ಕೇಂದ್ರ ಸರ್ಕಾರದ 'ನವರತ್ನ' ಸಂಸ್ಥೆಯಾದ ಕೇಂದ್ರ ಭಂಡಾರ ಕಾರ್ಪೊರೇಷನ್‌ನಲ್ಲಿ 327 ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಆಡಳಿತಕ್ಕೆ ಒಳಪಟ್ಟಿರುವ 'ನವರತ್ನ' ಸಂಸ್ಥೆಯಾದ ಕೇಂದ್ರ ಭಂಡಾರ ಕಾರ್ಪೊರೇಷನ್ (CWC) 2026ನೇ ಸಾಲಿನ ಬೃಹತ್ ನೇಮಕಾತಿಯನ್ನು ಪ್ರಕಟಿಸಿದೆ. ಒಟ್ಟು 327 ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರಿ ಹುದ್ದೆಯನ್ನು ಬಯಸುವ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರಿಗೆ ಇದೊಂದು ಅದ್ಭುತ ಅವಕಾಶವಾಗಿದೆ!
ಈ ನೇಮಕಾತಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ (171) ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ (156) ಹುದ್ದೆಗಳಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಹುದ್ದೆಗೆ ಅನುಗುಣವಾಗಿ ₹29,000 ದಿಂದ ₹1,40,000 ವರೆಗೆ ಆಕರ್ಷಕ ವೇತನ ಶ್ರೇಣಿ ಸಿಗಲಿದೆ. 18 ರಿಂದ 28 ವರ್ಷ ವಯೋಮಿತಿಯ ಒಳಗಿರುವ ಅರ್ಹ ಭಾರತೀಯ ಪ್ರಜೆಗಳು ಆನ್‌ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ಶೈಕ್ಷಣಿಕ ಅರ್ಹತೆ ಮತ್ತು ಅರ್ಜಿಯ ಇತರ ನಿಯಮಗಳನ್ನು ಪರಿಶೀಲಿಸಿ ಶೀಘ್ರವೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ನೇಮಕಾತಿಗೆ ಸಂಬಂಧಿಸಿದ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಅಕ್ಟೋಬರ್ 17, 2026 ರಿಂದ ಆರಂಭಗೊಂಡಿದ್ದು, ಅರ್ಜಿ ಸಲ್ಲಿಸಲು ನವೆಂಬರ್ 15, 2026 ಕೊನೆಯ ದಿನಾಂಕವಾಗಿದೆ. ಉದ್ಯೋಗಾವಕಾಶದ ಪೂರ್ಣ ವಿವರಗಳು, ಅಧಿಸೂಚನೆ (Notification PDF) ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಸುವ ಲಿಂಕ್ ಎಲ್ಲಾ ಮಾಹಿತಿಯು ನಿಮ್ಮ ಮೆಚ್ಚಿನ KPSCVAANI.COM ವೆಬ್‌ಸೈಟ್‌ಗೆ ನಲ್ಲಿ ಲಭ್ಯವಿದೆ.
