ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗ: ತಿಂಗಳಿಗೆ ₹35,000/- ಗೌರವಧನ!
ಯಾದಗಿರಿ ಜಿಲ್ಲೆಯಲ್ಲಿ ಉದ್ಯೋಗ ಅರಸುತ್ತಿರುವವರಿಗೆ ಇಲ್ಲಿದೆ ಭರ್ಜರಿ ಸುದ್ದಿ. ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯಾದಗಿರಿ ಉಪನಿರ್ದೇಶಕರ ಕಛೇರಿಯು ಹೊಸ ನೇಮಕಾತಿ ಪ್ರಕಟಣೆಯನ್ನು (Notification No: 2026-27) ಬಿಡುಗಡೆ ಮಾಡಿದೆ.
ಅಂಗನವಾಡಿ ಕೇಂದ್ರಗಳ 'ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ' ಯೋಜನೆಯಡಿ, ಯಾದಗಿರಿ ಜಿಲ್ಲೆಯಲ್ಲಿ 'ಜಿಲ್ಲಾ ಸಂಪನ್ಮೂಲ ವ್ಯಕ್ತಿ' (District Resource Person) ಹುದ್ದೆಗಳನ್ನು ತಾತ್ಕಾಲಿಕವಾಗಿ ಮತ್ತು ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
WCD ಯಾದಗಿರಿ ಹುದ್ದೆಯ ಅಧಿಸೂಚನೆ
- ಸಂಸ್ಥೆಯ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾದಗಿರಿ (ಡಬ್ಲ್ಯೂಸಿಡಿ ಯಾದಗಿರಿ)
- ಹುದ್ದೆಗಳ ಸಂಖ್ಯೆ: 2
- ಉದ್ಯೋಗ ಸ್ಥಳ: ಯಾದಗಿರಿ – ಕರ್ನಾಟಕ
- ಹುದ್ದೆಯ ಹೆಸರು: ಜಿಲ್ಲಾ ಸಂಪನ್ಮೂಲ ವ್ಯಕ್ತಿ
- ಸಂಬಳ: ತಿಂಗಳಿಗೆ ರೂ. 35,000/-
ಅರ್ಹತೆಗಳು:
- ಅಭ್ಯರ್ಥಿಯು ಎಂ.ಎ ಸಮಾಜ ಶಾಸ್ತ್ರ ಅಥವಾ ಎಮ್.ಎಸ್.ಡಬ್ಲ್ಯೂ ಉತ್ತಿರ್ಣ
- ಅಭ್ಯರ್ಥಿಗಳು ಶಾಲಾಪೂರ್ವ ಶಿಕ್ಷಣದಲ್ಲಿ ಅಥವಾ ಮಕ್ಕಳ ಕಲಿಕಾ ವಿಷಯ, ಅಥವಾ ಬೋಧನಾ ಕ್ಷೇತ್ರದಲ್ಲಿ(ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ) ಅಥವಾ ಸ್ವಯಂ ಸೇವ ಸಂಸ್ಥೆಗಳೊಳೊಂದಿಗೆ ಕನಿಷ್ಠಾ 4 ರಿಂದ 5 ವರ್ಷಗಳ ಸೇವೆ ಸಲ್ಲಿಸಿದ ಅನುಬವ ಹೊಂದಿರತಕ್ಕದ್ದು.
- ಗಣಕ ಯಂತ್ರದಲ್ಲಿ ಕನ್ನಡ ಮತ್ತು ಇಂಗ್ಲೀಷ್ ತಂತ್ರಾಂಶದಲ್ಲಿ ಕೆಲಸ ಮಾಡುವ ಹೊಂದಿರತಕ್ಕದ್ದು.
- ಜಿಲ್ಲೆಯಾದ್ಯಂತ ಕೆಲಸ ನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಕಾಲ ಕಾಲಕ್ಕೆ ಭೇಟಿ ನೀಡುವ ಆಸಕ್ತಿ ಮತ್ತು ಸದೃಢ ಮನಸ್ಥಿತಿ ಹೊಂದಿದವರಾಗಿರತಕ್ಕದ್ದು.
