NWKRTC ದರ್ಜೆ-2 ವಿವಿಧ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ!ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಯಲ್ಲಿನ ದರ್ಜೆ-2ರ ವಿವಿಧ ವೃಂದದ ಅಧಿಕಾರಿ ಹುದ್ದೆಗಳ ನೇರ ಹಾಗೂ ಆಂತರಿಕ ನೇಮಕಾತಿಗೆ ಸಂಬಂಧಿಸಿದಂತೆ ಅತ್ಯುತ್ತಮ ಸುದ್ದಿಯೊಂದು ಬಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಹೊರಡಿಸಿದ್ದ ಅಧಿಸೂಚನೆ ಸಂಖ್ಯೆ: ಇಡಿ/ಕೆಇಎ/ಆಡಳಿತ/ಸಿ.ಆರ್.27/2024-45 (ಆರ್‌ಪಿಸಿ) ದಿನಾಂಕ 19-11-2025 ರನ್ವಯ, ಇದೀಗ ಅಧಿಕೃತ ತಾತ್ಕಾಲಿಕ ಆಯ್ಕೆಪಟ್ಟಿಯನ್ನು (Provisional Selection List) ಕಟ್-ಆಫ್ ಅಂಕಗಳೊಂದಿಗೆ ಪ್ರಕಟಿಸಲಾಗಿದೆ.
ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಥವಾ ಹುಬ್ಬಳ್ಳಿಯ ಕೇಂದ್ರ ಕಛೇರಿಯ ಸೂಚನಾ ಫಲಕದಲ್ಲಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದಾಗಿದೆ. ಈ ನೇಮಕಾತಿಯ ಸಂಪೂರ್ಣ ಕಟ್-ಆಫ್ ವಿವರ ಹಾಗೂ ಆಕ್ಷೇಪಣೆ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಕೆಳಗೆ ಸವಿಸ್ತಾರವಾಗಿ ನೀಡಲಾಗಿದೆ.
ತಾತ್ಕಾಲಿಕ ಆಯ್ಕೆಪಟ್ಟಿ, ಕಟ್ ಆಫ್ ಅಂಕಗಗಳನ್ನೂ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗಳ ವಿವರ :
1. ನೇರ ನೇಮಕಾತಿ (Direct Recruitment)
- ಸಹಾಯಕ ಆಡಳಿತಾಧಿಕಾರಿ
- ಸಹಾಯಕ ಲೆಕ್ಕಾಧಿಕಾರಿ
- ಸಹಾಯಕ ಕಾನೂನು ಅಧಿಕಾರಿ
- ಸಹಾಯಕ ಕಾರ್ಮಿಕ & ಕಲ್ಯಾಣಾಧಿಕಾರಿ
- ಸಹಾಯಕ ತಾಂತ್ರಿಕ ಶಿಲ್ಪಿ
- ಸಹಾಯಕ ಸಂಚಾರ ವ್ಯವಸ್ಥಾಪಕರು
ಸಹಾಯಕ ಸಂಚಾರ ವ್ಯವಸ್ಥಾಪಕರು
ಆಕ್ಷೇಪಣೆ ಸಲ್ಲಿಕೆ ಪ್ರಕ್ರಿಯೆ ಹೇಗೆ?ಪ್ರಕಟಿತ ತಾತ್ಕಾಲಿಕ ಆಯ್ಕೆಪಟ್ಟಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಆಕ್ಷೇಪಣೆಗಳಿದ್ದಲ್ಲಿ, ಅವುಗಳನ್ನು ಅಧಿಕೃತವಾಗಿ ಸಲ್ಲಿಸಲು ಮುಕ್ತ ಅವಕಾಶ ನೀಡಲಾಗಿದೆ. ಆಕ್ಷೇಪಣೆ ಸಲ್ಲಿಸುವಾಗ ಕೆಳಗಿನ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:
- ಕೊನೆಯ ದಿನಾಂಕ: ಆಕ್ಷೇಪಣೆಗಳನ್ನು ಸಲ್ಲಿಸಲು 20-06-2026 ರ ಸಾಯಂಕಾಲ 05:30 ಗಂಟೆಯವರೆಗೆ ಮಾತ್ರ ಕಾಲಾವಕಾಶವಿರುತ್ತದೆ. ನಿಗದಿತ ಸಮಯದ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
- ಸಲ್ಲಿಕೆ ವಿಧಾನ: ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಅಧಿಕೃತ ವೆಬ್‌ಸೈಟ್ (https://nwkrtc.karnataka.gov.in) ನಲ್ಲಿ ಸಲ್ಲಿಸಬಹುದು. ಅಥವಾ ಅಗತ್ಯ ಸಮರ್ಥನೀಯ ದಾಖಲಾತಿಗಳೊಂದಿಗೆ ಲಿಖಿತ ರೂಪದಲ್ಲಿ ಖುದ್ದಾಗಿ ಸಲ್ಲಿಸಲು ಅವಕಾಶವಿದೆ.
