ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಇಂಜಿನಿಯರ್ಸ್ (GRSE) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
ಭಾರತದ ಪ್ರತಿಷ್ಠಿತ ರಕ್ಷಣಾ ಹಡಗು ನಿರ್ಮಾಣ ಸಂಸ್ಥೆ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಎಂಜಿನಿಯರ್ಸ್ ಲಿಮಿಟೆಡ್ (GRSE) 2025ರ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 56 ಹುದ್ದೆಗಳಿಗೆ, ಅರ್ಥಪೂರ್ಣವಾದ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು 2025ರ ಜೂನ್ 12ರೊಳಗೆ ಅಧಿಕೃತ ವೆಬ್‌ಸೈಟ್ grse.in ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ :
ಸಂಸ್ಥೆ ಹೆಸರು : ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಎಂಜಿನಿಯರ್ಸ್ ಲಿಮಿಟೆಡ್ (GRSE)
ಒಟ್ಟು ಹುದ್ದೆಗಳ ಸಂಖ್ಯೆ : 56
ಹುದ್ದೆಗಳ ಹೆಸರು : ಸೂಪರ್ವೈಸರ್, ಡಿಸೈನ್ ಅಸಿಸ್ಟೆಂಟ್, ಎಂಜಿನ್ ಟೆಕ್ನಿಷಿಯನ್
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 22-ಮೇ-2025 (ಮಧ್ಯಾಹ್ನ 2 ಗಂಟೆಯಿಂದ)
ಕೊನೆಯ ದಿನಾಂಕ : 12-ಜೂನ್-2025 (ರಾತ್ರಿ 11:59 ಗಂಟೆಯವರೆಗೆ)
ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್
ಅಧಿಸೂಚನೆ ಸಂಖ್ಯೆ : 2025/04 (S)
ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಗಳು ಯಾವುದೇ ಪದವಿ, BBA, B.Sc, ಡಿಪ್ಲೊಮಾ, BBM, ಪಿಜಿ ಡಿಪ್ಲೊಮಾ (ಸಂಬಂಧಿತ ಕ್ಷೇತ್ರಗಳಲ್ಲಿ) ಹೊಂದಿರಬೇಕು.
ವಯೋಮಿತಿ :
ಡಿಸೈನ್ ಅಸಿಸ್ಟೆಂಟ್ : 32 ವರ್ಷ
ಸೂಪರ್ವೈಸರ್ : 36 ವರ್ಷ
ಎಂಜಿನ್ ಟೆಕ್ನಿಷಿಯನ್ : 28 ವರ್ಷ
ಸೂಪರ್ವೈಸರ್ (S4 ಗ್ರೇಡ್) : 38 ವರ್ಷ
ವಯೋಮಿತಿಯಲ್ಲಿ ಸಡಿಲಿಕೆ ಸರಕಾರದ ನಿಯಮಗಳಂತೆ ಅನ್ವಯಿಸುತ್ತದೆ.
ಹುದ್ದೆಗಳ ವೇತನ ಶ್ರೇಣಿ :
Supervisor (S-4 Grade) : ₹29,300 – ₹1,02,600
Supervisor (S-3 Grade) :₹27,600 – ₹96,600
Supervisor/Design Assistant (S-2 Grade) : ₹25,700 – ₹90,000
Supervisor/Design Assistant/Technician (S-1 Grade) : ₹23,800 – ₹83,300
ಅರ್ಜಿ ಶುಲ್ಕ :
* ಸಾಮಾನ್ಯ ಅಭ್ಯರ್ಥಿಗಳು: ₹472/-
* SC/ST/PwBD/Internal ಅಭ್ಯರ್ಥಿಗಳು: ಶುಲ್ಕವಿಲ್ಲ
ಆಯ್ಕೆ ವಿಧಾನ :
* ಅರ್ಜಿ ತಪಾಸಣೆ
* ದಾಖಲೆ ಪರಿಶೀಲನೆ
* ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ :
1. ಅಧಿಕೃತ ವೆಬ್‌ಸೈಟ್ grse.in ಗೆ ಭೇಟಿ ನೀಡಿ.
2. ಅಧಿಸೂಚನೆಯನ್ನು ಓದಿ ಮತ್ತು ಅರ್ಹತೆ ಪರಿಶೀಲಿಸಿ.
3. ಆನ್‌ಲೈನ್ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
4. ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
5. ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದಲ್ಲಿ).
6. ಅರ್ಜಿ ಸಲ್ಲಿಸಿ ಮತ್ತು ಅರ್ಜಿ ಸಂಖ್ಯೆ ಸಂಗ್ರಹಿಸಿ.
ಸೂಚನೆ :
GRSE ನ್ನು ಭಾರತ ಸರ್ಕಾರದ "ಮಿನಿ ರತ್ನ" ಸಂಸ್ಥೆಯಾಗಿ ಮಾನ್ಯತೆ ದೊರೆತಿದೆ ಮತ್ತು ಇದು ದೇಶದ ರಕ್ಷಣಾ ಸನ್ನದ್ಧತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
- End Date
- 12 ಜೂನ್ 2025
- Employment Type
- FULL_TIME
- Organization
- KPSC Vaani (Website)
- Location
- KA,
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.