ನೇಮಕಾತಿಯ ಸಂಕ್ಷಿಪ್ತ ವಿವರಗಳು:
- ಸಂಸ್ಥೆಯ ಹೆಸರು : ಕೇಂದ್ರ ಭಂಡಾರ ಕಾರ್ಪೊರೇಷನ್ (Central Warehousing Corporation - CWC)
- ಹುದ್ದೆಯ ಹೆಸರು : ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್
- ಒಟ್ಟು ಹುದ್ದೆಗಳು : 327 ಹುದ್ದೆಗಳು
- ಉದ್ಯೋಗ ಸ್ಥಳ : ಭಾರತದಾದ್ಯಂತ (All India Cadre)
- ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್ (Online)
- ಅಧಿಕೃತ ವೆಬ್‌ಸೈಟ್ : www.cewacor.nic.in
ಪ್ರಮುಖ ದಿನಾಂಕಗಳು (Important Dates)
- ಆನ್‌ಲೈನ್ ನೋಂದಣಿ ಆರಂಭ: 17.10.2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.11.2026
ಹುದ್ದೆಗಳ ವಿವರ:
- ಅಸಿಸ್ಟೆಂಟ್ ಮ್ಯಾನೇಜರ್ (General): 70 ಹುದ್ದೆಗಳು
- ಅಸಿಸ್ಟೆಂಟ್ ಮ್ಯಾನೇಜರ್ (Technical): 60 ಹುದ್ದೆಗಳು
- ಅಸಿಸ್ಟೆಂಟ್ ಮ್ಯಾನೇಜರ್ (Finance): 10 ಹುದ್ದೆಗಳು
- ಅಸಿಸ್ಟೆಂಟ್ ಮ್ಯಾನೇಜರ್ (Engineering - Civil): 22 ಹುದ್ದೆಗಳು
- ಅಸಿಸ್ಟೆಂಟ್ ಮ್ಯಾನೇಜರ್ (Engineering - Electrical): 05 ಹುದ್ದೆಗಳು
- ಅಸಿಸ್ಟೆಂಟ್ ಮ್ಯಾನೇಜರ್ (Engineering - Mechanical): 04 ಹುದ್ದೆಗಳು
- ಜೂನಿಯರ್ ಎಕ್ಸಿಕ್ಯೂಟಿವ್ (General): 78 ಹುದ್ದೆಗಳು
- ಜೂನಿಯರ್ ಎಕ್ಸಿಕ್ಯೂಟಿವ್ (Technical): 78 ಹುದ್ದೆಗಳು
- ಒಟ್ಟು ಹುದ್ದೆಗಳು : 327 ಹುದ್ದೆಗಳು
ವೇತನ ಶ್ರೇಣಿ (Pay Scale):
- ಅಸಿಸ್ಟೆಂಟ್ ಮ್ಯಾನೇಜರ್: ರೂ. 40,000 - 1,40,000/- (E-1 ಶ್ರೇಣಿ)
(General, Technical, Finance, Engineering - Civil, Electrical, Mechanical) - ಜೂನಿಯರ್ ಎಕ್ಸಿಕ್ಯೂಟಿವ್ (General, Technical): ರೂ. 29,000 - 93,000/- (S-V ಶ್ರೇಣಿ)
ಶೈಕ್ಷಣಿಕ ಅರ್ಹತೆ (Educational Qualifications): ಅಭ್ಯರ್ಥಿಗಳು ನವೆಂಬರ್ 15, 2026 ರೊಳಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
- ಅಸಿಸ್ಟೆಂಟ್ ಮ್ಯಾನೇಜರ್ (General): ಯಾವುದೇ ವಿಷಯದಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಪದವಿ (Post Graduation Degree) ಅಥವಾ ಸ್ನಾತಕೋತ್ತರ ಡಿಪ್ಲೋಮಾ.
- ಅಸಿಸ್ಟೆಂಟ್ ಮ್ಯಾನೇಜರ್ (Technical): ಕೃಷಿ/ಫುಡ್ ಟೆಕ್ನಾಲಜಿ/ಫುಡ್ ಸೈನ್ಸ್/ಬಯೋಟೆಕ್ನಾಲಜಿಯಲ್ಲಿ ಬಿ.ಇ/ಬಿ.ಟೆಕ್ (B.E/B.Tech) ಅಥವಾ ಸಂಬಂಧಿತ ಪದವಿ.
- ಅಸಿಸ್ಟೆಂಟ್ ಮ್ಯಾನೇಜರ್ (Finance): ಕಾಮರ್ಸ್‌ನಲ್ಲಿ ಪದವಿ (Graduate in Commerce) ಹಾಗೂ ಹಣಕಾಸು ಮತ್ತು ಲೆಕ್ಕಪತ್ರ ವಿಭಾಗದಲ್ಲಿ 3 ವರ್ಷಗಳ ಅನುಭವ ಅಥವಾ CA ಇಂಟರ್ / CMA ಇಂಟರ್‌ನೊಂದಿಗೆ ಯಾವುದೇ ಪದವಿ.
