ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ | ಈ ಕುರಿತ ವಿವರ ನಿಮಗಾಗಿ

Published by: Bhagya R K
|
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ | ಈ ಕುರಿತ ವಿವರ ನಿಮಗಾಗಿ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) 2025 ನೇ ಸಾಲಿನ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಅರ್ಹತಾ ಮಾನದಂಡಗಳನ್ನು ಪೂರೈಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ :
- ಸಂಸ್ಥೆಯ ಹೆಸರು : BESCOM
- ಒಟ್ಟು ಹುದ್ದೆಗಳ ಸಂಖ್ಯೆ : 510
- ಹುದ್ದೆಯ ಹೆಸರು : ಶಿಷ್ಯವೃತ್ತಿ (Apprentice)
- ಉದ್ಯೋಗ ಸ್ಥಳ : ಬೆಂಗಳೂರು – ಕರ್ನಾಟಕ

ಹುದ್ದೆಗಳ ವಿಭಾಗ :
ಗ್ರಾಜುಯೇಟ್ ಅಪ್ರೆಂಟಿಸ್ (ಇಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್) - 130
ಪದವೀಧರ ಅಪ್ರೆಂಟಿಸ್ (ಇತರ ಎಂಜಿನಿಯರಿಂಗ್ ಶಾಖೆಗಳನ್ನು ಹೊರತುಪಡಿಸಿ) - 305
ಡಿಪ್ಲೊಮಾ ಅಪ್ರೆಂಟಿಸ್ - 75

ಅರ್ಹತಾ ಮಾನದಂಡ :
- ಸ್ನಾತಕೋತ್ತರ (ಎಂಜಿನಿಯರಿಂಗ್) : BE/B.Tech (ಇಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್)
- ಸ್ನಾತಕೋತ್ತರ (ಇತರ ವಿಭಾಗಗಳು) : BA, B.Sc, B.Com, BBA, BCA, BBM, BE, B.Tech
- ಡಿಪ್ಲೊಮಾ : ಎಲ್ಲಾ ವಿಭಾಗಗಳು

ವಯೋಮಿತಿ :
ಕನಿಷ್ಟ 18 ವರ್ಷ (BESCOM ನಿಯಮಗಳ ಪ್ರಕಾರ ವಯೋಮಿತಿಯ ಸಡಿಲಿಕೆ ಲಭ್ಯವಿದೆ)

ವೇತನ ಶ್ರೇಣಿ:
8,000/- ರೂ ಗಳಿಂದ 9,008/- ರೂ ಗಳ ವೆರೆಗೆ ಮಾಸಿಕ ವೇತನ ನಿಗದಿಪಡಿಸಲಾಗಿದೆ. 

ಅರ್ಜಿ ಶುಲ್ಕ : ಯಾವುದೇ ಶುಲ್ಕವಿಲ್ಲ

ಆಯ್ಕೆ ವಿಧಾನ:
ದಾಖಲೆ ಪರಿಶೀಲನೆ
ಸಂದರ್ಶನ

ದಾಖಲೆಗಳ ಪರಿಶೀಲನೆ ಸ್ಥಳ:
ಉಪ ಪ್ರಧಾನ ವ್ಯವಸ್ಥಾಪಕರ ಕಚೇರಿ, ಮಾನವ ಸಂಪತ್ತು ಅಭಿವೃದ್ಧಿ ಕೇಂದ್ರ, B.V. Co., ಟ್ರೀ ಪಾರ್ಕ್ ಎದುರು, BGS ವರ್ಲ್ಡ್ ಸ್ಕೂಲ್ ಹಿಂಭಾಗ, B.M. ರೋಡ್, ರಾಮನಗರ – 562159

ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 01-ಫೆಬ್ರವರಿ-2025
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 20-ಫೆಬ್ರವರಿ-2025
- ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ದಿನಾಂಕ: 01-ಮಾರ್ಚ್-2025
- ದಾಖಲೆಗಳ ಪರಿಶೀಲನೆ ದಿನಾಂಕ: 10ರಿಂದ 12ನೇ ಮಾರ್ಚ್ 2025

ಅಭ್ಯರ್ಥಿಗಳು ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಲು ಮತ್ತು BESCOM ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಭೇಟಿ ನೀಡಲು ವಿನಂತಿಸಲಾಗಿದೆ.

Job Overview
End Date
20 ಫೆಬ್ರುವರಿ 2025
Employment Type
FULL_TIME
Organization
KPSC Vaani (Website)
Location
KA,
To Download Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.