ಭಾರತೀಯ ಉಕ್ಕು ಪ್ರಾಧಿಕಾರ(SAIL) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಭಾರತೀಯ ಉಕ್ಕು ಪ್ರಾಧಿಕಾರ(SAIL) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by Yallamma G
22 ಏಪ್ರಿಲ್ 2025 Others

ಭಾರತೀಯ ಸರ್ಕಾರಿ ಸ್ವಾಮ್ಯದ ಉಕ್ಕು ತಯಾರಿಕಾ ಸಂಸ್ಥೆಯಾದ ಭಾರತೀಯ ಉಕ್ಕು ಪ್ರಾಧಿಕಾರ (SAIL) ವು 24 ಜನವರಿ 1974 ರಂದು ಸ್ಥಾಪಿಸಲಾದ ಸಾರ್ವಜನಿಕ ವಲಯದ ಉದ್ಯಮವಾಗಿದೆ. SAIL ಪ್ರಸ್ತುತ ವಿಶ್ವದ 20 ನೇ ಅತಿದೊಡ್ಡ ಉಕ್ಕು ಉತ್ಪಾದಕ ಮತ್ತು ಭಾರತದಲ್ಲಿ ಅತಿದೊಡ್ಡ ಕಂಪನಿಯಾಗಿದೆ. ಪ್ರಸ್ತುತ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ನಲ್ಲಿ ಖಾಲಿ ಇರುವ 12 ಆಡಿಯೊಮೆಟ್ರಿಸ್ಟ್, ಫಿಸಿಯೋಥೆರಪಿಸ್ಟ್, ಫಾರ್ಮಸಿಸ್ಟ್, X-Ray ಟೆಕ್ನಿಷಿಯನ್ ಮತ್ತು ಡೆಂಟಲ್ ಹೈಜಿನಿಸ್ಟ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ  ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದಾಗಿರುತ್ತದೆ.

ಹುದ್ದೆಗಳ ವಿವರ : 12 
ಎಕ್ಸ್-ರೇ ಟೆಕ್ನಿಷಿಯನ್ : 1
ಫಾರ್ಮಾಸಿಸ್ಟ್ : 5
ಪಲ್ಮನರಿ ಫಂಕ್ಷನ್ ಟೆಸ್ಟ್ ಟೆಕ್ನಿಷಿಯನ್ : 1
ಡೆಂಟಲ್ ಹೈಜಿನಿಸ್ಟ್ : 1
ಡೆಂಟಲ್ ಅಸಿಸ್ಟೆಂಟ್/ಡೆಂಟಲ್ ಓಪರೇಟಿಂಗ್ ರೂಮ್ ಅಸಿಸ್ಟೆಂಟ್ : 1
ಫಿಸಿಯೋಥೆರಪಿಸ್ಟ್ : 1
ಆಡಿಯೋಮೆಟ್ರಿಸ್ಟ್ : 1
ಕ್ರಿಟಿಕಲ್ ಕೇರ್ ಟೆಕ್ನಿಷಿಯನ್ : 1

ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಅಥವಾ ಡಿಪ್ಲೊಮಾ ಪೂರೈಸಿರಬೇಕು.

ವಯೋಮಿತಿ:
ಗರಿಷ್ಠ ವಯಸ್ಸು: 35 ವರ್ಷ (2025 ಏಪ್ರಿಲ್ 19ರಂತೆ)
OBC ಅಭ್ಯರ್ಥಿಗಳಿಗೆ: 3 ವರ್ಷಗಳ ವಯೋಮಿತಿ ಸಡಿಲಿಕೆ​

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ:
ವಾಕ್-ಇನ್ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಮಾಸಿಕ ವೇತನ : 
ಎಕ್ಸ್-ರೇ ಟೆಕ್ನಿಷಿಯನ್ : ₹17,020/-
ಫಾರ್ಮಾಸಿಸ್ಟ್ : ₹17,020/-
ಪಲ್ಮನರಿ ಫಂಕ್ಷನ್ ಟೆಸ್ಟ್ ಟೆಕ್ನಿಷಿಯನ್ : ₹17,020/-
ಡೆಂಟಲ್ ಹೈಜಿನಿಸ್ಟ್ : 17,020/-
ಡೆಂಟಲ್ ಅಸಿಸ್ಟೆಂಟ್/ಡೆಂಟಲ್ ಓಪರೇಟಿಂಗ್ ರೂಮ್ ಅಸಿಸ್ಟೆಂಟ್ : ₹17,020/-
ಫಿಸಿಯೋಥೆರಪಿಸ್ಟ್ : ₹17,020/-
ಆಡಿಯೋಮೆಟ್ರಿಸ್ಟ್ : ₹17,020/-
ಕ್ರಿಟಿಕಲ್ ಕೇರ್ ಟೆಕ್ನಿಷಿಯನ್ : ₹25,000/-

ವಾಕ್-ಇನ್ ಸಂದರ್ಶನದ ವಿವರ :
ದಿನಾಂಕ: 2025 ಮೇ 5
ಸ್ಥಳ: ಕಾನ್‌ಫ್ಲುಯೆನ್ಸ್, SAIL-ISP, ಪೋಸ್ಟ್ ಆಫೀಸ್ ಎದುರು, ಪಿ.ಓ. ಬರ್ನ್‌ಪುರ್ -713325, ಪಶ್ಚಿಮ ಬರ್ಡಮಾನ, ಪಶ್ಚಿಮ ಬಂಗಾಳ.

- ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಅಧಿಕೃತ ಅಧಿಸೂಚನೆಯನ್ನು ಇಲ್ಲಿ ಓದಿ.

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.