ವಿಜಯಪುರ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಾವಕಾಶ! Staff Nurse, Lab Technician & Pharmacist ಹುದ್ದೆಗಳಿಗೆ ಅರ್ಜಿ ಆಹ್ವಾನ! ನೇರ ಸಂದರ್ಶನ ಆಧಾರಿತ ಆಯ್ಕೆ
ವಿಜಯಪುರ ಜಿಲ್ಲೆಯ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ಶುಶ್ರೂಷಾಧಿಕಾರಿ (Nursing Officer), ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ (Lab Technician) ಮತ್ತು ಫಾರ್ಮಸಿ ಅಧಿಕಾರಿ (Pharmacist) ಹುದ್ದೆಗಳನ್ನು 1 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 07 ಆಗಸ್ಟ್ 2026 ರಂದು ನಡೆಯುವ ನೇರ ಸಂದರ್ಶನದಲ್ಲಿ (Walk-in Interview) ಭಾಗವಹಿಸಿ ಈ ಅವಕಾಶವನ್ನು ಪಡೆದುಕೊಳ್ಳಬಹುದು.
ನೇಮಕಾತಿಯ ಸಂಕ್ಷಿಪ್ತ ವಿವರಗಳು:
- ಸಂಸ್ಥೆಯ ಹೆಸರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ವಿಜಯಪುರ (DHFWS Vijayapura)
- ಹುದ್ದೆಯ ಹೆಸರು: ಶುಶ್ರೂಷಾಧಿಕಾರಿ (Nursing Officer), ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ (Lab Technician) ಮತ್ತು ಫಾರ್ಮಸಿ ಅಧಿಕಾರಿ (Pharmacist)
- ಒಟ್ಟು ಹುದ್ದೆಗಳು: 26
- ವೇತನ ಶ್ರೇಣಿ: ಎನ್.ಎಚ್.ಎಂ / ಸರ್ಕಾರಿ ನಿಯಮಗಳ ಪ್ರಕಾರ ಗುತ್ತಿಗೆ ಆಧಾರಿತ ವೇತನ
- ಉದ್ಯೋಗ ಸ್ಥಳ: ವಿಜಯಪುರ, ಕರ್ನಾಟಕ
- ಅರ್ಜಿ ಸಲ್ಲಿಕೆ ವಿಧಾನ: ನೇರ ಸಂದರ್ಶನ (Walk-in Interview)
- ಅಧಿಕೃತ ವೆಬ್‌ಸೈಟ್: vijayapura.nic.in
- ಶುಶ್ರೂಷಾಧಿಕಾರಿ (B.Sc Nursing): 04
- ಶುಶ್ರೂಷಾಧಿಕಾರಿ (Diploma Nursing): 12
- ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ (Lab Technician): 07
- ಫಾರ್ಮಸಿ ಅಧಿಕಾರಿ (Pharmacist): 03
- ಒಟ್ಟು ಹುದ್ದೆಗಳು : 26
- ಶುಶ್ರೂಷಾಧಿಕಾರಿ (Nursing Officer): B.Sc Nursing ಅಥವಾ Diploma Nursing ಮುಗಿಸಿರಬೇಕು ಹಾಗೂ ಕರ್ನಾಟಕ ನರ್ಸಿಂಗ್ ಕೌನ್ಸಿಲ್ (KNC) ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು.
- ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ (Lab Technician): DMLT (Diploma in Medical Laboratory Technology) ಕೋರ್ಸ್ ಪೂರ್ಣಗೊಳಿಸಿರಬೇಕು.
- ಫಾರ್ಮಸಿ ಅಧಿಕಾರಿ (Pharmacist): D.Pharma ಮುಗಿಸಿರಬೇಕು ಮತ್ತು ಕರ್ನಾಟಕ ಫಾರ್ಮಸಿ ಕೌನ್ಸಿಲ್ (KPC) ನಲ್ಲಿ ನೊಂದಣಿಯಾಗಿರಬೇಕು.

ವಯೋಮಿತಿ (Age Limit): ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷಗಳ ಒಳಗಿರಬೇಕು.
ಪ್ರಮುಖ ದಿನಾಂಕಗಳು ಮತ್ತು ಸಮಯ:
- ಉಚಿತ ಅರ್ಜಿ ನಮೂನೆ ವಿತರಣೆ ಪ್ರಾರಂಭ: 28 ಜುಲೈ 2026 ರಿಂದ (ವಿಜಯಪುರ DHFWS ಕಚೇರಿಯಲ್ಲಿ ಉಚಿತವಾಗಿ ಲಭ್ಯ).
- ನೇರ ಸಂದರ್ಶನ ಮತ್ತು ಅರ್ಜಿ ಸಲ್ಲಿಕೆ ದಿನಾಂಕ: 07 ಆಗಸ್ಟ್ 2026
- ಸಂದರ್ಶನದ ಸಮಯ: ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:30 ರವರೆಗೆ.
- ಆಸಕ್ತ ಅಭ್ಯರ್ಥಿಗಳು ದಿನಾಂಕ 28-07-2026 ರಿಂದ DHFWS ವಿಜಯಪುರ ಕಚೇರಿಯಿಂದ ಉಚಿತ ಅರ್ಜಿ ನಮೂನೆ ಪಡೆದುಕೊಳ್ಳಬಹುದು.
- ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಅಗತ್ಯ ಮೂಲ ದಾಖಲೆಗಳು ಮತ್ತು ನಕಲು ಪ್ರತಿಗಳನ್ನು (Attested Copies) ಜೊತೆಗಿರಿಸಿಕೊಳ್ಳಿ.
- 07-08-2026 ರಂದು ಬೆಳಿಗ್ಗೆ 10:00 ರಿಂದ ಸಂಜೆ 5:30 ರೊಳಗೆ ನೇರವಾಗಿ ಕಚೇರಿಗೆ ಹಾಜರಾಗಿ ಸಂದರ್ಶನದಲ್ಲಿ ಭಾಗವಹಿಸಬೇಕು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ,
ವಿಜಯಪುರ – 586101
ಅಗತ್ಯ ದಾಖಲೆಗಳು (Required Documents for Interview):
- ಭರ್ತಿ ಮಾಡಿದ ಅರ್ಜಿ ನಮೂನೆ
- ಎಸ್.ಎಸ್.ಎಲ್.ಸಿ (SSLC) ಅಂಕಪಟ್ಟಿ (ವಯಸ್ಸಿನ ದೃಢೀಕರಣಕ್ಕಾಗಿ)
- ಸಂಬಂಧಪಟ್ಟ ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳು (B.Sc / GNM / DMLT / D.Pharma)
- ಕರ್ನಾಟಕ ನರ್ಸಿಂಗ್ / ಫಾರ್ಮಸಿ ಕೌನ್ಸಿಲ್ ನೋಂದಣಿ ಪ್ರಮಾಣಪತ್ರ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಗ್ರಾಮೀಣ ಅಭ್ಯರ್ಥಿ / ಇತರೆ ಮೀಸಲಾತಿ ಪ್ರಮಾಣಪತ್ರಗಳು (ಅನ್ವಯಿಸಿದಲ್ಲಿ)
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು
Job Overview
- No. of posts
- 26
- End Date
- 7 ಆಗಸ್ಟ್ 2026
- Employment Type
- FULL_TIME
- Organization
- DHFWS Vijayapura (Website)
- Location
- vijayapur, vijayapur, KA, 586101

Comments