ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಸಹಾಯಕ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಸಹಾಯಕ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by Bhagya R K
19 ಏಪ್ರಿಲ್ 2025 Others

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ (VSKU) 2025ನೇ ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಮೂಲಕ ವಿಶ್ವವಿದ್ಯಾಲಯವು ಸಂಶೋಧನಾ ಸಹಾಯಕ (Research Associate) ಮತ್ತು ಫೀಲ್ಡ್ ಸಹಾಯಕ ಹಾಗೂ ಡೇಟಾ ಎಂಟ್ರಿ ಆಪರೇಟರ್ (Research Field Assistant & Data Entry Operator) ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಈ ಹುದ್ದೆಗಳು ಬಳ್ಳಾರಿ (Ballari)ಯಲ್ಲಿ ಖಾಲಿಯಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತರು 2025ರ ಏಪ್ರಿಲ್ 20ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ವಿವರಗಳು ಈ ಕೆಳಗಿನಂತಿವೆ :
ವಿಶ್ವವಿದ್ಯಾಲಯದ ಹೆಸರು : ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ (VSKU)  
ಒಟ್ಟು ಹುದ್ದೆಗಳ ಸಂಖ್ಯೆ : 02  
ಉದ್ಯೋಗ ಸ್ಥಳ : ಬಳ್ಳಾರಿ, ಕರ್ನಾಟಕ  

ಹುದ್ದೆಗಳ ವಿವರ
ಸಂಶೋಧನಾ ಸಹಾಯಕ (Research Associate) : 1     
ಫೀಲ್ಡ್ ಸಹಾಯಕ ಮತ್ತು ಡೇಟಾ ಎಂಟ್ರಿ ಆಪರೇಟರ್ : 1

ವೇತನ ಶ್ರೇಣಿ :
ಸಂಶೋಧನಾ ಸಹಾಯಕ (Research Associate) : ₹25,000/-           
ಫೀಲ್ಡ್ ಸಹಾಯಕ ಮತ್ತು ಡೇಟಾ ಎಂಟ್ರಿ ಆಪರೇಟರ್ : ₹20,000/-       

ಅರ್ಹತಾ ವಿವರಗಳು :
- ಸಂಶೋಧನಾ ಸಹಾಯಕ : ಸ್ನಾತಕೋತ್ತರ ಪದವಿ, ಎಂ.ಫಿಲ್, ಪಿಎಚ್.ಡಿ.
- ಫೀಲ್ಡ್ ಸಹಾಯಕ ಮತ್ತು ಡೇಟಾ ಎಂಟ್ರಿ ಆಪರೇಟರ್ : ಸ್ನಾತಕೋತ್ತರ ಪದವಿ

ವಯೋಮಿತಿ : ವಿಶ್ವವಿದ್ಯಾಲಯದ ನಿಯಮಾವಳಿಯ ಪ್ರಕಾರ  
ವಯೋಮಿರಿ ಸಡಿಲಿಕೆ : ನಿಯಮಾನುಸಾರ ಅವಕಾಶ ಇದೆ.

ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.

ಅರ್ಜಿಸಲು ವಿಧಾನ :
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಫಾರ್ಮ್ಯಾಟ್‌ನಲ್ಲಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳೊಂದಿಗೆ ನಿಗದಿತ ವಿಳಾಸಕ್ಕೆ ತಲುಪಿಸುವುದು ಅಗತ್ಯ.

ಅರ್ಜಿಯನ್ನು ಕಳುಹಿಸಬೇಕಾದ ವಿಳಾಸ :
 Dr. Rajendra Prasad N.L, Principal of Investigator, Department of Sociology Studies, Vijayanagar Srikrishnadevaraya University, Ballari – 583105

ಮುಖ್ಯ ದಿನಾಂಕಗಳು :
- ಅರ್ಜಿಯ ಪ್ರಾರಂಭ ದಿನಾಂಕ : 05 ಏಪ್ರಿಲ್ 2025  
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20 ಏಪ್ರಿಲ್ 2025  

ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆ ನೋಡಿ ಮತ್ತು ಅರ್ಜಿಯನ್ನು ನಿಗದಿತ ಶೈಲಿಯಲ್ಲಿ ಶೀಘ್ರದಲ್ಲಿ ಸಲ್ಲಿಸಿ.

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.