ಕರ್ನಾಟಕ ಲೋಕಸೇವಾ ಆಯೋಗದಿಂದ ಗೆಜೆಟೆಡ್ ಪ್ರೊಬೇಷನರ್ಸ್ 1998ನೇ ಸಾಲಿನ ಹುದ್ದೆಗಳ ಪರಿಷ್ಕೃತ ಆಯ್ಕೆಪಟ್ಟಿ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗದಿಂದ  ಗೆಜೆಟೆಡ್ ಪ್ರೊಬೇಷನರ್ಸ್ 1998ನೇ ಸಾಲಿನ ಹುದ್ದೆಗಳ ಪರಿಷ್ಕೃತ ಆಯ್ಕೆಪಟ್ಟಿ ಪ್ರಕಟ
Published by Sanju Shirol
30 ಜನವರಿ 2021 KPSC
ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚನೆ ದಿನಾಂಕ:09-03-1998ರಲ್ಲಿ ಅಧಿಸೂಚಿಸಲಾದ ಗೆಜೆಟೆಡ್ ಪ್ರೊಬೇಷನರ್ಸ್ 1998ನೇ ಸಾಲಿನ 383 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ:28-02-2006ರಂದು ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಿದ್ದು, ತದನಂತರ ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಪಿಟಿಷನ್ ದಿನಾಂಕ:21-06-2016ರಲ್ಲಿನ 2ನೇ ನಿರ್ದೇಶನದನ್ವಯ ದಿನಾಂಕ:25 -01-2019ರಂದು ಸರದಿ ಅಂತಿಮ ಆಯ್ಕೆಪಟ್ಟಿಯನ್ನು ಪರಿಷ್ಕೃತಗೊಳಿಸಲಾಗಿ 3ನೇ ನಿರ್ದೇಶನದನ್ವಯ ದಿನಾಂಕ:22-08-2019ರಂದು ಸರದಿ ಆಯ್ಕೆಪಟ್ಟಿಯನ್ನು ಮರುಪರಿಷ್ಕೃತಗೊಳಿಸಿ ಪ್ರಕಟಿಸಲಾಗಿತ್ತು.
ಪ್ರಸ್ತುತ ಕೆಲವು ಅಭ್ಯರ್ಥಿಗಳು ಆಯೋಗವು ಪ್ರಕಟಿಸಿದೆ ದಿನಾಂಕ:22-08-2019ರ ಆಯ್ಕೆಪಟ್ಟಿಯ ವಿರುದ್ಧ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸಲಾಗಿ, ಸರದಿ ಅರ್ಜಿಗಳಲ್ಲಿನ ದಿನಾಂಕ:04-12-2020 ಮಾನ್ಯ ಉಚ್ಚ ನ್ಯಾಯಾಲಯದ ಆದೇಶದನ್ವಯ ಆಯೋಗವು ರಿಟ್ ಪಿಟಿಷನ್ ಮಾನ್ಯ ಉಚ್ಚ ನ್ಯಾಯಾಲಯದ ದಿನಾಂಕ:21-06-2016ರ 3ನೇ ನಿರ್ದೇಶನದನ್ವಯ ದಿನಾಂಕ:30-01-2021ರಂದು ಪರಿಷ್ಕೃತ ಆಯ್ಕೆಪಟ್ಟಿಯನ್ನು ಆಯೋಗದ ವೆಬ್ ಸೈಟ್ ನಲ್ಲಿ  ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಇಲಾಖೆ ಪ್ರಕಟಿಸಿದ ಅಂತಿಮ ಪಟ್ಟಿಯನ್ನು ವೀಕ್ಷಿಸಬಹುದಾಗಿದೆ. 
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.