ಬೆಂಗಳೂರು ಮೆಟ್ರೋದಲ್ಲಿ 50ಹುದ್ದೆಗಳ ನೇಮಕಾತಿ 2026: ಅರ್ಜಿ ಆಹ್ವಾನ, ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ

ಬೆಂಗಳೂರು ಮೆಟ್ರೋದಲ್ಲಿ 50ಹುದ್ದೆಗಳ ನೇಮಕಾತಿ 2026: ಅರ್ಜಿ ಆಹ್ವಾನ, ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ
Published by Heena Sheregar
39 minutes ago Others Featured
Tags: Degree

ನಮ್ಮ ಬೆಂಗಳೂರಿನ ಮೆಟ್ರೋ ಜಾಲ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ ಸೇವೆಯನ್ನು ನೀಡುತ್ತಿರುವ ನಮ್ಮ ಮೆಟ್ರೋದಲ್ಲಿ ಇದೀಗ ರಕ್ಷಣೆ ಮತ್ತು ನಿರ್ವಹಣಾ ವಿಭಾಗವನ್ನು ಮತ್ತಷ್ಟು ಬಲಪಡಿಸಲು ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

 

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಒಟ್ಟು 50 ಅಸಿಸ್ಟೆಂಟ್ ಸೆಕ್ಯುರಿಟಿ ಆಫೀಸರ್ (ASO) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ರಕ್ಷಣಾ ಪಡೆ ಅಥವಾ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಅಥವಾ ಸೇವೆಯಲ್ಲಿರುವ ಅನುಭವಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ.

 

ಈ ನೇಮಕಾತಿಯು ಒಪ್ಪಂದದ ಆಧಾರದ ಮೇಲೆ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಗೌರವಧನ ಹಾಗೂ ಕಂಪನಿಯ ನಿಯಮಾನುಸಾರ ಭತ್ಯೆಗಳು ಲಭ್ಯವಿರಲಿವೆ. ಅರ್ಹತೆ ಹೊಂದಿರುವ ಆಸಕ್ತರು ಅಕ್ಟೋಬರ್ 31, 2026ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

 

ಹುದ್ದೆಗಳ ವಿವರ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ಹಂತ-ಹಂತದ ವಿಧಾನವನ್ನು ಕೆಳಗೆ ವಿವರವಾಗಿ ನೀಡಲಾಗಿದೆ.

 

 

ನೇಮಕಾತಿಯ ಮುಖ್ಯ ವಿವರಗಳು:

  • ಹುದ್ದೆಯ ಹೆಸರು: ಅಸಿಸ್ಟೆಂಟ್ ಸೆಕ್ಯುರಿಟಿ ಆಫೀಸರ್ (Assistant Security Officer - Grade NE-3)
  • ಒಟ್ಟು ಖಾಲಿ ಹುದ್ದೆಗಳು: 50 ಹುದ್ದೆಗಳು 
  • ಸಂಸ್ಥೆಯ ಹೆಸರು: ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL)
  • ಉದ್ಯೋಗದ ಸ್ವರೂಪ: ಒಪ್ಪಂದ ಆಧಾರಿತ (Contract Basis)
  • ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ

 

ಪ್ರಮುಖ ದಿನಾಂಕಗಳು (Important Dates):

  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/10/2026   
  • ಭರ್ತಿ ಮಾಡಿದ ಅರ್ಜಿಯ ಮುದ್ರಿತ ಪ್ರತಿ ತಲುಪಲು ಕೊನೆಯ ದಿನಾಂಕ: 05/11/2026 (ಸಂಜೆ 04:00 ಗಂಟೆಯೊಳಗೆ)   

 

ವಿದ್ಯಾರ್ಹತೆ ಮತ್ತು ಅನುಭವದ ಮಾನದಂಡಗಳು (Eligibility Criteria & Experience):