- ಕನ್ನಡ, ಇಂಗ್ಲಿಷ್ ಹಾಗೂ ಸ್ಥಳೀಯ ಭಾಷೆಗಳಲ್ಲಿ ಓದಲು ಬರೆಯಲು ಮತ್ತು ಮಾತನಾಡುವ ಪ್ರಬುದ್ಧತೆಯನ್ನು ಹೊಂದಿರತಕ್ಕದ್ದು.
- ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಮತ್ತು ಸಮುದಾಯದೊಂದಿಗೆ ಕಾರ್ಯನಿರ್ವಹಿಸಲು ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರತಕ್ಕದ್ದು,
- ಸದರಿ ಹುದ್ದೆಗಳು ತಾತ್ಕಾಲಿಕವಾಗಿರುವುದರಿಂದ ಯಾವುದೇ ಮುನ್ಸೂಚನೆ ನೀಡದೇ ತೆಗೆದುಹಾಕುವ ಅಧಿಕಾರವು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ ಇವರಿಗೆ ನೀಡಲಾಗಿದೆ.
ವಯೋಮಿತಿ : ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಗರಿಷ್ಠ: 50 ವರ್ಷ
ವೇತನ : ಮಾಸಿಕ ರೂ.35,000/- (ಮೂವತ್ತೈದು ಸಾವಿರ ರೂಪಾಯಿಗಳು ಮಾತ್ರ) ನಿಗದಿಪಸಾದಿಸಲಾಗಿದೆ.
ಇದನ್ನು ಓದಿ : CRPF ಬೃಹತ್ ನೇಮಕಾತಿ 2026: 10ನೇ ತರಗತಿ, PUC ಪಾಸಾದವರಿಗೆ 521 ಕಾನ್‌ಸ್ಟೇಬಲ್ & ಹೆಡ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಆಯ್ಕೆ ಪ್ರಕ್ರಿಯೆ (Selection Process):
ಅಭ್ಯರ್ಥಿಗಳ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು, ಸೇವಾನುಭವ ಹಾಗೂ ಕಂಪ್ಯೂಟರ್ ಕೌಶಲ್ಯ ಪರೀಕ್ಷೆ/ನೇರ ಸಂದರ್ಶನದ ಮೂಲಕ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಜಿಲ್ಲಾ ಸಂಪನ್ಮೂಲ ವ್ಯಕ್ತಿಯು ನಿರ್ವಹಿಸಬೇಕಾದ ಜಬ್ಬಾರಿಗಳು :
- ಜಿಲ್ಲಾ ಸಂಪನ್ಮೂಲ ಕೇಂದ್ರದ ಎಲ್ಲಾ ಯೋಜಿತ ಕಾರ್ಯಚಟುವಟಿಕೆಗಳನ್ನು ಸಮಯಾನುಸಾರ ಅನುಷ್ಠಾನಗೊಳಿಸುವುದು.
- ಜಿಲ್ಲಾ ಸಂಪನ್ಮೂಲ ಕೇಂದ್ರವನ್ನು ಚಟುವಟಿಕೆ ಆಧಾರಿತ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಸಹಕರಿಸುವುದು.
- ತಾಲೂಕ ಹಾಗೂ ವಲಯ ಮಟ್ಟದ ಸಂಪನ್ಮೂಲ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು
ಸಹಕರಿಸುವುದು. - ಮೇಲ್ವಿಚಾರಕಿಯರು(supervisor) ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ತರಬೇತಿಗಳನ್ನು ಕಾರ್ಯಯೋಜನೆ ಅನುಸಾರ ನೀಡುತ್ತಿರುವುದನ್ನು ಖಾತ್ರಿ ಪಡಿಸುವುದು ಮತ್ತು ಇದಕ್ಕಾಗಿ ಅವಶ್ಯಕ್ಕೆ ಅನುಗುಣವಾಗಿ ಕ್ಷೇತ್ರ ಭೇಟಿಮಾಡುವುದು.
- ತರಬೇತಿಯಲ್ಲಿ ತಿಳಿಸಿದಂತೆ ಅಂಗನವಾಡಿ ಕೇಂದ್ರಗಳಲ್ಲಿ ಶಾಲಾಪೂರ್ವ ಶಿಕ್ಷಣ ಚಟುವಟಿಕೆಗಳು ನಡೆಯುವುದನ್ನು ಕ್ಷೇತ್ರ ಭಟಿಯ ಮೂಲಕ ಖಾತ್ರಿ ಪಡಿಸಿಕೊಳ್ಳುವುದು.
- ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮುದಾಯಾಧಾರಿತ ಸಭೆಗಳನ್ನು ಆಯೋಜಿಸುವುದು.
- ಕಾರ್ಯಕ್ರಮದ ಸುಗಮ ಅನುಷ್ಠಾನಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮತ್ತು ತಾಲೂಕದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದು.
ಸಲ್ಲಿಸಬೇಕಾದ ದಾಖಲೆಗಳು :
1. ನಿಗದಿತ ನಮೂನೆಯಲ್ಲಿ ಅರ್ಜಿ
2. ಎಸ್.ಎಸ್.ಎಲ್.ಸಿ ಅಂಕ ಪಟ್ಟಿ
3. ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯ ಅಂಕಪಟ್ಟಿಗಳು.
4. ಅನುಭವ ಪ್ರಮಾಣ ಪತ್ರಗಳು.
5. ಕಂಪ್ಯೂಟರ್ ತರಬೇತಿ ಪಡೆದಿರುವ ಬಗ್ಗೆ ಪ್ರಮಾಣ ಪತ್ರ.
ಅರ್ಜಿ ಸಲ್ಲಿಸುವ ವಿಧಾನ (How to Apply):
- ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಯಾದಗಿರಿ ಜಿಲ್ಲಾ ಎನ್.ಐ.ಸಿ. ವೆಬ್‌ಸೈಟ್ [https://yadgir.nic.in](https://yadgir.nic.in) ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
- ಭರ್ತಿ ಮಾಡಿದ ಅರ್ಜಿಯೊಂದಿಗೆ SSLC ಅಂಕಪಟ್ಟಿ, ಸ್ನಾತಕೋತ್ತರ ಪದವಿ ಅಂಕಪಟ್ಟಿಗಳು, ಕಂಪ್ಯೂಟರ್ ಕೋರ್ಸ್ ಪ್ರಮಾಣ ಪತ್ರ, ಅನುಭವ ಪ್ರಮಾಣಪತ್ರ ಹಾಗೂ ನಿಗದಿತ ದಾಖಲೆಗಳ ಸ್ವಯಂ ದೃಢೀಕೃತ (Self-attested) ಪ್ರತಿಗಳನ್ನು ಲಗತ್ತಿಸಬೇಕು.
- ಅರ್ಜಿ ಸಲ್ಲಿಸಬೇಕಾದ ವಿಳಾಸ: ಅರ್ಜಿಯನ್ನು ಖುದ್ದಾಗಿ ಅಥವಾ ನೊಂದಾಯಿತ ಅಂಚೆ (Registered Post) ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು: ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಾದಗಿರಿ, ಕೋಣೆ ಸಂಖ್ಯೆ : ಸಿ-17, ಒಂದನೇ ಮಹಡಿ, ಜಿಲ್ಲಾ ಆಡಳಿತ ಭವನ ಸಂಕೀರ್ಣ, ಚಿತ್ತಾಪೂರ ರಸ್ತೆ, ಯಾದಗಿರಿ-585202.
- ಕೊನೆಯ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 09 ಅಕ್ಟೋಬರ್ 2026 ಆಗಿರುತ್ತದೆ. ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ : ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಾದಗಿರಿ ಕೋಣೆ ಸಂಖ್ಯೆ : ಸಿ-17, ಒಂದನೇ ಮಹಡಿ, ಜಿಲ್ಲಾ ಆಡಳಿತ ಭವನ ಸಂಕೀರ್ಣ, ಚಿತ್ತಾಪೂರ ರಸ್ತೆ, ಯಾದಗಿರಿ-585202
ಉದ್ಯೋಗಾವಕಾಶಗಳ ನಿರಂತರ ಅಪ್‌ಡೇಟ್‌ಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅತ್ಯುತ್ತಮ ಸ್ಟಡಿ ಮೆಟೀರಿಯಲ್ಸ್‌ಗಾಗಿ ತಪ್ಪದೇ KPSCVaani ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಿ. ಯಾದಗಿರಿ ಜಿಲ್ಲೆಯ ನಿಮ್ಮ ಪರಿಚಿತರೊಂದಿಗೆ ಈ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಿ!

.jpeg)