- ಅಸಿಸ್ಟೆಂಟ್ ಮ್ಯಾನೇಜರ್ (Engineering - Civil/Electrical/Mechanical): ಸಂಬಂಧಿತ ಇಂಜಿನಿಯರಿಂಗ್ ಶಾಖೆಯಲ್ಲಿ ಬಿ.ಇ ಅಥವಾ ಬಿ.ಟೆಕ್ (B.E/B.Tech) ಪದವಿ.
- ಜೂನಿಯರ್ ಎಕ್ಸಿಕ್ಯೂಟಿವ್ (General): ಕಂಪ್ಯೂಟರ್ ಅಪ್ಲಿಕೇಷನ್‌ಗಳು, ಎಂಎಸ್ ಆಫೀಸ್ ಜ್ಞಾನದೊಂದಿಗೆ ಯಾವುದೇ ಪದವಿ.
- ಜೂನಿಯರ್ ಎಕ್ಸಿಕ್ಯೂಟಿವ್ (Technical): ಬಿ.ಎಸ್ಸಿ (ಕೃಷಿ / ಬೋಟನಿ / ಸುವಾಲಜಿ / ಬಯೋಟೆಕ್ನಾಲಜಿ / ಮೈಕ್ರೋಬಯಾಲಜಿ / ಬಯೋಕೆಮಿಸ್ಟ್ರಿ / ಫುಡ್ ಸೈನ್ಸ್ / ಕೆಮಿಸ್ಟ್ರಿ) ಜೊತೆಗೆ ಕಂಪ್ಯೂಟರ್ ಜ್ಞಾನ.
ವಯೋಮಿತಿ (Age Limit - As on 15.11.2026):
- ಗರಿಷ್ಠ ವಯೋಮಿತಿ: ಎಲ್ಲಾ ಹುದ್ದೆಗಳಿಗೆ ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷಗಳು.
- ಸರ್ಕಾರದ ನಿಯಮಾನುಸಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು ಮತ್ತು ಪಿಡಬ್ಲ್ಯೂಬಿಡಿ (PwBD) ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ (Application Fee):
- ಸಾಮಾನ್ಯ (UR) / EWS / OBC ಅಭ್ಯರ್ಥಿಗಳಿಗೆ: ರೂ. 1,350/- (ಅರ್ಜಿ ಶುಲ್ಕ ರೂ. 850 + ಇಂಟಿಮೇಷನ್ ಚಾರ್ಜ್ ರೂ. 500)
ಎಸ್‌ಸಿ / ಎಸ್‌ಟಿ / ಮಹಿಳೆಯರು / ದಿವ್ಯಾಂಗರು (PwBD) / ಮಾಜಿ ಸೈನಿಕರಿಗೆ: ರೂ. 500/- (ಕೇವಲ ಇಂಟಿಮೇಷನ್ ಚಾರ್ಜ್ ಮಾತ್ರ, ಅರ್ಜಿ ಶುಲ್ಕ ವಿನಾಯಿತಿ ಇದೆ) - ಶುಲ್ಕವನ್ನು ಆನ್‌ಲೈನ್ ಗೇಟ್‌ವೇ ಮೂಲಕ ಮಾತ್ರ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ (Selection Process): ಅಭ್ಯರ್ಥಿಗಳ ಆಯ್ಕೆಯನ್ನು ಈ ಕೆಳಗಿನ ಹಂತಗಳ ಮೂಲಕ ನಡೆಸಲಾಗುತ್ತದೆ:
- ಆನ್‌ಲೈನ್ ಪರೀಕ್ಷೆ (Online Examination): ವಸ್ತುನಿಷ್ಠ ಮಾದರಿ ಪರೀಕ್ಷೆ ಮತ್ತು ವಿವರಣಾತ್ಮಕ ಪರೀಕ್ಷೆ (Descriptive Test) ಇರುತ್ತದೆ.
