ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಜೆಸ್ಕಾಂನಲ್ಲಿ 200ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
ಕಲಬುರಗಿ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ / GESCOM) ನೇಮಕಾತಿ ಅಡಿಯಲ್ಲಿ ಪದವೀಧರ ಅಪ್ರೆಂಟಿಸ್ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುಡೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕಲಬುರಗಿ - ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 05-ಜೂನ್-2026 ರಂದು ಅಥವಾ ಮೊದಲು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಸಂಪೂರ್ಣ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ, ಸ್ಟೈಫಂಡ್ (ವೇತನ) ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಕುರಿತಾದ ಸಂಪೂರ್ಣ ಮಾಹಿತಿಯನ್ನು ಕೆಳಗೆ ವಿವರಿಸಲಾಗಿದೆ.
ಹುದ್ದೆಗಳ ವಿಂಗಡಣೆ (Vacancy Details)
- ಜೆಸ್ಕಾಂ ಒಟ್ಟು 275 ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಇದರ ವಿವರ ಈ ಕೆಳಗಿನಂತಿದೆ:
- ಪದವೀಧರ ಅಪ್ರೆಂಟಿಸ್ (ಬಿ.ಇ - ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್): 175 ಹುದ್ದೆಗಳು (ರೋಸ್ಟರ್ ಆಧಾರದ ಮೇಲೆ).
- ಡಿಪ್ಲೊಮಾ ಅಪ್ರೆಂಟಿಸ್ (ಎಲೆಕ್ಟ್ರಿಕಲ್): 100 ಹುದ್ದೆಗಳು (ರೋಸ್ಟರ್ ಆಧಾರದ ಮೇಲೆ).
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
- ಪದವೀಧರರಿಗೆ: ರಾಜ್ಯ ಅಥವಾ ಕೇಂದ್ರ ಸರ್ಕಾರ/ಎಐಸಿಟಿಯು (AICTE) ನಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.
- ಡಿಪ್ಲೊಮಾ ಅಭ್ಯರ್ಥಿಗಳಿಗೆ: ಕರ್ನಾಟಕದ ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಕಾಲೇಜಿನಿಂದ 3 ವರ್ಷಗಳ ಡಿಪ್ಲೊಮಾ ಕೋರ್ಸ್ ಪೂರ್ಣಗೊಳಿಸಿರಬೇಕು.
- ಪಾಸ್ ಆದ ವರ್ಷ: ಜನವರಿ-2022 ರ ನಂತರ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ಈ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ವಿಶೇಷ ಆದ್ಯತೆ: ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಪದವೀಧರರು ಹಾಗೂ ಡಿಪ್ಲೊಮಾದಾರರಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ.
- ಭಾಷಾ ಜ್ಞಾನ: ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.
ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ
ಶಿಶಿಕ್ಷು ವೇತನ (Stipend / Salary Details)
ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ಆಕರ್ಷಕ ಸ್ಟೈಫಂಡ್ ನೀಡಲಾಗುತ್ತದೆ:
ಇಂಜಿನಿಯರಿಂಗ್ ಪದವೀಧರರಿಗೆ: ಮಾಸಿಕ ರೂ. 9,000/-.
ಡಿಪ್ಲೊಮಾ ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ: ಮಾಸಿಕ ರೂ. 8,000/-.
ಪ್ರಮುಖ ಷರತ್ತುಗಳು (Important Conditions)
- ಅಪ್ರೆಂಟಿಸ್‌ಶಿಪ್ ನಿಯಮ 5ರ ಪ್ರಕಾರ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷಗಳಿಗಿಂತ ಕಡಿಮೆ ಇರಬಾರದು.
- ಆರೋಗ್ಯವಂತ ದೃಢಕಾಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಮತ್ತು ಅಂಗವಿಕಲರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
- ಈಗಾಗಲೇ ಬೇರೆ ಯಾವುದೇ ಸಂಸ್ಥೆಯಲ್ಲಿ ಅಪ್ರೆಂಟಿಸ್ ತರಬೇತಿ ಪಡೆದವರು ಅಥವಾ ಒಂದು ವರ್ಷದ ವೃತ್ತಿ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸುವಂತಿಲ್ಲ (ಅರ್ಜಿ ಸಲ್ಲಿಸಿದರೆ ತಿರಸ್ಕರಿಸಲಾಗುವುದು).
- ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಆದ್ಯತೆ ಇರಲಿದೆ.