- ವಿಳಾಸ: ಲಿಖಿತ ರೂಪದಲ್ಲಿ ಸಲ್ಲಿಸುವವರು "ಅಧ್ಯಕ್ಷರು, ಆಯ್ಕೆ ಸಮಿತಿ, ವಾಕರಸಾ ಸಂಸ್ಥೆ, ಗೋಕುಲ ರಸ್ತೆ, ಹುಬ್ಬಳ್ಳಿ" ಇವರಿಗೆ ತಲುಪಿಸಬೇಕು.
- ಪ್ರಮುಖ ಸೂಚನೆ: ಆಕ್ಷೇಪಣೆ ಸಲ್ಲಿಸುವಾಗ ಅದಕ್ಕೆ ಪೂರಕವಾದ ಮತ್ತು ನಿಮ್ಮ ವಾದವನ್ನು ಸಮರ್ಥಿಸುವ ಅಧಿಕೃತ ದಾಖಲಾತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.
ಆಯ್ಕೆಪಟ್ಟಿ ವೀಕ್ಷಿಸುವುದು ಹೇಗೆ?
- ಮೊದಲಿಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಆದ https://nwkrtc.karnataka.gov.in ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಕಂಡುಬರುವ 'ನೇಮಕಾತಿ' (Recruitment) ವಿಭಾಗದ ಮೇಲೆ ಕ್ಲಿಕ್ ಮಾಡಿ.
- "ದರ್ಜೆ-2 ವಿವಿಧ ವೃಂದದ ಅಧಿಕಾರಿ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ" ಲಿಂಕ್ ಅನ್ನು ಆಯ್ಕೆ ಮಾಡಿ ಪಿಡಿಎಫ್ ಡೌನ್‌ಲೋಡ್ ಮಾಡಿಕೊಳ್ಳಿ.
- ನಿಮ್ಮ ಹೆಸರು ಮತ್ತು ರಿಜಿಸ್ಟರ್ ನಂಬರ್ ಅನ್ನು ಕಟ್-ಆಫ್ ಅಂಕಗಳೊಂದಿಗೆ ತಾಳೆ ನೋಡಿ ಪರಿಶೀಲಿಸಿಕೊಳ್ಳಿ.
ತಾತ್ಕಾಲಿಕ ಆಯ್ಕೆ ಪಟ್ಟಿಯು ಈ ಕೆಳಕಾಣಿಸಿದ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.
1 ಆಯ್ಕೆ ಪಟ್ಟಿಯಲ್ಲಿ ಕೇವಲ ಹೆಸರು ಇದ್ದ ಮಾತ್ರಕ್ಕೆ ನೇಮಕಾತಿಗೆ ಅಥವಾ ಆಯ್ಕೆಗೆ ಯಾವುದೇ ವಿಧವಾದ ಹಕ್ಕನ್ನು ಹೊಂದಿರುವುದಿಲ್ಲ.
