KPSCಯಿಂದ ವಿವಿಧ ಹುದ್ದೆಗಳ ಲಿಖಿತ ಪರೀಕ್ಷೆಯ ಪರಿಷ್ಕೃತ ಕೀ ಉತ್ತರಗಳು ಇದೀಗ ಪ್ರಕಟ | ಈ ಕುರಿತ ಮಾಹಿತಿ ನಿಮಗಾಗಿ

KPSCಯಿಂದ ವಿವಿಧ ಹುದ್ದೆಗಳ ಲಿಖಿತ ಪರೀಕ್ಷೆಯ ಪರಿಷ್ಕೃತ ಕೀ ಉತ್ತರಗಳು ಇದೀಗ ಪ್ರಕಟ | ಈ ಕುರಿತ ಮಾಹಿತಿ ನಿಮಗಾಗಿ
Published by Yallamma G
20 ಜೂನ್ 2025 KPSC

13-03-2024ರಲ್ಲಿ ಅಧಿಸೂಚಿಸಲಾದ ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ದಿನಾಂಕ:23-02-2025ರಂದು ನಡೆಸಿದ ಸಾಮಾನ್ಯ ಪತ್ರಿಕೆ (ಪತ್ರಿಕೆ-1) (ವಿಷಯ ಸಂಕೇತ-619), ದಿನಾಂಕ:02-03-2025ರಂದು ನಡೆಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರು/ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹುದ್ದೆಗಳ ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2) (ವಿಷಯ ಸಂಕೇತ-620), ದಿನಾಂಕ:04-03-2025ರಂದು ನಡೆಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸಹಾಯಕ ಇಂಜಿನಿಯ‌ರ್ (ಸಿವಿಲ್)(ವಿಭಾಗ-1) ಹುದ್ದೆಯ ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2) (ವಿಷಯ ಸಂಕೇತ-621). ದಿನಾಂಕ:06-03-2025ರಂದು ನಡೆಸಿದ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿನ ಭೂದಾಖಲೆಗಳ ಸಹಾಯಕ ನಿರ್ದೇಶಕರು ಹುದ್ದೆಯ ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2) (ವಿಷಯ ಸಂಕೇತ-622), ದಿನಾಂಕ: 08-03-2025 ರಂದು ನಡೆಸಿದ ಕಾರ್ಖಾನೆ. ಬಾಯ್ಸರ್ಸ್ ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿನ ಕಾರ್ಖಾನೆಗಳ ಸಹಾಯಕ ನಿರ್ದೇಶಕರು ಹುದ್ದೆಯ ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2) (ವಿಷಯ ಸಂಕೇತ-623), ದಿನಾಂಕ: 10-03-2025 ರಂದು ನಡೆಸಿದ ಅಂತರ್ಜಲ ನಿರ್ದೇಶನಾಲಯದಲ್ಲಿನ ಭೂ ವಿಜ್ಞಾನಿ ಹುದ್ದೆಯ ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2) (ವಿಷಯ ಸಂಕೇತ-624) ಮತ್ತು ದಿನಾಂಕ: 12-03-2025 ರಂದು ನಡೆಸಿದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಸಹಾಯಕ ನಿರ್ದೇಶಕರು ಹುದ್ದೆಯ ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2) (ವಿಷಯ ಸಂಕೇತ-625)ರ ಕೀ-ಉತ್ತರಗಳನ್ನು ದಿನಾಂಕ: 19-05-2025ರಂದು ಪ್ರಕಟಿಸಿ, ಅಭ್ಯರ್ಥಿಗಳು ಕೀ-ಉತ್ತರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ: 26-05-2025 ರವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು.

ಅದರಂತೆ, ಅಭ್ಯರ್ಥಿಗಳಿಂದ ಸ್ವೀಕೃತಗೊಂಡ ಆಕ್ಷೇಪಣೆಗಳನ್ನು ಪರಿಶೀಲಿಸಲಾಗಿ, ಮೇಲ್ಕಂಡ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಅಂತಿಮವಾಗಿ ಪರಿಷ್ಕೃತಗೊಳಿಸಿರುವ ಕೀ-ಉತ್ತರಗಳನ್ನು KPSCಯು ಇದೀಗ ಬಿಡುಗಡೆ ಮಾಡಿದೆ.

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.