ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಭಾರತದಲ್ಲಿಯೇ ಮೊದಲ ಬಾರಿಗೆ 'ಕೃತ್ಯ ಸ್ಥಳ ಪರಿಶೀಲನಾಧಿಕಾರಿ' (Scene of Crime Officers) ಹುದ್ದೆಯನ್ನು ಸೃಷ್ಟಿಸಿದೆ.
ಈ ಅಧಿಕಾರಿಗಳು ಅಪರಾಧ ಕೃತ್ಯ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಸೂಕ್ಷ್ಮಾತಿಸೂಕ್ಷ್ಮ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಅಪರಾಧವನ್ನು ಪತ್ತೆ ಮಾಡಲು ಈ ವಿಶೇಷ ಅಧಿಕಾರಿಗಳು ನೆರವಾಗುವರು. ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಹುದ್ದೆಯನ್ನು ಅಪರಾಧ ಕೃತ್ಯಗಳ ತನಿಖೆಗಾಗಿ ಸೃಷ್ಟಿ ಮಾಡಲಾಗಿದೆ.
ಇನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪ್ರಥಮ ಹಂತದಲ್ಲಿ ಒಟ್ಟು 206 ಜನ ನುರಿತ ಅಧಿಕಾರಿಗಳ ಹುದ್ದೆಗಳನ್ನು ಮಂಜೂರು ಮಾಡಿದ್ದಾರೆ. ಇನ್ನು ಶೀಘ್ರದಲ್ಲಿಯೇ ಈ ಹುದ್ದೆಗಳಿಗೆ ನೇಮಕಾತಿ ನಡೆಯುವ ಸಾಧ್ಯತೆಯಿದ್ದು, ಪೊಲೀಸ್ ಇಲಾಖೆ ಸೇರಬಯಸುವ ಸ್ಪರ್ಧಾರ್ಥಿಗಳಿಗೆ ಇಂದೊಂದು ಸುವರ್ಣಾವಕಾಶವಾಗಿದ್ದು, ಈ ಹುದ್ದೆಗಳ ಕುರಿತ ಸವಿವರವಾದ ಮಾಹಿತಿಯನ್ನು ಶೀಘ್ರದಲ್ಲೇ KPSC Vaani ಜಾಲತಾಣದಲ್ಲಿ ಪ್ರಕಟಿಸಲಾಗುವದು ನಿರೀಕ್ಷಿಸಿ
Mdaafaq Mdaafaq
26 ಜುಲೈ 2021, 07:11 ಪೂರ್ವಾಹ್ನPolice
Arathi Devakule
17 ಜುಲೈ 2021, 06:29 ಪೂರ್ವಾಹ್ನCash on delivery options madi
Gowda Manjunatha S
16 ಜುಲೈ 2021, 10:11 ಅಪರಾಹ್ನSuperb
A. Veeresha A.Veeresha
14 ಜುಲೈ 2021, 08:28 ಪೂರ್ವಾಹ್ನ👌
Pradeepa S
13 ಜುಲೈ 2021, 10:51 ಅಪರಾಹ್ನವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 206 ವೈಜ್ಞಾನಿಕ ಅಧಿಕಾರಿಗಳ ನೇಮಕಾತಿ ಆದೇಶವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಹಸ್ತಾಂತರಿಸಿದರು. ಎಲ್ಲರನ್ನೂ ಸಮಾರಂಭದಲ್ಲೇ ಇಲಾಖೆಗೆ ಬರ ಮಾಡಿಕೊಳ್ಳಲಾಯಿತು
ಬಳಿಕ ಮಾತನಾಡಿದ ಯಡಿಯೂರಪ್ಪ, 'ಅಪರಾಧ ಪ್ರಕರಣಗಳ ತನಿಖೆಯಲ್ಲಿ ವೈಜ್ಞಾನಿಕ ವಿಧಾನದ ಮೂಲಕ ಸ್ಥಳ ತನಿಖೆ ನಡೆಸುವುದಕ್ಕಾಗಿ ಈ ಅಧಿಕಾರಿಗಳನ್ನು ನೇಮಿಸಲಾಗಿದೆ. 206 ಜನರಿಗೂ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ತರಬೇತಿ ನೀಡಲಾಗಿದೆ. ಎಲ್ಲ ಜಿಲ್ಲೆಗಳಿಗೂ ಈ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುವುದು' ಎಂದರು
Pradeepa S
13 ಜುಲೈ 2021, 10:50 ಅಪರಾಹ್ನsir pls read below
ಅಪರಾಧ ಕೃತ್ಯಗಳು ನಡೆದ ಸ್ಥಳಗಳಲ್ಲಿ ವೈಜ್ಞಾನಿಕವಾಗಿ ಸಾಕ್ಷ್ಯ ಸಂಗ್ರಹಿಸುವುದಕ್ಕಾಗಿ ನೇಮಕಗೊಂಡಿರುವ 206 ವೈಜ್ಞಾನಿಕ ಅಧಿಕಾರಿಗಳು ರಾಜ್ಯ ಪೊಲೀಸ್ ಇಲಾಖೆಗೆ ಮಂಗಳವಾರ ಸೇರ್ಪಡೆಯಾದರು ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 206 ವೈಜ್ಞಾನಿಕ ಅಧಿಕಾರಿಗಳ ನೇಮಕಾತಿ ಆದೇಶವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಹಸ್ತಾಂತರಿಸಿದರು. ಎಲ್ಲರನ್ನೂ ಸಮಾರಂಭದಲ್ಲೇ ಇಲಾಖೆಗೆ ಬರ ಮಾಡಿಕೊಳ್ಳಲಾಯಿತು
Naveen Kumar K.M Navi
13 ಜುಲೈ 2021, 09:18 ಅಪರಾಹ್ನ👏👏👏👏👌❤️
Satish Talawar
13 ಜುಲೈ 2021, 09:17 ಅಪರಾಹ್ನhope it to be for criminology in forensic science students
Dhanshekar Jm
13 ಜುಲೈ 2021, 09:14 ಅಪರಾಹ್ನFor this job what is the qualifications please inform sir
Ram Kumar Naik Ram
13 ಜುಲೈ 2021, 08:55 ಅಪರಾಹ್ನQualification
Abhishek B K
13 ಜುಲೈ 2021, 08:55 ಅಪರಾಹ್ನVery helpful
Vinod Pattar
13 ಜುಲೈ 2021, 06:46 ಅಪರಾಹ್ನHope it be for science background students
Sahana Gn
13 ಜುಲೈ 2021, 05:51 ಅಪರಾಹ್ನExcellent new step