KPSC ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: ಪಶುವೈದ್ಯಾಧಿಕಾರಿ ಪರೀಕ್ಷೆಯಲ್ಲಿ 'ಬಂಪರ್ Grace Marks'! ಪರಿಷ್ಕೃತ ಕೀ ಉತ್ತರ ಪ್ರಕಟ

KPSC ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: ಪಶುವೈದ್ಯಾಧಿಕಾರಿ ಪರೀಕ್ಷೆಯಲ್ಲಿ 'ಬಂಪರ್ Grace Marks'! ಪರಿಷ್ಕೃತ ಕೀ ಉತ್ತರ ಪ್ರಕಟ
Published by Yallamma G
03 ಫೆಬ್ರವರಿ 2026 KPSC
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿನ ಪಶುವೈದ್ಯಾಧಿಕಾರಿ (Veterinary Officers) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದನ್ನು ಪ್ರಕಟಿಸಿದೆ. 2026ರ ಜನವರಿ ತಿಂಗಳಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ 'ಪರಿಷ್ಕೃತ ಕೀ-ಉತ್ತರಗಳನ್ನು' (Revised Key Answers) ಆಯೋಗದ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ.

ನೀವು ಈ ಪರೀಕ್ಷೆಯನ್ನು ಬರೆದಿದ್ದರೆ, ನಿಮ್ಮ ಅಂಕಗಳನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಲು ಇದು ಸಕಾಲ. ಎಷ್ಟೋ ಪ್ರಶ್ನೆಗಳಿಗೆ 'ಕೃಪಾಂಕ' (Grace Marks) ನೀಡಲಗಿದೆ, ಇದು ಕಟ್-ಆಫ್ ಅಂಕಗಳ ಮೇಲೆ ದೊಡ್ಡ ಮಟ್ಟದ ಬದಲಾವಣೆ ತರಬಹುದು.

ನೇಮಕಾತಿ ಮತ್ತು ಪರೀಕ್ಷೆಯ ಸಂಕ್ಷಿಪ್ತ ವಿವರ

ಇಲಾಖೆ: ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ.

ಹುದ್ದೆಯ ಹೆಸರು: ಪಶುವೈದ್ಯಾಧಿಕಾರಿಗಳು (ಉಳಿಕೆ ಮೂಲ ವೃಂದ).

ಒಟ್ಟು ಹುದ್ದೆಗಳು: 400 (342 + 58 ಬ್ಯಾಕ್ ಲಾಗ್).

ಪರೀಕ್ಷೆ ನಡೆದ ದಿನಾಂಕ: 09-01-2026.

ತಾತ್ಕಾಲಿಕ ಕೀ ಉತ್ತರ ಪ್ರಕಟವಾಗಿದ್ದ ದಿನಾಂಕ: 13-01-2026.

ಪರಿಷ್ಕೃತ ಕೀ ಉತ್ತರ ಪ್ರಕಟವಾದ ದಿನಾಂಕ: 02-02-2026.

ಪರಿಷ್ಕೃತ ಕೀ-ಉತ್ತರಗಳಲ್ಲಿನ ಪ್ರಮುಖ ಬದಲಾವಣೆಗಳು
ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ, ತಜ್ಞರ ಸಮಿತಿಯು ಅಂತಿಮವಾಗಿ ಉತ್ತರಗಳನ್ನು ಪರಿಷ್ಕರಿಸಿದೆ. ಹಲವಾರು ಪ್ರಶ್ನೆಗಳಿಗೆ ಕೃಪಾಂಕ (Grace Marks) ನೀಡಲಾಗಿರುವುದು ವಿಶೇಷವಾಗಿದೆ.

1. ಸಾಮಾನ್ಯ ಪತ್ರಿಕೆ (Paper-1) - ವಿಷಯ ಸಂಕೇತ 669: ಈ ಪತ್ರಿಕೆಯಲ್ಲಿ ಒಟ್ಟು 5 ಪ್ರಶ್ನೆಗಳಿಗೆ ಎಲ್ಲರಿಗೂ ಅಂಕ (Grace Marks) ಸಿಗಲಿದೆ. ವಿವರ ಈ ಕೆಳಗಿನಂತಿದೆ:



2. ನಿರ್ದಿಷ್ಟ ಪತ್ರಿಕೆ (Paper-2) - ವಿಷಯ ಸಂಕೇತ 670: ಪಶುವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದ ಈ ಪತ್ರಿಕೆಯಲ್ಲೂ ಹಲವು ಬದಲಾವಣೆಗಳಾಗಿವೆ. ಈ ಪತ್ರಿಕೆಯಲ್ಲಿ ಒಟ್ಟು 5 ಪ್ರಶ್ನೆಗಳಿಗೆ ಎಲ್ಲರಿಗೂ ಅಂಕ (Grace Marks) ಸಿಗಲಿದೆ. 



ಅಭ್ಯರ್ಥಿಗಳ ಗಮನಕ್ಕೆ
ಕೆಪಿಎಸ್‌ಸಿಯು ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿರುವಂತೆ, ಈ ಪರಿಷ್ಕೃತ ಕೀ-ಉತ್ತರಗಳೇ ಅಂತಿಮವಾಗಿರುತ್ತವೆ. ಇವುಗಳನ್ನು ಪ್ರಕಟಿಸಿದ ನಂತರ, ಇವುಗಳಿಗೆ ಸಂಬಂಧಿಸಿದಂತೆ ಸಲ್ಲಿಸುವ ಯಾವುದೇ ಮನವಿ ಅಥವಾ ಆಕ್ಷೇಪಣೆಗಳನ್ನು ಆಯೋಗವು ಪರಿಗಣಿಸುವುದಿಲ್ಲ.

ಫಲಿತಾಂಶ ಯಾವಾಗ?
ಇದೀಗ ಅಂತಿಮ ಕೀ-ಉತ್ತರಗಳು ಪ್ರಕಟವಾಗಿರುವುದರಿಂದ, ಮೌಲ್ಯಮಾಪನ ಕಾರ್ಯ ತ್ವರಿತಗತಿಯಲ್ಲಿ ನಡೆಯಲಿದ್ದು, ಸದ್ಯದಲ್ಲೇ ಪಶುವೈದ್ಯಾಧಿಕಾರಿ ಹುದ್ದೆಗಳ ಆಯ್ಕೆಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ.

ಹೆಚ್ಚಿನ ಮಾಹಿತಿಗಾಗಿ: ಕೆಪಿಎಸ್‌ಸಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಥವಾ KPSC Vaani ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

KPSCvaani ಯಿಂದ ಉಪಯುಕ್ತವಾದ ಪ್ರತಿ ದಿನದ ಪ್ರಚಲಿತ ಘಟನೆಗಳಿಗಾಗಿ ಕೂಡಲೇ ಇಲ್ಲಿ ಕ್ಲಿಕ್ ಮಾಡಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.