- ಅಭ್ಯರ್ಥಿಗಳನ್ನು ಕೇವಲ ಅವರ ಶೈಕ್ಷಣಿಕ ಅರ್ಹತೆಯ (ಮೆರಿಟ್) ಆಧಾರದ ಮೇರೆಗೆ ಮಾತ್ರ ಆಯ್ಕೆ ಮಾಡಲಾಗುವುದು.
- ಇದು ಆಫ್‌ಲೈನ್ (Offline) ಅರ್ಜಿ ಪ್ರಕ್ರಿಯೆಯಾಗಿದ್ದು, ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:
- ಅಭ್ಯರ್ಥಿಗಳು ಸ್ವಯಂ ಲಿಖಿತ ಅಥವಾ ಬೆರಳಚ್ಚು (Typed) ಮಾಡಿದ ಅರ್ಜಿಯನ್ನು ಸಿದ್ಧಪಡಿಸಿಕೊಳ್ಳಬೇಕು.
- ಅರ್ಜಿಯೊಂದಿಗೆ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಎಸ್‌ಎಸ್‌ಎಲ್‌ಸಿ, ಪಿಯುಸಿ, ಹಾಗೂ ಎಲ್ಲಾ ಸೆಮಿಸ್ಟರ್‌ಗಳ ಪದವಿ/ಡಿಪ್ಲೊಮಾ ಅಂಕಪಟ್ಟಿಗಳ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಬೇಕು.
- ಜಾತಿ ಪ್ರಮಾಣ ಪತ್ರ, ಇತ್ತೀಚಿನ ಸರ್ಕಾರಿ ವೈದ್ಯಾಧಿಕಾರಿಯವರ ಯೋಗ್ಯತಾ ಪ್ರಮಾಣ ಪತ್ರ ಹಾಗೂ ಇಬ್ಬರು ಗೆಜೆಟೆಡ್ ಅಧಿಕಾರಿಗಳಿಂದ ಪಡೆದ ನಡತೆ ಪ್ರಮಾಣ ಪತ್ರಗಳನ್ನು ಸೇರಿಸಬೇಕು.
- ಪಾಸ್‌ಪೋರ್ಟ್ ಅಳತೆಯ 3 ಭಾವಚಿತ್ರಗಳು ಹಾಗೂ ಸ್ವ-ವಿಳಾಸವಿರುವ ರೂ. 25/- ಮೌಲ್ಯದ ಅಂಚೆ ಚೀಟಿ ಅಂಟಿಸಿದ 4X9 ಇಂಚು ಅಳತೆಯ ಒಂದು ಲಕೋಟೆಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.
- ಅರ್ಜಿ ಕಳುಹಿಸುವ ಮುಖ್ಯ ಲಕೋಟೆಯ ಮೇಲೆ "2026-27ನೇ ಸಾಲಿನ ಶಿಶಿಕ್ಷು ಆಯ್ಕೆಗೆ ಪದವೀಧರರು/ಡಿಪ್ಲೋಮಾ" ಎಂದು ಸ್ಪಷ್ಟವಾಗಿ ಬರೆಯಬೇಕು.
ಪ್ರಧಾನ ವ್ಯವಸ್ಥಾಪಕರು, (ಆ ಮತ್ತು ಮಾಸಂಅ), ನಿಗಮ ಕಛೇರಿ, ಗು.ವಿ.ಸ.ಕಂ.ನಿ. (ಜೆಸ್ಕಾಂ), ಸ್ಟೇಷನ್ ರಸ್ತೆ, ಕಲಬುರಗಿ - 585102.
ಪ್ರಮುಖ ದಿನಾಂಕಗಳು (Important Dates)
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18.05.2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05.06.2026 (ಸಾಯಂಕಾಲ 5.00 ಗಂಟೆಯೊಳಗೆ)
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ.
ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ಮುಗಿಸಿರುವ ನಿಮ್ಮ ಸ್ನೇಹಿತರಿಗೂ ಈ ಉಪಯುಕ್ತ ಮಾಹಿತಿಯನ್ನು ಶೇರ್ ಮಾಡಿ! ಕರುನಾಡಿನ ಪ್ರತಿಯೊಂದು ಸರ್ಕಾರಿ ಉದ್ಯೋಗದ ನಿಖರ ಮಾಹಿತಿಗಾಗಿ KPSCVaani ಯನ್ನು ಪ್ರತಿದಿನ ಭೇಟಿ ನೀಡಿ.
Job Overview
- End Date
- 5 ಜೂನ್ 2026
- Pay Scale
- 8000 - 9000 INR
- Employment Type
- FULL_TIME
- Organization
- GESCOM (Website)
- Location
- ಗುಲ್ಬರ್ಗ, KA, 585101
Related Tags:
Degree
Comments