ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL)ದಿಂದ ಕಿರಿಯ ಸಹಾಯಕ ಮತ್ತು JE ನೇಮಕಾತಿ ಕುರಿತ ಮಾಹಿತಿ ನಿಮಗಾಗಿ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL)ದಿಂದ ಕಿರಿಯ ಸಹಾಯಕ ಮತ್ತು JE ನೇಮಕಾತಿ ಕುರಿತ ಮಾಹಿತಿ ನಿಮಗಾಗಿ
Published by Yallamma G
13 ಫೆಬ್ರವರಿ 2024 KPTCL-Karnataka Power Transmission Corporation

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಖಾಲಿ ಇರುವ 486 ಕಿರಿಯ ಇಂಜಿನಿಯರ್(JE), ಮತ್ತು ಕಿರಿಯ ಸಹಾಯಕ(JA) ಹುದ್ದೆಗಳ ನೇಮಕಾತಿಗಾಗಿ 2022ರಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು, ನೇಮಕಾತಿಯ ನಂತರದ ಹಂತವಾದ  ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಸದರಿ KPTCL ನಲ್ಲಿನ ಕಿರಿಯ ಸಹಾಯಕ (Junior Assistant) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Non HK ವೃಂದದ 2A ಅಂಗವಿಕಲ ಕೋಟಾದಲ್ಲಿ ಅಭ್ಯರ್ಥಿಗಳ ಕೊರತೆ ಇರುವುದರಿಂದ ಇನ್ನೂ ಹೆಚ್ಚುವರಿ ಅಭ್ಯರ್ಥಿಗಳ Document Verification ಮಾಡಬೇಕಿರುತ್ತದೆ, ಅರ್ಹ ಹೆಚ್ಚುವರಿ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಿದ್ದು, ಇದರಲ್ಲಿರುವ ಅಭ್ಯರ್ಥಿಗಳು 2024 ಫೆಬ್ರವರಿ-14 ರಂದು ದಾಖಲಾತಿ ಪರಿಶೀಲನೆಗೆ (Document Verification) ಹಾಜರಾಗುವಂತೆ ಸೂಚಿಸಿ, KPTCL ಅಧಿಕೃತ ಪ್ರಕಟಣೆ ಹೊರಡಿಸಿದೆ. 
ದಾಖಲಾತಿ ಪರಿಶೀಲನೆ ನಡೆಯುವ ಸ್ಥಳ :
ಸಿಬ್ಬಂದಿ ಶಾಖೆ. ಕವಿಪ್ರನಿನಿ, ಆಡಳಿತ ಕಚೇರಿ, ಒಂದನೇ ಮಹಡಿ, ಕವಿಪ್ರನಿನಿ ಕಾವೇರಿ ಭವನ, ಬೆಂಗಳೂರು-560009

* KPTCL ದಲ್ಲಿನ ಮಿಕ್ಕುಳಿದ ವೃಂದದ 486 JE (Electrical) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ KPTCL ಇದೀಗ ಪ್ರಕಟಿಸಲಾಗಿದೆ.
- ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ KPTCL ಜಾಲತಾಣಕ್ಕೆ ಭೇಟಿ ನೀಡಿ ಅಂತಿಮ ಆಯ್ಕೆಪಟ್ಟಿ ಮತ್ತು ದಾಖಲಾತಿ ಪರಿಶೀಲನೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ವೀಕ್ಷಿಸಬಹುದಾಗಿರುತ್ತದೆ.

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.