ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (UCSL)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (UCSL)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by Bhagya R K
03 ಜೂನ್ 2025 Others

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (UCSL) 2025 ನೇ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಒಟ್ಟು 06 ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಮುಖ್ಯ ಮಾಹಿತಿ :
ಸಂಸ್ಥೆ ಹೆಸರು : ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (UCSL)
ಒಟ್ಟು ಹುದ್ದೆಗಳು : 06
ಹುದ್ದೆ ಹೆಸರು : ಡೆಪ್ಯೂಟಿ ಮ್ಯಾನೇಜರ್
ಉದ್ಯೋಗ ಸ್ಥಳ : ಉಡುಪಿ – ಕರ್ನಾಟಕ

ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ ₹96,350/- ರೂ ಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ. 

ಹುದ್ದೆಗಳ ವಿವರ :
ಡೆಪ್ಯೂಟಿ ಮ್ಯಾನೇಜರ್ (ಪ್ಲಾನಿಂಗ್) : 1               
ಡೆಪ್ಯೂಟಿ ಮ್ಯಾನೇಜರ್ (ಎಲೆಕ್ಟ್ರಿಕಲ್)  : 1               
ಡೆಪ್ಯೂಟಿ ಮ್ಯಾನೇಜರ್ (ಮೆಷಿನರಿ & ಪೈಪಿಂಗ್) : 1               
ಡೆಪ್ಯೂಟಿ ಮ್ಯಾನೇಜರ್ (ಮೆಕಾನಿಕಲ್) :  1   
ಉಪ ವ್ಯವಸ್ಥಾಪಕರು (ಮಾನವ ಸಂಪನ್ಮೂಲ) : 1           
ಡೆಪ್ಯೂಟಿ ಮ್ಯಾನೇಜರ್ (ಐಟಿ)    : 1               

ಶೈಕ್ಷಣಿಕ ಅರ್ಹತೆ :
ಪ್ಲಾನಿಂಗ್/ಮೆಕಾನಿಕಲ್/ಮೆಷಿನರಿ & ಪೈಪಿಂಗ್ : ಮೆಕಾನಿಕಲ್ ಎಂಜಿನಿಯರಿಂಗ್ ಪದವಿ
ಎಲೆಕ್ಟ್ರಿಕಲ್ : ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ
ಮಾನವ ಸಂಪತ್ತು : MBA ಅಥವಾ ಬಿಸಿನೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಸ್ನಾತಕೋತ್ತರ ಪದವಿ
ಐಟಿ : ಕಂಪ್ಯೂಟರ್ ಎಂಜಿನಿಯರಿಂಗ್/ಸೈನ್ಸ್/ಐಟಿಯಲ್ಲಿ ಪದವಿ ಅಥವಾ MCA/ಪಿಜಿ ಪದವಿ

ವಯೋಮಿತಿ (23-ಜೂನ್-2025ರಂತೆ) :
ಅಭ್ಯರ್ಥಿಗಳು ಗರಿಷ್ಠ ವಯಸ್ಸು 40 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ :
OBC (NCL) : 3 ವರ್ಷ ರಿಯಾಯಿತಿ
SC : 5 ವರ್ಷ ರಿಯಾಯಿತಿ
PwBD : 10 ವರ್ಷ ರಿಯಾಯಿತಿ

ಅರ್ಜಿ ಶುಲ್ಕ :
SC/ST/PwBD ಅಭ್ಯರ್ಥಿಗಳು : ಶುಲ್ಕ ಇಲ್ಲ
ಇತರ ಎಲ್ಲಾ ಅಭ್ಯರ್ಥಿಗಳು : ₹1000/-
ಪಾವತಿ ವಿಧಾನ : ಆನ್ಲೈನ್

ಆಯ್ಕೆ ವಿಧಾನ :
1. ಸಂಬಂಧಿತ ಕ್ಷೇತ್ರದಲ್ಲಿ ಕಾರ್ಯಾನುಭವ
2. ಕಾರ್ಯಾನುಭವದ ಕುರಿತು PowerPoint ಪ್ರಸ್ತುತಿ
3. ಗುಂಪು ಚರ್ಚೆ
4. ವೈಯಕ್ತಿಕ ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ :
1. UCSL ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣ ಓದಿ.
2. ಅಗತ್ಯ ದಾಖಲೆಗಳು, ಇಮೇಲ್, ಮೊಬೈಲ್ ಸಂಖ್ಯೆ ಸಿದ್ಧವಿರಲಿ.
3. UCSL ಆನ್‌ಲೈನ್ ಅರ್ಜಿ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ.
4. ಎಲ್ಲಾ ವಿವರಗಳನ್ನು ಸರಿಯಾಗಿ ತುಂಬಿ, ದಾಖಲಾತಿಗಳ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿ.
5. ಶುಲ್ಕ ಪಾವತಿಸಿ (ಅವಶ್ಯಕವಿದ್ದರೆ).
6. ಅರ್ಜಿ ಸಲ್ಲಿಸಿ ಮತ್ತು ಅರ್ಜಿ ಸಂಖ್ಯೆ ಸಂಗ್ರಹಿಸಿಕೊಳ್ಳಿ.

ಪ್ರಮುಖ ದಿನಾಂಕಗಳು :
ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ : 02-ಜೂನ್-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23-ಜೂನ್-2025

ಸರ್ಕಾರಿ ಉದ್ಯೋಗವನ್ನು ಕನಸು ಕಾಣುತ್ತಿರುವ ತಾಂತ್ರಿಕ ಹಾಗೂ ನಿರ್ವಹಣಾ ಕ್ಷೇತ್ರದ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಹೆಚ್ಚಿನ ಮಾಹಿತಿಗೆ UCSL ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.