM, PM-ABHIM ಹಾಗೂ ಇತರ ಆರೋಗ್ಯ ಕಾರ್ಯಕ್ರಮಗಳು
- ನೇಮಕಾತಿ ವಿಧಾನ : ಗುತ್ತಿಗೆ ಆಧಾರಿತ
- ಅರ್ಜಿ ವಿಧಾನ : ನೇರವಾಗಿ ಕಚೇರಿಯಲ್ಲಿ ಅರ್ಜಿ ಸಲ್ಲಿಕೆ
ಕೆಲವು ಹುದ್ದೆಗಳಿಗೆ ಅರ್ಜಿ ದಿನಾಂಕ
- ವೈದ್ಯಾಧಿಕಾರಿ ಹುದ್ದೆಗಳು – 05-11-2026ರಿಂದ ಹುದ್ದೆಗಳು ಭರ್ತಿಯಾಗುವವರೆಗೆ
- ಉಳಿದ ಹುಡೆಗಳು : 05-11-2026ರಿಂದ 16-11-2026ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಹುದ್ದೆಗಳ ವಿವರ :
1 ವೈದ್ಯಾಧಿಕಾರಿಗಳು (MBBS) : 13
2 ಪ್ರಯೋಗಶಾಲಾ ತಂತ್ರಜ್ಞರು (Lab Technician) : 8
3 ನರ್ಸಿಂಗ್ ಅಧಿಕಾರಿಗಳು (ವಿವಿಧ ವಿಭಾಗಗಳು): 18
4 ನರ್ಸಿಂಗ್ ಅಧಿಕಾರಿ – ಮೊಬೈಲ್ ಹೆಲ್ತ್ ಯುನಿಟ್ : 1
5 ಮನೋವೈದ್ಯಕೀಯ ನರ್ಸ್ (Psychiatric Nurse) : 1
6 ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು (PHCO) : 10
7 ಮನೋವಿಜ್ಞಾನಿ (Psychologist) : 1
8 ಆಡಿಯಾಲಜಿಸ್ಟ್/ಸ್ಪೀಚ್ ಥೆರಪಿಸ್ಟ್ : 1
9 ಆಪ್ಟೋಮೆಟ್ರಿಸ್ಟ್ (Optometrist) : 1
10 ಎಕ್ಸ್-ರೇ ತಂತ್ರಜ್ಞರು (X-Ray Technician) : 4
11 ಫಿಸಿಯೋಥೆರಪಿಸ್ಟ್ (Physiotherapist): 1
ಶೈಕ್ಷಣಿಕ ಅರ್ಹತೆ
- ವೈದ್ಯಾಧಿಕಾರಿಗಳು (Medical Officers): ಕಡ್ಡಾಯವಾಗಿ ಎಂ.ಬಿ.ಬಿ.ಎಸ್ (MBBS) ಉತ್ತೀರ್ಣರಾಗಿ, ಇಂಟರ್ನ್‌ಶಿಪ್ ಪೂರೈಸಿ, KMC ನೋಂದಣಿ ಹೊಂದಿರಬೇಕು (Provisional ನೋಂದಣಿಗೆ ಅವಕಾಶವಿಲ್ಲ)
- ಶುಶ್ರೂಷಾಧಿಕಾರಿಗಳು / ಸ್ಟಾಫ್ ನರ್ಸ್ (Nursing Officers): ಜಿ.ಎನ್.ಎಂ (GNM) ಅಥವಾ ಬಿ.ಎಸ್ಸಿ ನರ್ಸಿಂಗ್ (B.Sc Nursing) ಮುಗಿಸಿ, ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು (ಕೆಲವು ಹುದ್ದೆಗಳಿಗೆ 2 ವರ್ಷದ ಅನುಭವ ಕೇಳಲಾಗಿದೆ).
- ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು (PHCO - ANM): ಸರ್ಕಾರದ ಮಾನ್ಯತೆ ಪಡೆದ ಎ.ಎನ್.ಎಂ (ANM) ಶಾಲೆಗಳಲ್ಲಿ ತರಬೇತಿ ಪಡೆದು, ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರಬೇಕು.