  • ಅರ್ಹತಾ ಹಿನ್ನೆಲೆ: ಭಾರತೀಯ ಸೇನಾ ಪಡೆ (Indian Army / Navy / Air Force), ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (Karnataka State Police), CAPF, CRPF, BSF, CISF ಮತ್ತು ಸಮಾನ ಸೇವೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಥವಾ ಸೇವಾ ನಿವೃತ್ತರಾದ personnel ಆಗಿರಬೇಕು.   
  • ಹುದ್ದೆಯ ಶ್ರೇಣಿ (Rank):
    ರಕ್ಷಣಾ ಸೇವೆಗಳಿಂದ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಅಥವಾ ಸಮಾನ ಶ್ರೇಣಿ.   
    ರಾಜ್ಯ ಪೊಲೀಸ್ ಇಲಾಖೆಯಿಂದ ಇನ್ಸ್‌ಪೆಕ್ಟರ್ / ಸಬ್ ಇನ್ಸ್‌ಪೆಕ್ಟರ್ / ASI ಅಥವಾ ಸಮಾನ ಶ್ರೇಣಿ.   
  • ಭಾಷಾ ಜ್ಞಾನ: ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಭಾಷೆ ತಿಳಿದಿರಬೇಕು.   

 

ವಯೋಮಿತಿ (Age Limit):

  • ಅಧಿಸೂಚನೆ ದಿನಾಂಕದಂತೆ ಗರಿಷ್ಠ ವಯೋಮಿತಿ: 62 ವರ್ಷಗಳು.   
  • ಡಿ.31, 2026 ರೊಳಗೆ ನಿವೃತ್ತರಾಗಲಿರುವ ಸೇವಾ ನಿರತ ಮಿಲಿಟರಿ ಸಿಬ್ಬಂದಿಯೂ ಕೂಡ ಅರ್ಜಿ ಸಲ್ಲಿಸಬಹುದು.   

 

 

ವೇತನ ವಿವರ (Salary & Allowances):

  • 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ: ಪ್ರತಿ ತಿಂಗಳು ರೂ. 32,950/- + ಕಂಪನಿಯ ನಿಯಮಾನುಸಾರ ಭತ್ಯೆಗಳು.   
  • 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ: ಪ್ರತಿ ತಿಂಗಳು ರೂ. 30,000/- + ಕಂಪನಿಯ ನಿಯಮಾನುಸಾರ ಭತ್ಯೆಗಳು.   

 

ಒಪ್ಪಂದದ ಅವಧಿ (Period of Contract):

  • 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ: ಆರಂಭದಲ್ಲಿ 3 ವರ್ಷಗಳ ಅವಧಿಗೆ ಒಪ್ಪಂದವಿರುತ್ತದೆ.   
  • 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ: ಆರಂಭದಲ್ಲಿ 1 ವರ್ಷದ ಅವಧಿಗೆ ಒಪ್ಪಂದವಿರುತ್ತದೆ.
    (ನಂತರ BMRCL ನ ಅಗತ್ಯತೆ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ವಿಸ್ತರಿಸಲಾಗುತ್ತದೆ).   

