ಭಾರತ ಸರ್ಕಾರದ ಅಧೀನದಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ದಲ್ಲಿ ಸುಮಾರು 1817 ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಭಾರತ ಸರ್ಕಾರದ ಅಧೀನದಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ದಲ್ಲಿ ಸುಮಾರು 1817 ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by Basavaraj Halli
23 ಡಿಸೆಂಬರ್ 2019 Indian Army
DRDO CEPTAM Recruitment 2019 : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (DRDO) ಇಲ್ಲಿ ಖಾಲಿ ಇರುವ ಅಗತ್ಯ ಗ್ರೂಪ್ ಸಿ, ನಾನ್‌ ಗೆಜೆಟೆಡ್, ಮಲ್ಟಿ ಟಾಸ್ಕಿಂಗ್ ಸ್ಟಾಪ್‌ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಬೇಕಾದ ಅಗತ್ಯ ವಿದ್ಯಾರ್ಹತೆ, ಅರ್ಜಿ ಸಲ್ಲಿಕೆ ಹೇಗೆ, ವಯೋಮಿತಿ ಮತ್ತು ಇತರೆ ಹಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ✍ ಹುದ್ದೆಗಳ ವಿವರ : ಮಲ್ಟಿ ಟಾಸ್ಕಿಂಗ್ ಸ್ಟಾಫ್‌ (MTS) ಒಟ್ಟು ಹುದ್ದೆಗಳ ಸಂಖ್ಯೆ : 1817 ✍ ವರ್ಗವಾರು ಹುದ್ದೆಗಳ ವಿಂಗಡಣೆ - SC-163 - ST-114 - OBC-503 - EWS-188 - UR-849 - ESM-135 - MSP-50 - PWD Cat A - 18 - PWD Cat B - 18 - PWD Cat C - 18 - PWD Cat D - 19 ಹುದ್ದೆಗಳು. ✍ ಪ್ರಮುಖ ದಿನಾಂಕಗಳು - ನಿಗದಿತ ವಯೋಮಿತಿಗೆ ಪರಿಗಣಿಸುವ ಪ್ರಮುಖ ದಿನಾಂಕ : ಜನವರಿ 23, 2020 - ಆನ್‌ಲೈನ್‌ ಅರ್ಜಿಗೆ ಆರಂಭಿಕ ದಿನಾಂಕ : ಡಿಸೆಂಬರ್ 23, 2020 - ಆನ್‌ಲೈನ್‌ ಅರ್ಜಿಗೆ ಕೊನೆ ದಿನಾಂಕ : ಜನವರಿ 23, 2020 - ಟೈಯರ್-1 ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ : ಶೀಘ್ರದಲ್ಲಿ ನಮ್ಮ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ. ✍ ಪರೀಕ್ಷಾ ಕೇಂದ್ರಗಳು ದೇಶದಾದ್ಯಂತದ ಒಟ್ಟು 42 ಕೇಂದ್ರಗಳಲ್ಲಿ ಟೈಯರ್-1 ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗೆ ಅಭ್ಯರ್ಥಿಗಳು ಕೇಂದ್ರವನ್ನು ಆಯ್ಕೆ ಮಾಡಬಹುದು. ಆದರೆ ಟೈಯರ್-2 ಪರೀಕ್ಷೆಗೆ ಡಿಆರ್‌ಡಿಒ ನಿಗದಿಪಡಿಸಿದ ಕೇಂದ್ರದಲ್ಲೇ ಪರೀಕ್ಷೆಗೆ ಹಾಜರಾಗಬೇಕಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಮೈಸೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬಹುದು. ಅರ್ಜಿ ಸಲ್ಲಿಕೆ ಹೇಗೆ? ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ DRDO ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ವೇಳೆ ಅಭ್ಯರ್ಥಿಗಳು ಟೈಯರ್-1 ಪರೀಕ್ಷೆ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಆರ್ಜಿ ಸಲ್ಲಿಸುವ ಮುನ್ನ ಅಗತ್ಯ ಸ್ಕ್ಯಾನ್‌ ಕಾಪಿಗಳನ್ನು ರೆಡಿ ಮಾಡಿಕೊಂಡಿರಬೇಕು. ಆನ್‌ಲೈನ್‌ ಅರ್ಜಿಗೆ ಡಿಸೆಂಬರ್ 23 ರಂದು ವೆಬ್‌ಸೈಟ್‌ನಲ್ಲಿ ಲಿಂಕ್‌ ನೀಡಲಾಗುತ್ತದೆ.
Job Overview
No. of posts
1817
Start Date
23 ಡಿಸೆಂಬರ್ 2019
End Date
23 ಜನವರಿ 2020
Employment Type
FULL_TIME
Organization
KPSC Vaani (Website)
Location
KA,
Selection Procedure:
✍ ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಟೈಯರ್-1, ಟೈಯರ್-2 ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಿ, ಟೈಯರ್-2 ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ಮುಂದುವರೆಸಲಾಗುತ್ತದೆ.

ಎರಡು ಹಂತದ ಪರೀಕ್ಷೆಗಳ ಅವಧಿ 90 ನಿಮಿಷಗಳು.
ಟೈಯರ್-1 ಪರೀಕ್ಷೆ : 100 ಅಂಕಗಳಿಗೆ ನಡೆಸಲಾಗುತ್ತದೆ. ಜೆನೆರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್ - 35, ಪ್ರಚಲಿತ ವಿದ್ಯಮಾನಗಳು - 30, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಅಂಡ್ ನ್ಯುಮರಿಕಲ್ ಎಬಿಲಿಟಿ -35 ಅಂಕಗಳಿಗೆ ಪ್ರಶ್ನೆಗಳು ಇರುತ್ತವೆ.
ಟೈಯರ್-2 ಪರೀಕ್ಷೆ : 100 ಅಂಕಗಳಿಗೆ ನಡೆಸಲಾಗುತ್ತದೆ. ಜೆನೆರಲ್ ಸೈನ್ಸ್‌ -40, ಜೆನೆರಲ್ ಮ್ಯಾಥ್ಸ್‌ - 40, ಜೆನೆರಲ್ ಇಂಗ್ಲೀಷ್ - 20 ಅಂಕಗಳಿಗೆ ಪ್ರಶ್ನೆಗಳು ಇರುತ್ತವೆ.
Qualification:
ಆಸಕ್ತ ಅಭ್ಯರ್ಥಿಗಳು 10ನೇ ತರಗತಿ ಪಾಸ್ ಆಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಇಲ್ಲವೇ ITI ಶಿಕ್ಷಣ ಪಡೆದಿರಬೇಕು.
Fee:
ಎಲ್ಲ ಅಭ್ಯರ್ಥಿಗಳಿಗೆ 100/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
- SC/ST /ಮಹಿಳಾ/PWD/ESM ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ
Age Limit:
ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
to Download Official Notification DRDO CEPTAM Recruitment 2019
ನೀವು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.