- ಯೋಗ ಶಾಲಾ ತಂತ್ರಜ್ಞರು (Lab Technicians): ಎಸ್‌ಎಸ್‌ಎಲ್‌ಸಿ (SSLC) ಮತ್ತು 3 ವರ್ಷದ ಲ್ಯಾಬ್ ಟೆಕ್ನಿಷಿಯನ್ ಡಿಪ್ಲೋಮಾ, ಅಥವಾ ದ್ವಿತೀಯ ಪಿಯುಸಿ (ವಿಜ್ಞಾನ) ಮತ್ತು 2 ವರ್ಷದ ಡಿಪ್ಲೋಮಾ ಮಾಡಿರಬೇಕು. ಪ್ಯಾರಾಮೆಡಿಕಲ್ ಬೋರ್ಡ್ ನೋಂದಣಿ ಕಡ್ಡಾಯ.
- ಕ್ಷ-ಕಿರಣ ತಂತ್ರಜ್ಞರು (X-Ray Technician): SSLC/PUC ಜೊತೆಗೆ X-Ray/Medical Imaging ನಲ್ಲಿ ಡಿಪ್ಲೋಮಾ.
- ಸೈಕಾಲಜಿಸ್ಟ್ (Psychologist): ಮಕ್ಕಳ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ.
- ಆಡಿಯೋಲೊಜಿಸ್ಟ್/ಸ್ಪೀಚ್ ಥೆರಪಿಸ್ಟ್: ಬ್ಯಾಚುಲರ್ ಡಿಗ್ರಿ.
- ಆಪ್ಟೋಮೆಟ್ರಿಸ್ಟ್ (Optometrist): ಆಪ್ಟೋಮೆಟ್ರಿಯಲ್ಲಿ ಬ್ಯಾಚುಲರ್/ಮಾಸ್ಟರ್ ಡಿಗ್ರಿ.
- ಫಿಸಿಯೋಥೆರಪಿಸ್ಟ್ (Physiotherapist): B.P.T ಪದವಿ ಮತ್ತು 2 ವರ್ಷದ ಅನುಭವ.
ಅರ್ಜಿ ಸಲ್ಲಿಸುವ ವಿಳಾಸ (Where to Apply):
ಬಹುತೇಕ ಹುದ್ದೆಗಳ ಅರ್ಜಿ ವಿತರಣೆ ಮತ್ತು ಸ್ವೀಕಾರವು "ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಬಿ-ಬ್ಲಾಕ್, ಜಿಲ್ಲಾ ಆ.ಕು.ಕ ಅಧಿಕಾರಿಗಳ ಕಚೇರಿ ಆವರಣ, ಜಿಲ್ಲಾ ಆಡಳಿತ ಭವನ ದೇವಗಿರಿ, ಹಾವೇರಿ" ಇಲ್ಲಿ ನಡೆಯಲಿದೆ.
(ಸೂಚನೆ: ಕ್ಷ-ಕಿರಣ ತಂತ್ರಜ್ಞರು ಮತ್ತು ಕೆಲವು ನರ್ಸಿಂಗ್ ಹುದ್ದೆಗಳಿಗೆ ಜಿಲ್ಲಾ ಕ್ಷಯ ರೋಗ ಅಧಿಕಾರಿಗಳ ಕಚೇರಿ ಅಥವಾ ಸರ್ವೆಕ್ಷಣಾ ಘಟಕವನ್ನು ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಕಡ್ಡಾಯವಾಗಿ ಓದಿ).
ಅರ್ಜಿಯೊಂದಿಗೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು
- ಇತ್ತೀಚಿನ ಭಾವಚಿತ್ರ – 2 ಪ್ರತಿಗಳು.
- SSLC ಅಂಕಪಟ್ಟಿ.
- PUC ಅಂಕಪಟ್ಟಿ (ಅನ್ವಯಿಸಿದಲ್ಲಿ).
- ಪದವಿ ಅಥವಾ ಡಿಪ್ಲೊಮಾ ಪ್ರಮಾಣಪತ್ರ.
- ಪ್ರತಿ ಸೆಮಿಸ್ಟರ್/ವರ್ಷದ ಅಂಕಪಟ್ಟಿಗಳು.
- ಇಂಟರ್ನ್‌ಶಿಪ್ ಪೂರ್ಣಗೊಳಿಸಿದ ಪ್ರಮಾಣಪತ್ರ (ವೈದ್ಯಾಧಿಕಾರಿಗಳಿಗೆ).
- KMC ನೋಂದಣಿ ಪ್ರಮಾಣಪತ್ರ (ವೈದ್ಯಾಧಿಕಾರಿಗಳಿಗೆ).
- ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನೋಂದಣಿ ಪ್ರಮಾಣಪತ್ರ (ನರ್ಸಿಂಗ್ ಹುದ್ದೆಗಳಿಗೆ).
- ಕರ್ನಾಟಕ ಅರೆವೈದ್ಯಕೀಯ ಮಂಡಳಿ ನೋಂದಣಿ ಪ್ರಮಾಣಪತ್ರ (ಪ್ರಯೋಗಶಾಲಾ ತಂತ್ರಜ್ಞರಿಗೆ ಅನ್ವಯಿಸಿದಲ್ಲಿ).
- ಕೆಲಸದ ಅನುಭವ ಪ್ರಮಾಣಪತ್ರ.
- ಜಾತಿ ಪ್ರಮಾಣಪತ್ರ ಮತ್ತು ಇತರ ಮೀಸಲಾತಿ ಪ್ರಮಾಣಪತ್ರಗಳು (ಅನ್ವಯಿಸಿದಲ್ಲಿ).
- ಇತರ ವಿಶೇಷ ಅರ್ಹತೆಗಳ ಪ್ರಮಾಣಪತ್ರಗಳು.
ಸಂಪರ್ಕ ವಿವರಗಳು
ನೇಮಕಾತಿ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಅಭ್ಯರ್ಥಿಗಳು ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದು.
- ಕಚೇರಿ: ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಹಾವೇರಿ.
- ದೂರವಾಣಿ: 08375-298927
- ಇ-ಮೇಲ್: [email protected]
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ
ಸಮಾರೋಪ
ವೈದ್ಯಕೀಯ, ನರ್ಸಿಂಗ್, ಪ್ರಯೋಗಶಾಲಾ ತಂತ್ರಜ್ಞಾನ ಮತ್ತು ಇತರ ಆರೋಗ್ಯ ಸಂಬಂಧಿತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಈ ನೇಮಕಾತಿ ಉತ್ತಮ ಅವಕಾಶವಾಗಿದೆ.
ವಿಶೇಷವಾಗಿ MBBS, GNM, B.Sc Nursing, ANM, X-Ray Technology Diploma, B.P.T, Optometry ಮತ್ತು Psychology ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಅರ್ಹತೆಗೆ ಹೊಂದುವ ಹುದ್ದೆಗಳನ್ನು ಪರಿಶೀಲಿಸಬಹುದು.
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಮೂಲ ಅಧಿಸೂಚನೆಯಲ್ಲಿ ನೀಡಿರುವ ವಿದ್ಯಾರ್ಹತೆ, ಅನುಭವ, ನೋಂದಣಿ, ಅರ್ಜಿ ಸ್ವೀಕಾರದ ಸ್ಥಳ ಮತ್ತು ಕೊನೆಯ ದಿನಾಂಕವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶವಿಲ್ಲದ ಕಾರಣ, ನಿಗದಿತ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸುವುದು ಅಗತ್ಯ.
KPSCVaani ಸಲಹೆ: ಇದು ಖಾಯಂ ಉದ್ಯೋಗವಲ್ಲದಿದ್ದರೂ (ಗುತ್ತಿಗೆ ಆಧಾರ), ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಅನುಭವವು ಭವಿಷ್ಯದಲ್ಲಿ ಖಾಯಂ ಉದ್ಯೋಗ ಪಡೆಯಲು ನೆರವಾಗುತ್ತದೆ. ಅರ್ಜಿ ಸಲ್ಲಿಸುವಾಗ ಜಾತಿ ಪ್ರಮಾಣ ಪತ್ರ, ಗ್ರಾಮೀಣ/ಕನ್ನಡ ಮಾಧ್ಯಮ ಪ್ರಮಾಣ ಪತ್ರ ಮತ್ತು ಎಲ್ಲಾ ಸೆಮಿಸ್ಟರ್‌ಗಳ ಮೂಲ ಅಂಕಪಟ್ಟಿಗಳ ದೃಢೀಕೃತ (Attested) ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಲು ಮರೆಯದಿರಿ.
- Start Date
- 8 ನವೆಂಬರ್ 2026
- End Date
- 16 ನವೆಂಬರ್ 2026
- Employment Type
- FULL_TIME
- Organization
- DHFWS Haveri (Website)
- Location
- District Health Office, District Administrative Complex, B Block / 2nd Building,, Haveri, KA, 581110
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.