2 ಅಭ್ಯರ್ಥಿಗಳು ಸಲ್ಲಿಸಿರುವ ದಾಖಲೆಗಳಾದ ಶೈಕ್ಷಣಿಕ ವಿದ್ಯಾರ್ಹತೆ, ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಇನ್ನಿತರ ದಾಖಲಾತಿಗಳು ಸಂಬಂಧಿಸಿದ ಪ್ರಾಧಿಕಾರಗಳಿಂದ ಪರಿಶೀಲನಾ ವರದಿ ಮತ್ತು ಪೂರ್ವೋತ್ತರ ನಡತೆಯ ತನಿಖಾ ವರದಿಗೆ ಒಳಪಟ್ಟಿರುತ್ತದೆ.
3 ಆಯ್ಕೆ ಹೊಂದಿದ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ / ತತ್ಸಮಾನ ವಿದ್ಯಾರ್ಹತೆಯಲ್ಲಿ ಕನ್ನಡ ವಿಷಯವನ್ನು ಪ್ರಥಮ ಅಥವಾ ದ್ವೀತಿಯ ಭಾಷೆಯನ್ನಾಗಿ ವ್ಯಾಸಂಗ ಮಾಡದ ಅಭ್ಯರ್ಥಿಗಳು ನೇಮಕಾತಿ ಪೂರ್ವದಲ್ಲಿ ನೇಮಕಾತಿ ನಿಯಮಾವಳಿ 4(8) ರನ್ವಯ ಸಂಸ್ಥೆಯ ವತಿಯಿಂದ ನಡೆಸುವ ಕನ್ನಡ ಭಾಷಾ ಜ್ಞಾನ ಪರೀಕ್ಷೆಯಲ್ಲಿ ಒಂದೇ ಬಾರಿಗೆ ಉತ್ತೀರ್ಣರಾಗಬೇಕಾಗಿರುತ್ತದೆ. ಇಲ್ಲದಿದ್ದಲ್ಲಿ ಅವರು ಆಯ್ಕೆಯ ಹಕ್ಕನ್ನು ಕಳೆದುಕೊಳ್ಳುತ್ತಾರೆ.
4 ಮೇಲ್ಕಂಡ ಅಭ್ಯರ್ಥಿಗಳು ಸುಳ್ಳು ಮಾಹಿತಿ ನೀಡಿ ಅಥವಾ ನಕಲಿ ಪ್ರಮಾಣ ಪತ್ರ / ದಾಖಲಾತಿಗಳನ್ನು ಸಲ್ಲಿಸಿ ನೇಮಕಾತಿ ಹೊಂದಿರುವುದು ಕಂಡುಬಂದಲ್ಲಿ ನೇಮಕಾತಿ ಹಕ್ಕನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ಅಂತಹವರ ವಿರುದ್ಧ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು.
5 ಆಯ್ಕೆ/ನೇಮಕಾತಿಗೆ ಸಂಬಂಧಿಸಿದಂತೆ ಸಂಸ್ಥೆ ತೆಗೆದುಕೊಳ್ಳುವ ನಿರ್ಧಾರಗಳು ಅಂತಿಮವಾಗಿರುತ್ತದೆ.
6 ಈ ನೇಮಕಾತಿಯು ಮಾನ್ಯ ಉಚ್ಚ ನ್ಯಾಯಾಲಯ ಬೆಂಗಳೂರನಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂಖ್ಯೆ 200448/2025, 17968/2025 ಮತ್ತು 3145/2023 ರಲ್ಲಿ ದಿನಾಂಕ 27-11-2025 ರಂದು ನೀಡಿರುವ ಮಧ್ಯಂತರ ಆದೇಶದ ಮೇರೆಗೆ ಮಾಡಲಾಗಿದ್ದು, ಕಾರಣ ಸದರಿ ಆಯ್ಕೆಯು ಮಾನ್ಯ ನ್ಯಾಯಾಲಯದ ಅಂತಿಮ ಆದೇಶಕ್ಕೊಳಪಟ್ಟಿರುತ್ತದೆ.
ನಿಮ್ಮ ಸರ್ಕಾರಿ ಉದ್ಯೋಗದ ಕನಸನ್ನು ನನಸಾಗಿಸಲು, ತಕ್ಷಣ 'KPSCVaani' ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಿ.
Comments