ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by Bhagya R K
12 ಆಗಸ್ಟ್ 2024 Others
Tags: Degree PG

ಮಹಾರತ್ನ ಕಂಪನಿಗಳಲ್ಲಿ ಒಂದಾಗಿರುವ ಭಾರತ ಸರ್ಕಾರದ ಅಧೀನದಲ್ಲಿರುವ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL) ನಲ್ಲಿ ಖಾಲಿ ಇರುವ 391 ಜೂನಿಯರ್ ಇಂಜಿನಿಯರ್ (ರಾಸಾಯನಿಕ), ಫೋರ್‌ಮ್ಯಾನ್ (ಎಲೆಕ್ನಿಕಲ್), ಫೋರ್‌ಮ್ಯಾನ್ (ಸಿವಿಲ್‌), ಜೂನಿಯರ್ ಕೆಮಿಸ್ಟ್, ತಂತ್ರಜ್ಞ (ವಾದ್ಯ), ಆಪರೇಟರ್ (ಫೈರ್), ಮತ್ತು ಖಾತೆ ಸಹಾಯಕ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. 

ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಈ ಕೆಳೆಗೆ ನೀಡಲಾಗಿದೆ.

Job Overview
No. of posts
391
Start Date
12 ಆಗಸ್ಟ್ 2024
End Date
7 ಸೆಪ್ಟೆಂಬರ್ 2024
Employment Type
FULL_TIME
Organization
KPSC Vaani (Website)
Location
ಭಾರತದಾದ್ಯಂತ, KA,
Selection Procedure:

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಟ್ರೇಡ್ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಾರಂಭ ದಿನಾಂಕ 08 ಆಗಸ್ಟ್ 2024 ಹಾಗೂ ಕೊನೆಯ ದಿನಾಂಕ 07 ಸೆಪ್ಟೆಂಬರ್ 2024 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ : 391
* ಜೂನಿಯರ್ ಇಂಜಿನಿಯರ್ (ರಾಸಾಯನಿಕ)-2
* ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್)-1
* ಫೋರ್‌ಮ್ಯಾನ್ (ಎಲೆಕ್ನಿಕಲ್)-1
* ಫೋರ್‌ಮನ್ (ವಾದ್ಯ)-14
* ಫೋರ್‌ಮ್ಯಾನ್ (ಸಿವಿಲ್‌)-6
* ಜೂನಿಯರ್ ಸೂಪರಿಂಟೆಂಡೆಂಟ್-5
* ಜೂನಿಯರ್ ಕೆಮಿಸ್ಟ್-8
* ಜೂನಿಯರ್ ಅಕೌಂಟಿಂಟೊ-14
* ತಾಂತ್ರಿಕ ಸಹಾಯಕ (ಪ್ರಯೋಗಾಲಯ)-3
* ಆಪರೇಟರ್ (ರಾಸಾಯನಿಕ)-73
* ತಂತ್ರಜ್ಞ (ಎಲೆಕ್ನಿಕಲ್)-44
* ತಂತ್ರಜ್ಞ (ವಾದ್ಯ)-45
* ತಂತ್ರಜ್ಞ (ಮೆಕ್ಯಾನಿಕಲ್) -39
* ತಂತ್ರಜ್ಞ (ಟೆಲಿಕಾಂ ಮತ್ತು ಟೆಲಿಮೆಟ್ರಿ)-11
* ಆಪರೇಟರ್ (ಫೈರ್)-39
* ಆಪರೇಟರ್ (ಬಾಯ್ದರ್)-8
* ಖಾತೆ ಸಹಾಯಕ-13
* ವ್ಯಾಪಾರ ಸಹಾಯಕ- 65

Qualification:

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು SSLC/ M.com/ Diploma/ B.E./ ITI/ M.sc./ B.sc ಪದವಿ, ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಅಂಗೀಕೃತ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು.
- ವೃತ್ತಿಯಲ್ಲಿ ಅನುಭವ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.

Fee:

* ಸಾಮಾನ್ಯ/ EWS/ OBC (NCL) ಅಭ್ಯರ್ಥಿಗಳು: ರೂ.50/- ಅರ್ಜಿ ಶುಲ್ಕವನ್ನು ಪಾವತಿಸಬೇಕು.  
* SC/ST/ PwBD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. 

Age Limit:

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸ ಬಯಸುವ ಅಭ್ಯರ್ಥಿಗಳು ಕನಿಷ್ಠ 26 ವರ್ಷಗಳು ಮತ್ತು ಗರಿಷ್ಠ 45 ವರ್ಷಗಳ ವಯೋಮಿತಿಯನ್ನು ಒಳಗೊಂಡಿರಬೇಕು.
* ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

To Download Official Notification
Related Tags: Degree PG
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.