- ದಾಖಲಾತಿ ಪರಿಶೀಲನೆ (Document Verification): ಆನ್‌ಲೈನ್ ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ.
- ಸಂದರ್ಶನ (Interview): ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ (Post Code 01 ರಿಂದ 06) ಆನ್‌ಲೈನ್ ಪರೀಕ್ಷೆಯ ನಂತರ ಸಂದರ್ಶನ ನಡೆಸಲಾಗುತ್ತದೆ (1:5 ರ ಅನುಪಾತದಲ್ಲಿ). ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಸಂದರ್ಶನ ಇರುವುದಿಲ್ಲ.
ಕರ್ನಾಟಕದಲ್ಲಿ ಪ್ರಮುಖ ಪರೀಕ್ಷಾ ಕೇಂದ್ರಗಳು (Examination Centres in Karnataka): ಕರ್ನಾಟಕದ ಅಭ್ಯರ್ಥಿಗಳ ಅನುಕೂಲಕ್ಕಾಗಿ ಈ ಕೆಳಗಿನ ನಗರಗಳಲ್ಲಿ ಆನ್‌ಲೈನ್ ಪರೀಕ್ಷೆ ಕೇಂದ್ರಗಳನ್ನು ವ್ಯವಸ್ಥೆಗೊಳಿಸಲಾಗಿದೆ: { ಬೆಂಗಳೂರು (Bengaluru) ಬೆಳಗಾವಿ (Belagavi / Belgaum) ಹುಬ್ಬಳ್ಳಿ - ಧಾರವಾಡ (Hubballi / Dharwad) ಮಂಗಳೂರು (Mangaluru / Mangalore) ಕಲಬುರಗಿ (Kalaburagi / Gulbarga) ಉಡುಪಿ (Udupi) ಶಿವಮೊಗ್ಗ (Shivamogga / Shimoga) }
ಇದನ್ನು ಓದಿ: ಬೆಂಗಳೂರು ಮೆಟ್ರೋದಲ್ಲಿ 50ಹುದ್ದೆಗಳ ನೇಮಕಾತಿ 2026: ಅರ್ಜಿ ಆಹ್ವಾನ, ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ
ಆನ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ (How to Apply):
- CWC ಯ ಅಧಿಕೃತ ವೆಬ್‌ಸೈಟ್ www.cewacor.nic.in ಗೆ ಭೇಟಿ ನೀಡಿ.
- 'Career @CWC (Direct Recruitment)-2026' ಲಿಂಕ್ ಮೇಲೆ ಕ್ಲಿಕ್ ಮಾಡಿ.
- 'Click here for New Registration' ಬಳಸಿ ಮೂಲ ವಿವರಗಳನ್ನು ನೊಂದಾಯಿಸಿ.
- ಫೋಟೋ, ಸಹಿ, ಎಡಗೈ ಹೆರಳಿನ ಗುರುತು (Left Thumb Impression) ಮತ್ತು ಕೈಬರಹದ ಘೋಷಣೆಯನ್ನು (Hand-written Declaration) ನಿಗದಿತ ಅಳತೆಯಲ್ಲಿ ಅಪ್‌ಲೋಡ್ ಮಾಡಿ.
- ಆನ್‌ಲೈನ್ ಗೇಟ್‌ವೇ ಮೂಲಕ ಅರ್ಜಿ ಶುಲ್ಕ ಪಾವತಿಸಿ ಅಂತಿಮ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
- No. of posts
- 327
- End Date
- 15 ನವೆಂಬರ್ 2026
- Pay Scale
- 29000 - 140000 INR
- Employment Type
- FULL_TIME
- Organization
- Central Warehousing Corporation (CWC) (Website)
- Location
- Hauz Khas, New Delhi, DL, 110016
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.

