ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by Bhagya R K
17 ಜೂನ್ 2025 Others

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (NABARD) 2025ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ಮೂಲಕ ಅಖಿಲ ಭಾರತ ಮಟ್ಟದಲ್ಲಿ ವಿವಿಧ ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ವಿವರಗಳು :
ವಿಭಾಗದ ಹೆಸರು : ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್)
ಒಟ್ಟು ಹುದ್ದೆಗಳ ಸಂಖ್ಯೆ : 05
ಹುದ್ದೆಗಳ ಹೆಸರು : ಡೇಟಾ ಎಂಜಿನಿಯರ್, ಡೇಟಾ ಸೈಂಟಿಸ್ಟ್, ಬಿಐ ಡೆವಲಪರ್, ತಜ್ಞರು
ಉದ್ಯೋಗ ಸ್ಥಳ : ಅಖಿಲ ಭಾರತ
ಅಪ್ಲಿಕೇಶನ್ ಮೋಡ್ : ಆನ್ಲೈನ್

ಹುದ್ದೆಗಳ ವಿವರಗಳು :
ಡೇಟಾ ಸೈಂಟಿಸ್ಟ್/ಎಐ ಎಂಜಿನಿಯರ್ : 02              
ಡೇಟಾ ಎಂಜಿನಿಯರ್   : 01              
ಡೇಟಾ ಸೈಂಟಿಸ್ಟ್-ಕಮ್-ಬಿಐ ಡೆವಲಪರ್ : 01              
ತಜ್ಞರು – ಡೇಟಾ ನಿರ್ವಹಣೆ (SME)  : 01              

ವಯೋಮಿತಿ :
ಕನಿಷ್ಠ: 25 ವರ್ಷ
ಗರಿಷ್ಠ: 40 ವರ್ಷ
  (ವಯೋಮಿತಿಯಲ್ಲಿ ಶ್ರೇಣಿಗಳಿಗೆ ಅನುಗುಣವಾಗಿ ಸಡಿಲಿಕೆ ನೀಡಲಾಗುತ್ತದೆ)

ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.Tech / BE, ME / M.Tech ಅಥವಾ MCA ಪದವಿಯನ್ನು ಪೂರ್ಣಗೊಳಿಸಿರಬೇಕು.

ಆಯ್ಕೆ ವಿಧಾನ :
* ಲಿಖಿತ ಪರೀಕ್ಷೆ ಅಥವಾ ಇಂಟರ್ವ್ಯೂ
* ದಾಖಲೆ ಪರಿಶೀಲನೆ
* ಅಂತಿಮ ಆಯ್ಕೆ ಪಟ್ಟಿ

ಅರ್ಜಿ ಸಲ್ಲಿಸುವ ವಿಧಾನ :
1. ನಬಾರ್ಡ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
2. ಅಧಿಸೂಚನೆಯನ್ನು ಓದಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
3. ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಿ.
4. ಅಗತ್ಯ ದಾಖಲೆಗಳು ಮತ್ತು ಫೋಟೋ ಲಗತ್ತಿಸಿ.
5. ಅರ್ಜಿ ಶುಲ್ಕ ಪಾವತಿ (ಅಧಿಸೂಚನೆಯಲ್ಲಿ ನಮೂದಿಸಿದಂತೆ).
6. ಸಲ್ಲಿಸಿದ ಅರ್ಜಿ ನಕಲನ್ನು ಭದ್ರವಾಗಿ ಇಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು :
ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ : 16-ಜೂನ್-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-ಜೂನ್-2025

ಸೂಚನೆ : ಅಭ್ಯರ್ಥಿಗಳು ಅಧಿಕೃತ ನಬಾರ್ಡ್ ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದು ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಹುದ್ದೆ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. 

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.