ಆಯ್ಕೆ ಪ್ರಕ್ರಿಯೆ (Selection Procedure):
BMRCL ನೇಮಕಾತಿ ನಿಯಮಗಳ ಪ್ರಕಾರ ಆಯ್ಕೆ ಪ್ರಕ್ರಿಯೆಯು ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:   
1. ದೈಹಿಕ ದಕ್ಷತಾ ಪರೀಕ್ಷೆ (Physical Fitness Test - PFT):
ಅಭ್ಯರ್ಥಿಗಳು ತಮ್ಮ ವಯೋಮಾನಕ್ಕೆ ತಕ್ಕಂತೆ 1.5 ಕಿ.ಮೀ ಓಟವನ್ನು 10 ನಿಮಿಷದಿಂದ 11.30 ನಿಮಿಷದೊಳಗೆ ಪೂರ್ಣಗೊಳಿಸಬೇಕು. ಬೇಗ ಮುಗಿಸುವವರಿಗೆಹೆಚ್ಚುವರಿ ಅಂಕಗಳು ಸಿಗಲಿವೆ.   
ಸರಕಾರಿ ಆಸ್ಪವತ್ರೆಯಿಂದ ಪಡೆದ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು.   
2. ಲಿಖಿತ ಪರೀಕ್ಷೆ (Written Test):
ದೈಹಿಕ ದಕ್ಷತಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಲಿಖಿತ ಪರೀಕ್ಷೆ ಇರುತ್ತದೆ.   
ಪರೀಕ್ಷೆಯು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ 1 ಗಂಟೆಯ ಅವಧಿಗೆ ಇರಲಿದ್ದು, ಪ್ರಬಂಧ ಬರವಣಿಗೆ (Essay Writing) ಮತ್ತು ಸಾಮಾನ್ಯ ಜ್ಞಾನ (General Knowledge) ಒಳಗೊಂಡಿರುತ್ತದೆ.   
3. ಸಂದರ್ಶನ (Interview).   

 

ಅರ್ಜಿ ಸಲ್ಲಿಸುವುದು ಹೇಗೆ? (How to Apply):

  •  ಅಧಿಕೃತ BMRCL ವೆಬ್‌ಸೈಟ್‌ಗೆ (www.bmrc.co.in) ಭೇಟಿ ನೀಡಿ 'Careers' ವಿಭಾಗದಲ್ಲಿ ಅಧಿಸೂಚನೆಯನ್ನು ಪರಿಶೀಲಿಸಿ.  
  •  ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.   
  •  ಆನ್‌ಲೈನ್ ಸಲ್ಲಿಕೆಯ ನಂತರ, ಕಂಪ್ಯೂಟರ್-ಜೆನೆರೇಟೆಡ್ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.   
  •  ಮುದ್ರಿತ ಅರ್ಜಿಗೆ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ಅಂಟಿಸಿ, ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ (ವಯಸ್ಸಿನ ಪ್ರಮಾಣಪತ್ರ, ವಿದ್ಯಾರ್ಹತೆ, ಅನುಭವ ಪ್ರಮಾಣಪತ್ರ, PPO ಮತ್ತು ಡಿಸ್ಚಾರ್ಜ್ ಸರ್ಟಿಫಿಕೇಟ್ ಇತ್ಯಾದಿ) ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ / ಕೊರಿಯರ್ ಮೂಲಕ ಕಳುಹಿಸಿ.   

ವಿಳಾಸ:
Dy. General Manager (HR),
Bangalore Metro Rail Corporation Limited,
III Floor, BMTC Complex, K.H. Road, Shanthinagar, Bengaluru - 560 027.
(ಲಕೋಟೆಯ ಮೇಲ್ಭಾಗದಲ್ಲಿ "APPLICATION FOR THE POST OF ASSISTANT SECURITY OFFICER" ಎಂದು ನಮೂದಿಸಬೇಕು).   

 

ಇದನ್ನು ಓದಿ: ಭಾರತೀಯ ಸೈನ್ಯದಲ್ಲಿ ಉದ್ಯೋಗ ಅವಕಾಶ: 10+2 ಟೆಕ್ನಿಕಲ್ ಎಂಟ್ರಿ ಸ್ಕೀಮ್ (TES-57) ಜುಲೈ 2027ರ ಅಧಿಸೂಚನೆ ಬಿಡುಗಡೆ

Job Overview
No. of posts
90
End Date
31 ಅಕ್ಟೋಬರ್ 2026
Pay Scale
30000 - 32950 INR
Employment Type
FULL_TIME
Organization
BMRCL (Website)
Location
Shanthinagar, Bengaluru, KA, 560027
To download official notification
Related Tags: Degree
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.